ನೋಕಿಯಾ 7 ಪ್ಲಸ್, ನೋಕಿಯಾ 8 ಸಿರೊಕ್ಕಾಗೆ ಪ್ರೀ ಬುಕ್ಕಿಂಗ್‌ ಆರಂಭ 
ವಿಜ್ಞಾನ-ತಂತ್ರಜ್ಞಾನ

ನೋಕಿಯಾ 7 ಪ್ಲಸ್, ನೋಕಿಯಾ 8 ಸಿರೊಕ್ಕಾಗೆ ಪ್ರೀ ಬುಕ್ಕಿಂಗ್‌ ಆರಂಭ: ಗ್ರಾಹಕರಿಗೆ ಸಿಗುವ ಸೌಲಭ್ಯವೇನು ಗೊತ್ತೇ?

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ನೋಕಿಯಾ 8 ಸಿರೊಕ್ಕಾ, ನೋಕಿಯಾ 7 ಪ್ಲಸ್ ಮೊಬೈಲ್ ಫೋನ್ ಗಳಿಗೆ ಭಾರತದಲ್ಲಿ ಪ್ರೀ ಬುಕ್ಕಿಂಗ್ ಆರಂಭವಾಗಿದೆ.

ನವದೆಹಲಿ: ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ನೋಕಿಯಾ 8 ಸಿರೊಕ್ಕಾ, ನೋಕಿಯಾ 7 ಪ್ಲಸ್ ಮೊಬೈಲ್ ಫೋನ್ ಗಳಿಗೆ ಭಾರತದಲ್ಲಿ ಪ್ರೀ ಬುಕ್ಕಿಂಗ್ ಆರಂಭವಾಗಿದೆ.
ನೋಕಿಯಾ 7 ಪ್ಲಸ್ ಬೆಲೆ 25,999 ರೂಪಾಯಿಗಳಾಗಿದ್ದರೆ ನೋಕಿಯಾ8 ಸಿರೊಕ್ಕಾ 49.999 ರೂಗಳಲ್ಲಿ ಲಭ್ಯವಿದೆ. ಈ ಎರಡೂ ಮಾದರಿಯ ಫೋನ್ ಗಳ ಮಾರಾಟ ಏ.30 ರಿಂದ ಪ್ರಾರಂಭವಾಗಲಿದ್ದು,  ನೋಕಿಯಾ 7 ಪ್ಲಸ್ ನೋಕಿಯಾ.ಕಾಮ್ ಹಾಗೂ ಅಮೇಜಾನ್ ನಲ್ಲಿ ಲಭ್ಯವಿದ್ದು, ನೋಕಿಯಾ 8 ಸಿರೊಕ್ಕಾ ನೋಕಿಯಾ.ಕಾಮ್ ಹಾಗೂ ಪ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. 
ನೋಕಿಯಾ ಮೊಬೈಲ್ ಫೋನ್ ಗಳನ್ನು ಉತ್ಪಾದಿಸುವ ಹೆಚ್ ಎಂ ಡಿ ಗ್ಲೋಬಲ್ ತಯಾರಕ ಸಂಸ್ಥೆ, ನೋಕಿಯಾ 6, ನೋಕಿಯಾ 8 ಸಿರೊಕ್ಕಾ, ನೋಕಿಯಾ 7 ಪ್ಲಸ್ ಮೊಬೈಲ್ ಫೋನ್ ಗಳನ್ನು 2018 ರಲ್ಲಿ ಬಿಡುಗಡೆ ಮಾಡಿತ್ತು. 16,999 ರ ಬೆಲೆಯಲ್ಲಿ ನೋಕಿಯಾ 6 ಫೋನ್ ಲಭ್ಯವಿದ್ದು, ಫೆಬ್ರವರಿಯಲ್ಲಿ ನಡೆದಿದ್ದ ವರ್ಲ್ಡ್ ಕಾಂಗ್ರೆಸ್  ನಲ್ಲಿ ಪ್ರದರ್ಶನಗೊಂಡಿತ್ತು. 
ಆಫರ್ ಏನೇನು ಗೊತ್ತೇ?
  • ನೋಕಿಯಾ ಸಂಸ್ಥೆ ನೋಕಿಯಾ 8 ಸಿರೊಕ್ಕಾ, ನೋಕಿಯಾ 7 ಪ್ಲಸ್ ಖರೀದಿಸುವವರಿಗೆ ಆಕರ್ಷಕ ಲಾಂಚ್ ಆಫರ್ ಗಳನ್ನು ನೀಡಿದ್ದು ಆಫರ್ ಗಳಮಾಹಿತಿ ಹೀಗಿವೆ 
  • ಐಸಿಐಸಿಐ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬಳಕೆ ಮಾಡಿದರೆ ಶೇ.10 ರಷ್ಟು ಕ್ಯಾಶ್ ಬ್ಯಾಕ್ 
  • ಏರ್ ಟೆಲ್ 4 ಜಿ ಯಿಂದ ಹೆಚ್ಚುವರಿ 120 ಜಿಬಿ ಡಾಟಾ 
  • 2018 ರ ಡಿಸೆಂಬರ್ 31 ರವರೆಗೆ ಏರ್ ಟೆಲ್ ಟಿವಿ ಉಚಿತ  
  • 12 ತಿಂಗಳ ವರೆಗೆ ಅಪಘಾತ ಹಾನಿಯಾದರೆ ವಿಮೆ ಸೌಲಭ್ಯ 
  • ಮೇಕ್ ಮೈ ಟ್ರಿಪ್ ನಲ್ಲಿ ಶೇ.25 ರಷ್ಟು ರಿಯಾಯಿತಿ
ನೋಕಿಯಾ 8 ಸಿರೊಕ್ಕಾ ವಿಶೇಷತೆಗಳು 
  • ನೋಕಿಯಾ 8 ಸಿರೊಕ್ಕಾದಲ್ಲಿ ಆಕರ್ಷಕ ವಿಶೇಷತೆಗಳಿದ್ದು "ಡ್ಯುಯಲ್-ಸೈಟ್", ಸ್ಪೇಷಿಯಲ್ ಆಡಿಯೋ, ZEISS ಆಪ್ಟಿಕ್ಸ್ ಮತ್ತು ಅಕೌಸ್ಟಿಕ್ಸ್ ಆಯ್ಕೆಗಳು ಲಭ್ಯವಿದೆ. 
  • ಸ್ಟೇನ್ಲೆಸ್ ಸ್ಟೀಲ್ ಫ್ರೇಮ್ 
  • OLED 2K 5.5- ಇಂಚ್ ಡಿಸ್ಪ್ಲೆ 
  • 2x  ಆಪ್ಟಿಕಲ್ ಜೂಮ್ ನೊಂದಿಗೆ 13MP ಸೆಸಾರ್, ಪ್ರೋ ಕ್ಯಾಮರಾ ಮೋಡಿ  
  • 3,800 ಎಂಎಎಹ್ ಬ್ಯಾಟರಿ 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಸಭೆಯಲ್ಲಿ 'ವಂದೇ ಮಾತರಂ' ಚರ್ಚೆ: ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ ಚರ್ಚೆಯ ಅಗತ್ಯವೇನಿತ್ತು? ಪ್ರಿಯಾಂಕಾ ಗಾಂಧಿ, ಯಾದವ್ ತೀವ್ರ ಕಿಡಿ!

ಬೀದರ್: 'ಹಿಂದೂ' ಎನ್ನುವುದು ಧರ್ಮವೇ ಅಲ್ಲ, ಅದೊಂದು ಕೆಟ್ಟ ಬೈಗುಳ; ನಿವೃತ್ತ ನ್ಯಾಯಮೂರ್ತಿ

'ಇತಿಹಾಸ ತಿರುಚಲು' ಪ್ರಧಾನಿ ಮೋದಿ ಯತ್ನ; ನೆಹರೂ ಪರಂಪರೆ ಅಳಿಸಲು ಬಿಜೆಪಿಗೆ ಸಾಧ್ಯವಿಲ್ಲ: ಗೌರವ್ ಗೊಗೊಯ್

ಇಂದು 500 Indigo ವಿಮಾನ ಹಾರಾಟ ರದ್ದು: ನಾವು ಹಗುರವಾಗಿ ಪರಿಗಣಿಸಲ್ಲ... ಇಂಡಿಗೋ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸಚಿವರ ಎಚ್ಚರಿಕೆ!

ಮಹಾರಾಷ್ಟ್ರ: ಫಡ್ನವೀಸ್ ಜೊತೆ ಆಪ್ತರಾಗಿರುವ ಮಹಾಯುತಿ ಮಿತ್ರಪಕ್ಷದ 22 ಶಾಸಕರು ಪಕ್ಷ ತೊರೆಯಲು ಸಜ್ಜು- ಆದಿತ್ಯ ಠಾಕ್ರೆ!

SCROLL FOR NEXT