ವಿಜ್ಞಾನ-ತಂತ್ರಜ್ಞಾನ

ತೇಜಸ್ ನಿಂದ ಪ್ರಪ್ರಥಮ ಏರ್-ಟು-ಏರ್ ಇಂಧನ ವರ್ಗಾವಣೆ ಯಶಸ್ವಿ!

Raghavendra Adiga
ಬೆಂಗಳೂರು: ಲೈಟ್ ಕಂಬಾಟ್ ಏರ್ಕ್ರಾಫ್ಟ್  (ಲಘು ಯುದ್ಧ ವಿಮಾನ) ತೇಜಸ್  ಸುಮಾರು 1,900 ಕಿಲೋ ಇಂಧನವನ್ನು  20,000 ಅಡಿ ಎತ್ತರದಲ್ಲಿ  ಇನ್ನೊಂದು ಏರ್ಕ್ರಾಫ್ಟ್ ಗೆ ವರ್ಗಾಯಿಸುವುದರಲ್ಲಿ ಯಶಸ್ವಿಯಾಗಿದೆ. ಮಿಡ್ ಏರ್ ಮರುಪೂರಣ ಟ್ಯಾಂಕರ್ ಬಳಸಿ ಈ ಇಂಧನ ವರ್ಗಾವಣೆ ಮಾಡಲಾಗಿದೆ.
ಎಲ್ಲಾ ಆಂತರಿಕ ಟ್ಯಾಂಕ್ ಗಳು ​​ಮತ್ತು ಡ್ರಾಪ್ ಟ್ಯಾಂ ಗಳನ್ನು ಮರುಪೂರಣಗೊಳಿಸಲಾಗಿದೆ, ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಪ್ರಕಟಣೆ ತಿಳಿಸಿದೆ.
ಭಾರತ ಈಗ  ಮಿಲಿಟರಿ ವಿಮಾನಕ್ಕಾಗಿ ಏರ್ ಟು ಏರ್ ಇಂಧನ ಮರುಪೂರಣ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದು ಎಚ್ಎಎಲ್ ಸಿಎಂಡಿ  ಆರ್ ಮಾಧವನ್ ಹೇಳಿದ್ದಾರೆ.
ವಿಮಾನವು ನ್ಯಾಷನಲ್ ಫ್ಲೈಟ್ ಟೆಸ್ಟ್ ಸೆಂಟರ್ ನ ವಿಂಗ್ ಕಮಾಂಡರ್ ಸಿದ್ದಾರ್ಥ್ ಸಿಂಗ್ಈ ವಿಮಾನವನ್ನು ಮುನ್ನಡೆಸಿದ್ದರು. ಎಚ್ಎಎಲ್ ಮತ್ತು ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಜಂಟಿಯಾಗಿ ವಿನ್ಯಾಸಗೊಳಿಸಿದ ಈ ವಿಮಾನದ ಕಾರ್ಯಾಚರ್ಣೆಯನ್ನು ನಿಯತವಾಗಿ ಮೇಲ್ವಿಚಾರಣೆ  ಮಾಡಲಾಗಿದೆ.
ಪರೀಕ್ಷಾ ಸಮಯದಲ್ಲಿ ವಿಮಾನದ ವ್ಯವಸ್ಥೆಗಳ ಕಾರ್ಯಕ್ಷಮತೆ (ಮುಖ್ಯವಾಗಿ ಇಂಧನ ಮತ್ತು ವಿಮಾನ ನಿಯಂತ್ರಣ ವ್ಯವಸ್ಥೆಗಳು)  ವಿಮಾನದ ಡಿಸೈನ್ ನೊಂದಿಗೆ ಅಂತರ್ನಿರ್ಮಿತವಾಗಿದ್ದವು. ಹಾಗೆಯೇ ಏರ್-ಟು-ಏರ್ ಇಂಧನ ಮರುಪೂರಣ ವ್ಯವಸ್ಥೆಯನ್ನು ಪರೀಕ್ಷಿಸುವ ಮುನ್ನ ಸಹ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
SCROLL FOR NEXT