ವಿಜ್ಞಾನ-ತಂತ್ರಜ್ಞಾನ

ಟ್ವಿಟರ್ ನಲ್ಲಿ 'ಪಿಸ್ತೂಲ್' ಇಮೋಜಿ ಬದಲು 'ವಾಟರ್ ಗನ್'

Sumana Upadhyaya

ಸಾನ್ ಫ್ಲಾನ್ಸಿಸ್ಕೊ; ಗನ್ ಸಂಸ್ಕೃತಿಗೆ ಇತಿಶ್ರೀ ಹಾಡಲು ನಿರ್ಧರಿಸಿರುವ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ತನ್ನ ಪಿಸ್ತೂಲ್ ಇಮೊಜಿಯಿಂದ ವಾಟರ್ ಗನ್ ಗೆ ಬದಲಾಯಿಸಿದೆ.

ಆಪಲ್ ಕಂಪೆನಿ ತನ್ನ ಐಒಎಸ್ 10 ಅಪ್ ಡೇಟ್ ನಲ್ಲಿ ಇಂತಹದ್ದೇ ಇಮೊಜಿಯನ್ನು ಆರಂಭಿಸಿದ್ದನ್ನು ಟ್ವಿಟ್ಟರ್ ಕೂಡ ಅನುಸರಿಸಿದೆ.

ಟ್ವಿಟ್ಟರ್ ಬದಲಾಯಿಸಿರುವ ಇಮೊಜಿಗೆ ಟ್ವೆಮೊಜಿ 2.6 ಎಂದು ಹೆಸರಿಡಲಾಗಿದೆ ಎಂದು ಟೆಕ್ ಕ್ರಂಚ್ ವರದಿ ಮಾಡಿದೆ.

ಇಮೊಜಿಯ ಈ ಬದಲಾವಣೆಯಿಂದ ಟ್ವಿಟ್ಟರ್ ಗೆ ನಿಂದನೆ, ದ್ವೇಷ ಮಾತುಗಳು ಮತ್ತು ಕಿರುಕುಳಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಆನ್ ಲೈನ್ ನಿಂದನೆ ಮಾಡಿ ಟ್ರೋಲ್ ಮಾಡುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಪಿಸ್ತೂಲ್ ಬದಲಾಗಿ ಮಕ್ಕಳ ಆಟಿಕೆಯಾದ ವಾಟರ್ ಗನ್ ನ ಇಮೊಜಿಯನ್ನು ಮೊದಲು ಆಪಲ್ ಕಂಪೆನಿ ಬಳಸಿತ್ತು, ಇದೀಗ ಟ್ವಿಟ್ಟರ್ ಕೂಡ ಗನ್ ಸಂಸ್ಕೃತಿಗೆ ಇತಿಶ್ರೀ ಹಾಡಲು ಮುಂದಾಗಿದೆ.

ಮೊಬೈಲ್ ನಲ್ಲಿ ಸಂದೇಶ ಕಳುಹಿಸುವಾಗ ಪಿಸ್ತೂಲ್ ಚಿಹ್ನೆಯನ್ನು ಬಳಸಬಾರದು. ಅದಕ್ಕಾಗಿ ಅದನ್ನು ಬದಲಿಸಲು ಟ್ವಿಟ್ಟರ್ ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.

ಸ್ಯಾಮ್ ಸಂಗ್ ಮತ್ತು ವಾಟ್ಸಾಪ್ ಈಗಾಗಲೇ ಪಿಸ್ತೂಲ್ ಇಮೊಜಿಯನ್ನು ತೆಗೆದು ವಾಟರ್ ಗನ್ ನ್ನು ಬಳಸುತ್ತಿದೆ.

SCROLL FOR NEXT