ವಿಜ್ಞಾನ-ತಂತ್ರಜ್ಞಾನ

ಇನ್‌ಸ್ಟಾಗ್ರಾಮ್‌ ಬಳಕೆದಾರರು ಇನ್ನುಂದೆ ನಿಮ್ಮ ಪೋಸ್ಟ್‌ಗಳಿಗೆ ಹಿನ್ನಲೆ ಸಂಗೀತ ಹಾಕಬಹುದು!

Vishwanath S
ಸ್ಯಾನ್ ಫ್ರಾನ್ಸಿಕೋ: ಫೇಸ್ ಬುಕ್ ಒಡೆತನದ ಇನ್‌ಸ್ಟಾಗ್ರಾಮ್‌ ನಲ್ಲಿ ಹೊಸ ಫಿಚರ್ ಅನ್ನು ಅಳವಡಿಸಿದ್ದು ಇನ್ನುಂದೆ ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ಪೋಸ್ಟ್‌ಗಳಿಗೆ ಹಿನ್ನಲೆ ಸಂಗೀತ ಹಾಕಬಹುದು. 
ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ಖಾತೆಯಲ್ಲಿ ಸಾವಿರಾರು ಹಾಡುಗಳನ್ನು ಸೇರಿಸಲು ಅವಕಾಶ ಮಾಡಿಕೊಡಲಾಗುತ್ತದೆ. 
ನೂತನ ಫಿಚರ್ ನಲ್ಲಿ ಪೋಸ್ಟ್‌ಗಳ ಕೆಳಗೆ ರೆಕಾರ್ಡ್ ಬಟನ್ ಅಡಿಯಲ್ಲಿ ಸಂಗೀತ ಐಕಾನ್ ಕಾಣಿಸುತ್ತದೆ. ಇಲ್ಲಿ ಬಳಕೆದಾರರು ನಿರ್ದಿಷ್ಟ ಹಾಡುಗಳನ್ನು ಹುಡುಕಬಹುದು. ನಂತರ ಆ ಹಾಡನ್ನು ಕೇಳಿ ತಮಗೆ ಇಷ್ಟವಾದರೆ ಆ ಹಾಡುಗಳನ್ನು ತಮ್ಮ ಪೋಸ್ಟ್‌ಗಳಿಗೆ ಅಳವಡಿಸಬಹುದು ಎಂದು ಇನ್‌ಸ್ಟಾಗ್ರಾಮ್‌ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ. 
ಆಯ್ಕೆ ಮಾಡಿಕೊಂಡ ಹಾಡುನ್ನು ತಮ್ಮ ಕಥೆಗೆ ಸರಿಹೊಂದುವ ಹಾಡಿನ ನಿಖರ ಭಾಗವನ್ನು ಉಪಯೋಗಿಸಲು ಬಳಕೆದಾರರಿಗೆ ಫಾವರ್ಡ್ ಮತ್ತು ರಿವೈಂಡ್ ಮಾಡುವ ಆಯ್ಕೆಗಳನ್ನು ನೀಡಲಾಗಿದೆ. 
ಇನ್‌ಸ್ಟಾಗ್ರಾಮ್‌ ನಲ್ಲಿ ಪ್ರತಿದಿನ 400 ಮಿಲಿಯನ್ ಕಥೆಗಳು ಅಪ್ ಲೋಡ್ ಆಗುತ್ತವೆ. ಇನ್ನು ತಮ್ಮ ಸ್ನೇಹಿತರು ಮತ್ತು ಹಿಂಬಾಲಕರನ್ನು ಇನ್ನಷ್ಟು ಹತ್ತಿರವಾಗುವಂತೆ ಮಾಡಲು ಈ ನೂತನ ಫಿಚರ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದರು.
SCROLL FOR NEXT