ಅಂಧರಿಗೆ ಸ್ಮಾರ್ಟ್ ಸ್ಟಿಕ್, ಬಹು ಉಪಯೋಗಿ ರೋಬೋಟ್: ಬೆಂಗಳೂರಿನ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಾಧನೆ 
ವಿಜ್ಞಾನ-ತಂತ್ರಜ್ಞಾನ

ಅಂಧರಿಗೆ ಸ್ಮಾರ್ಟ್ ಸ್ಟಿಕ್, ಬಹು ಉಪಯೋಗಿ ರೋಬೋಟ್: ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

ವಿವಿಧ ವಿಭಾಗಗಳಿಗೆ ಸಹಕಾರಿಯಾಗುವಂತಹ ರೋಬೋಟ್ ನ್ನು ಬೆಂಗಳೂರಿನ ಸಪ್ತಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ನ ವಿದ್ಯಾರ್ಥಿಗಳು ತಯಾರಿಸಿದ್ದಾರೆ.

ಬೆಂಗಳೂರು: ಸೇನಾ ರಹಸ್ಯ ಕಾರ್ಯಾಚರಣೆ, ಪರಮಾಣು ವಿದ್ಯುತ್ ಸ್ಥಾವರ,  ರಕ್ಷಣಾ ಕಾರ್ಯಾಚರಣೆ ಹೀಗೆ ವಿವಿಧ ವಿಭಾಗಗಳಿಗೆ ಸಹಕಾರಿಯಾಗುವಂತಹ ರೋಬೋಟ್ ನ್ನು ಬೆಂಗಳೂರಿನ ಸಪ್ತಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ನ ವಿದ್ಯಾರ್ಥಿಗಳು ತಯಾರಿಸಿದ್ದಾರೆ. 
6 ಕಾಲುಗಳುಳ್ಳ ಸ್ಪೈಡರ್ ಆಕಾರದ ಈ ರೋಬೋಟ್ ನ್ನು ಇಂಟರ್ ನೆಟ್ ಸಂಪರ್ಕ ಹೊಂದಿರುವ ಮೊಬೈಲ್ ಮೂಲಕ ವಿಶ್ವದ ಯಾವುದೆ ಭಾಗದಿಂದ ನಿಯಂತ್ರಣ ಮಾಡಬಹುದಾಗಿದೆ. ಇದಷ್ಟೇ ಅಲ್ಲದೇ 360 ಡಿಗ್ರಿ ಚಲಿಸಬಲ್ಲ ಕ್ಯಾಮರಾ, ತಾಪಮಾನ ಸೆನ್ಸರ್ ಗಳನ್ನು ಹೊಂದಿವೆ. 
"ಸಂವಹನ ನಡೆಸುವುದಕ್ಕಾಗಿ ಮೈಕ್ ವ್ಯವಸ್ಥೆಯನ್ನೂ ಹೊಂದಿರುವ ಈ ರೊಬೋಟ್ ರಕ್ಷಣಾ ಕಾರ್ಯಾಚರಣೆಗಳಲ್ಲಿ ನೆರವಾಗಲು ಯೋಗ್ಯವಾಗಿದ್ದು ಆರ್ಡ್ನಿನೋ ಸಂವೇದಕದ ಮೂಲಕ ಮಾರ್ಗದಲ್ಲಿ ಎದುರಾಗುವ ಅಡಚಣೆಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ, ಮಾರ್ಗ ಬದಲಾವಣೆ ಮಾಡುವ ವ್ಯವಸ್ಥೆಯನ್ನೂ ಹೊಂದಿದೆ" ಎನ್ನುತ್ತಾರೆ  ರೊಬೋಟ್ ನ ಅನ್ವೇಷಕ ತಂಡದ ವಿದ್ಯಾರ್ಥಿ ಅನುದೀಪ್ ಮೆಡಿಸೆಟ್ಟಿ.
ಎರಡು ಭಿನ್ನ ವೇಗಗಳಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಯಂತ್ರವನ್ನು ಪರಮಾಣು ವಿದ್ಯುತ್ ಸ್ಥಾವರಗಳಲ್ಲಿಯೂ ಬಳಕೆ ಮಾಡಬಹುದಾಗಿದೆ.  ರೋಬೋಟ್ ನ ಮಾದರಿಯ ಆವೃತ್ತಿಗೆ ಸುಮಾರು 25,000 ರೂಪಾಯಿ ಬೆಲೆ ಇದ್ದು,  ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆಯಾದರೆ ಬೆಲೆ ಇಳಿಕೆಯಾಗುತ್ತದೆ ಎನ್ನುತ್ತಾರೆ ಇದನ್ನು ಕಂಡುಹಿಡಿದಿರುವ ವಿದ್ಯಾರ್ಥಿಗಳು. 
ಕೀಟಗಳ ಚಲನೆಗಳಿಂದ ಪ್ರೇರಿತವಾಗಿ ಈ ರೋಬೋಟ್ ನ್ನು ತಯಾರಿಸಲಾಗಿದೆ, ಸೇನಾ ರಹಸ್ಯ ಕಾರ್ಯಾಚರಣೆ, ಪರಮಾಣು ವಿದ್ಯುತ್ ಸ್ಥಾವರ,  ರಕ್ಷಣಾ ಕಾರ್ಯಾಚರಣೆ, ಗಣಿಗಾರಿಕೆ ಹೀಗೆ ವಿವಿಧ ವಿಭಾಗಗಳಲ್ಲಿ ಬಳಕೆ ಮಾಡಬಹುದಾಗಿದೆ ಎನ್ನುತ್ತಾರೆ ಕಾಲೇಜಿನ ರವಿಶಂಕರ್,  ಬಹು ಉಪಯೋಗಿ ರೊಬೋಟ್ ನ್ನು ಅರವಿಂದ್ ವಲ್ಸಾಲಾನ್, ಹರ್ಷ ಎಮ್ ಎನ್, ಅನುದೀಪ್ ಮೆಡಿಸೆಟ್ಟಿ ಮತ್ತು ದೀಪಕ್ ಕುಮಾರ್ ತಯಾರಿಸಿದ್ದಾರೆ. 
ದೃಷ್ಟಿ ದೋಷ ಹೊಂದಿರುವವರಿಗೆ ಸ್ಮಾರ್ಟ್ ಸ್ಟಿಕ್ 
ಇದೇ ವೇಳೆ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜ್ ನ ಯುವಕರು ದೃಷ್ಟಿ ದೋಷ ಹೊಂದಿರುವವರಿಗೆ ಸಹಕಾರಿಯಾಗುವ, ಕೇವಲ 500 ರೂಪಾಯಿಗಳಿಗೆ ಲಭ್ಯವಾಗುವ ಸ್ಮಾರ್ಟ್ ಸ್ಟಿಕ್ ನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸ್ಮಾರ್ಟ್ ಸ್ಟಿಕ್ ರಸ್ತೆ ಮಧ್ಯೆ ಇರುವ ಅಡಚಣೆಗಳನ್ನು ಗುರುತಿಸಿ ನೀರಿರುವುದನ್ನೂ ಗ್ರಹಿಸಿ ಗುರುತಿಸುವ ಸಾಮರ್ಥ್ಯ ಹೊಂದಿದೆ. 
ಅಲ್ಟ್ರಾಸೋನಿಕ್ ಸೆನ್ಸರ್ ಗಳಿರುವ ಈ ಸ್ಮಾರ್ಟ್ ಸ್ಟಿಕ್, ಅಲ್ಟ್ರಾಸೋನಿಕ್ ತರಂಗಗಳ ಸಹಾಯದಿಂದ ವ್ಯಕ್ತಿಯ ಮೊಣಕಾಲಿನಿಂದ ಕೆಳಗೆ ರಸ್ತೆಯಲ್ಲಿ ಎದುರಾಗುವ ಅಡಚಣೆಗಳನ್ನು ಪತ್ತೆಮಾಡುತ್ತದೆ. ನೀರು ಪತ್ತೆಯಾದಾಗ ಹಾಗೂ ಬೇರೆ ವಸ್ತುಗಳು ಪತ್ತೆಯಾದಾಗ ಈ ಸ್ಮಾಟ್ ಸ್ಟಿಕ್ ನಿಂದ ಭಿನ್ನ ರೀತಿಯ ಶಬ್ದ ಬರುತ್ತದೆ. ಅಷ್ಟೇ ಅಲ್ಲದೇ ಈ ಸ್ಮಾರ್ಟ್ ಸ್ಟಿಕ್ ನ ಲೊಕೇಷನ್ನನ್ನೂ ಸಹ ಪತ್ತೆ ಮಾಡಬಹುದಾಗಿದೆ ಎಂದು ಸ್ಮಾರ್ಟ್ ಸ್ಟಿಕ್ ಅಭಿವೃದ್ಧಿಪಡಿಸಿರುವ ವಿದ್ಯಾರ್ಥಿಗಳ ತಂಡದ ಸದಸ್ಯ ಪವನ್ ಕುಮಾರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT