ವಿಜ್ಞಾನ-ತಂತ್ರಜ್ಞಾನ

ಭೂಮಿಗೆ ಅಪ್ಪಳಿಸಲಿದೆ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ

Srinivasamurthy VN
ಬೀಜಿಂಗ್: ಚೀನಾದ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ’ ಇದೇ ಸೋಮವಾರ ಅಂದರೆ ನಾಳೆ ಭೂಮಿಯ ವಾತಾನವರಣ ಪ್ರವೇಶ ಮಾಡಲಿದೆ ಎಂದು ತಿಳಿದುಬಂದಿದೆ.
ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ‘ಟಿಯಾಂಗಾಂಗ್–1’ ತನ್ನ ಕಾರ್ಯಾಚರಣೆ ಅವಧಿ ಪೂರೈಸಿದ್ದು ನಾಳೆ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನಾಳೆ ಭೂಮಿಗೆ ಅಭಿಮುಖವಾಗಿ ಚಲಿಸಲಿರುವ ಬಾಹ್ಯಾಕಾಶ ಪ್ರಯೋಗಾಲಯ ಭೂಮಿಯ ವಾತಾವರಣ ಪ್ರವೇಶ ಮಾಡುತ್ತಿದ್ದರಂತೆಯೇ ವಾತಾವರಣದಲ್ಲಿನ ಒತ್ತಡದಿಂದಾಗಿ ಅಲ್ಲಿಯೇ ದಹನವಾಗಲಿದೆ.  ಮಾರ್ಗಮಧ್ಯೆ ಆಗಮಿಸುವಾಗಲೇ ಭೂಮಿಯ ವಾತಾವರಣದಲ್ಲಿ ದಹನವಾಗಲಿದೆ.
ಸುಮಾರು 10.4 ಮೀಟರ್ ಉದ್ಧದ ಟಿಯಾಂಗಾಂಗ್–1 ಪ್ರಯಾಗಾಲಯವನ್ನು 2011ರಲ್ಲಿ ಬಾಹ್ಯಾಕಾಶಕ್ಕೆ ರವಾನೆ ಮಾಡಲಾಗಿತ್ತು. ಸುಮಾರು 7 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿದ ಟಿಯಾಂಗಾಂಗ್–1 ಪ್ರಯೋಗಾಲಯ ಇದೀಗ ತನ್ನ ಕಾರ್ಯಾಚರಣೆ ನಿಲ್ಲಿಸಿದ್ದು, ಈ ಹಿಂದೆ 2017ರ ಅಂತ್ಯದಲ್ಲಿ ಇದು ಭೂಮಿಗೆ ಅಪ್ಪಳಿಸಲಿದೆ ಎಂದು ಹೇಳಲಾಗಿತ್ತು. ಆದರೆ ಈ ಕಾರ್ಯಾಚರಣೆ ತಾಂತ್ರಿಕ ದೋಷದಿಂದ ವಿಳಂಬವಾದ ಹಿನ್ನಲೆಯಲ್ಲಿ ನಾಳೆ ಅಂದರೆ ಏಪ್ರಿಲ್ 2 ಸೋಮವಾರದಂದು ಬಾಹ್ಯಾಕಾಶ ಪ್ರಯೋಗಾಲಯ ಭೂಮಿಯ ವಾತವರಣ ಪ್ರವೇಶಿಸಿ ದಹನವಾಗಲಿದೆ.
‘ಸ್ವರ್ಗದ ಅರಮನೆ’ ಎಂದು ಕರೆಯಲಾಗುವ ಟಿಯಾಂಗಾಂಗ್, ಭೂಮಿಯಿಂದ ಸುಮಾರು 216 ಕಿ.ಮೀ ದೂರದಲ್ಲಿ ಸುತ್ತು ಹಾಕುತ್ತಿದೆ. ಪ್ರಯೋಗಾಲಯವು ಪತನವಾಗಲು ಆರಂಭವಾಗುವ ಮೊದಲಿನ ಎರಡು ಗಂಟೆಗಳ ಮೊದಲಷ್ಟೇ ಅದು ಯಾವ ಸ್ಥಳದಲ್ಲಿ ಭೂ ವಾತಾವರಣ ಪ್ರವೇಶಿಸಲಿದೆ ಎಂದು ನಿಖರವಾಗಿ ಹೇಳಲು ಸಾಧ್ಯ ಎಂದು ಚೀನಾ ವಿಜ್ಞಾನಿಗಳು ಹೇಳಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಭೂಮಿ ನಡುವಿನ ದೂರ ಸಂವೇದಿ ಪರೀಕ್ಷೆ ಹಾಗೂ ಬಾಹ್ಯಾಕಾಶ ಪರಿಸರ ಕುರಿತ ಸಂಶೋಧನೆಗಳನ್ನು ಇಲ್ಲಿ ಕೈಗೊಳ್ಳಲಾಗಿತ್ತು.
SCROLL FOR NEXT