15 ವರ್ಷಗಳ ನಂತರ ಏಕಕಾಲಕ್ಕೆ ಮಂಗಳ ಹಾಗೂ ರಕ್ತಚಂದ್ರ ದರ್ಶನ: ನಭೋ ಮಂಡಲದಲ್ಲಿ ಮತ್ತೊಂದು ಕೌತುಕ
ಶತಮಾನದ ಸುದೀರ್ಘ ಚಂದ್ರಗ್ರಹಣ ಗೋಚರವಾಗಲಿದ್ದು, ಮಂಗಳ ಗ್ರಹವೂ ಸನಿಹದಲ್ಲೇ ಹಾದು ಹೋಗಲಿದೆ. 15 ವರ್ಷದ ನಂತರ ಮಂಗಳ ಗ್ರಹ ಸನಿಹದಲ್ಲೇ ಹಾದುಹೋಗುವ ಸಮಯದಲ್ಲಿ ಚಂದ್ರ ಗ್ರಹಣ ನಡೆಯುತ್ತಿದೆ.
ಪ್ಯಾರಿಸ್: ಶತಮಾನದ ಸುದೀರ್ಘ ಚಂದ್ರಗ್ರಹಣ ಗೋಚರವಾಗಲಿದ್ದು, ಮಂಗಳ ಗ್ರಹವೂ ಸನಿಹದಲ್ಲೇ ಹಾದು ಹೋಗಲಿದೆ. 15 ವರ್ಷದ ನಂತರ ಮಂಗಳ ಗ್ರಹ ಸನಿಹದಲ್ಲೇ ಹಾದುಹೋಗುವ ಸಮಯದಲ್ಲಿ ಚಂದ್ರ ಗ್ರಹಣ ನಡೆಯುತ್ತಿದೆ.
ಖಗೋಳಶಾಸ್ತ್ರಜ್ಞರಿಗೆ ಇದೊಂದು ಅದ್ಭುತವಾದ ಸಂದರ್ಭವಾಗಿದ್ದು, ಶತಮಾನದ ಕೌತುಕ ಹಾಗೂ ದಶಕದ ಅಪರೂಪವನ್ನು ನೋಡಲು ಕಾತುರದಿಂದ ಕಾದಿದ್ದಾರೆ. ಸೂರ್ಯ ಗ್ರಹಣ ವೀಕ್ಷಿಸಬೇಕಾದರೆ ಅಗತ್ಯವಿರುವ ಪರಿಕರಗಳು ಈ ಗ್ರಹಣ ಹಾಗೂ ಸನಿಹದಲ್ಲೇ ಹಾದು ಹೋಗುವ ಮಂಗಳ ಗ್ರಹವನ್ನು ವೀಕ್ಷಿಸಬಹುದಾಗಿದೆ.
ಸುಮಾರು 6 ಗಂಟೆ 14 ನಿಮಿಷಗಳ ಕಾಲ ನಡೆಯುವ ಈ ಕೌತುಕ 21 ನೇ ಶತಮಾನದ ಅತಿ ದೀರ್ಘಾವಧಿಯ ಗ್ರಹಣವಾಗಿದೆ ಎಂದು ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿ ಹೇಳಿದೆ. ಗ್ರಹಣ ಸಂಭವಿಸುವ ವೇಳೆಯಲ್ಲೇ ಚಂದ್ರನ ಬಳಿ ಮಂಗಳ ಗ್ರಹ ಹಾದು ಹೋಗಲಿದ್ದು, ಬರಿಗಣ್ಣಿಗೆ ಸುಲಭವಾಗಿ ಕಾಣಸಿಗಲಿದ್ದು ಇದೊಂದು ಅಪರೂಪದ ಖಗೋಳ ಕೌತುಕವಾಗಲಿದೆ ಎನ್ನುತ್ತಾರೆ ಪ್ಯಾರಿಸ್ ನ ಖಗೋಳಶಾಸ್ತ್ರಜ್ಞ ಪ್ಯಾಸ್ಕಲ್ ಡೆಸ್ಕ್ಯಾಂಪ್ಸ್ ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.