ಶ್ರೀಹರಿಕೋಟಾ: ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿರುವ ಜಿಸ್ಯಾಟ್-7ಎ ಉಪಗ್ರಹವನ್ನು ಇಸ್ರೋ ಡಿ.19 ರಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.
4.10ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದ್ದು, ವಾಯುಪಡೆಯ ಸಂಪರ್ಕ ಹಾಗೂ ಸಂವಹನ ಸಾಮರ್ಥ್ಯಗಳನ್ನು ಈ ಉಪಗ್ರಹದ ಸಹಾಯದಿಂದ ಮತ್ತಷ್ಟು ಪರಿಣಮಾಕಾರಿಯಾಗಿಸಬಹುದಾಗಿದೆ.
ದೇಶದ 35ನೇ ಸಂವಹನ ಉಪಗ್ರಹ ಇದಾಗಿದ್ದು, 2,250 ಕೆ.ಜಿ ತೂಕ ಹೊಂದಿದ್ದು ಜಿಎಸ್ ಎಲ್ ವಿ-ಎಫ್ 11 ರಾಕೆಟ್ ಮೂಲಕ ಭೂಸ್ಥಿರ ಕಕ್ಷೆಗೆ ಸೇರಿಸಲಾಗಿದೆ. 8 ವರ್ಷಗಳ ಕಾಲ ಕಾರ್ಯನಿರ್ವಹಿಸಲಿರುವ ಈ ಉಪಗ್ರಹ ಭಾರತೀಯ ಭೂ ಪ್ರದೇಶದಲ್ಲಿ ಗ್ರಾಹಕರಿಗೆ ಕ್ಯು-ಬ್ಯಾಂಡ್ ಸೇವೆಯನ್ನು ಕಲ್ಪಿಸುವಲ್ಲಿ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.
ರೇಡಾರ್ ಸ್ಟೇಷನ್ಸ್ ಗಳ, ಏರ್ ಬೊರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಏರ್ ಕ್ರಾಫ್ಟ್ ಮತ್ತು ವಾಯುನೆಲೆಗಳ ಮಧ್ಯೆ ಸುಧಾರಿತ ಸಂಪರ್ಕ ಜಾಲ ಒದಗಿಸಲು ಉಪಗ್ರಹ ಉಡಾವಣೆ ಸೇನೆಗೆ ಸಹಕಾರಿಯಾಗಲಿದೆ.