ಮೂರನೇ ವ್ಯಕ್ತಿಗಳು ಖಾಸಗಿ ಜಿಮೇಲ್ ಓದುವುದಕ್ಕೆ ಗೂಗಲ್ ಅನುಮತಿ: ವರದಿ
ವಾಷಿಂಗ್ಟನ್: ಇನ್ನು ಮುಂದೆ ಮೂರನೇ ವ್ಯಕ್ತಿಗಳು ಸಹ ನಿಮ್ಮ ಖಾಸಗಿ ಜಿಮೇಲ್ ಖಾತೆಗಳನ್ನು ಓದಲು ಸಾಧ್ಯವಿದೆ. ಇಂತಹಾ ಅವಕಾಶವನ್ನು ಪ್ರಖ್ಯಾತ ಸರ್ಚ್ ಇಂಜಿನ್ ಗೂಗಲ್ ಥರ್ಡ್ ಪಾಪಾರ್ಟಿ ಅಪ್ಲಿಕೇಷನ್ ಡೆವಲಪರ್ ಗಳಿಗೆ ನೀಡಿದೆ ಎಂದು ಅಮೆರಿಕಾದ ಪ್ರಖ್ಯಾತ ವೃತ್ತಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ಸೋಮವಾರ ವರದಿ ಮಾಡಿದೆ.
ಸಾಫ್ಟ್ ವೇರ್ ಅಭಿವೃದ್ದಿ ಪಡಿಸುವ ನೂರಕ್ಕೂ ಹೆಚ್ಚಿನ ಹೊರಗುತ್ತಿಗೆ ಸಂಸ್ಥೆಗಳಿಗೆ ಗೂಗಲ್ ಜಿಮೇಲ್ ಇನ್ ಬಾಕ್ಸ್ ಸ್ಕ್ಯಾನ್ ಮಾಡುವ ಅವಕಾಶವನ್ನು ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ನೀಡಿದೆ. ಈ ಹೊರಗುತ್ತಿಗೆ ಸಂಸ್ಥೆಗಳು ಬೇರೆಯವರ ಜಿಮೇಲ್ ಓದುವುದು ಅಷ್ಟೇ ಅಲ್ಲದೆ ತಮ್ಮದೇ ಸಂಸ್ಥೆಯ ಉದ್ಯೋಗಿಗಳ ಮೇಲ್ ಸಹ ಓದುವುದಕ್ಕೆ ಮುಂದಾಗಲಿದೆ.
ಇದೇ ವೇಳೆ ಜಿಮೇಲ್ ಇನ್ ಬಾಕ್ಸ್ ನಲ್ಲಿ ಹೆಚ್ಚಿನ ಜಾಹೀರಾತುಗಳು ಕ್ಂಡುಬರುವುದಾಗಿ ವರದಿಯಾಗಿದ್ದು ಪ್ರಯಾಣ ದರಗಳು, ಶಾಪಿಂಗ್ ವಿವರಗಳಿರುವ ಬಹುರಾಷ್ಟ್ರೀಯ ಸಂಸ್ಥೆಗಳ ಜಾಹೀರಾತುಗಳು ಜಿಮೇಲ್ ನಲ್ಲಿ ಕಾಣಲಿದೆ.
ಜಾಗತಿಕವಾಗಿ ಅತಿ ಹೆಚ್ಚು ಜನರು ಜಿಮೇಲ್ ಅನ್ನು ತಮ್ಮ ಖಾಸಗಿ ಈ ಮೇಲ್ ಆಗಿ ಬಳ್ಸುತ್ತಿದ್ದಾರೆ. ಜಗತ್ತಿನಲ್ಲಿ ಸರಿಸುಮಾರು 1.4 ಕೋಟಿ ಜನ ಜಿಮೇಲ್ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.
ಆದರೆ ಗೂಗಲ್ ಹೇಳಿಕೆಯಂತೆ ಕೆಲವೇ ಸಂದರ್ಭಗಳಲ್ಲಿ ಮಾತ್ರ ಹೊರಗುತ್ತಿಗೆ ಸಂಸ್ಥೆಗಳಿಗೆ ಬಳಕೆದಾರರ ಜಿಮೇಲ್ ಓದುವ ಅವಕಾಶವಿದೆ. ಮೇಲ್ ನಲ್ಲಿ ಬಗ್ ಅಥವಾ ತಾಂತ್ರಿಕ ಸಮಸ್ಯೆಗಳು ತಲೆದೋರಿದಾಗ ಮಾತರ ಬಳಕೆದಾರರ ಅನುಮತಿಯ ಮೇರೆಗೆ ಅವರ ಮೇಲ್ ಇನ್ ಬಾಕ್ಸ್ ತೆರೆದು ಓದಲಾಗುತ್ತದೆ.
ಇದುವರೆಗೆ ಗೂಗಲ್ ನೌಕರರು ಮಾತ್ರವೇ ಕೆಲವೇ ಸಂದರ್ಭಗಳಲ್ಲಿ ಬಳಕೆದಾರರ ಜಿಮೇಲ್ ಖಾತೆಯನ್ನು ಪ್ರವೇಶಿಸಿ ಮೇಲ್ ಓದುವ ಅವಕಾಶವನ್ನು ಹೊಂದಿದ್ದರು. ಆದರೆ ಇನ್ನು ಮುಂದೆ ಹೊರಗುತ್ತಿಗೆ ಸಂಸ್ಥೆಗಳಾದ ಮೂರನೇ ವ್ಯಕ್ತಿಗಳು ಸಹ ಖಾಸಗಿ ಜಿಮೇಲ್ ಕಾತೆ ಪ್ರವೇಶಿಸಲು ಗೂಗಲ್ ಸಂಸ್ಥೆ ಅವಕಾಶ ಕಲ್ಪಿಸಿದೆ. ಇದರಿಂದ ಉಂಟಾಗಬಹುದಾದ ಖಾತೆದಾರರ ಮಾಹಿತಿ ಸೋರಿಕೆ ಸಂಬಂಧ ಸಂಸ್ಥೆ ಯಾವ ಕ್ರಮ ಜರುಗಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.