ವಾಷಿಂಗ್ಟನ್: ಕಳೆದ 1.2 ಲಕ್ಷ ವರ್ಷಗಳಲ್ಲೇ ಭೂಮಿ ಈ ಪರಿ ಬಿಸಿಯಾಗಿರಲಿಲ್ಲ ಎಂದು ಜಾಗತಿಕ ತಾಪಮಾನ ಏರಿಕೆ ಸಂಬಂಧ ಖ್ಯಾತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನಾಸಾ ಆತಂಕ ವ್ಯಕ್ತಪಡಿಸಿದೆ.
ದಿನೇ ದಿನೇ ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ ಹಿನ್ನಲೆಯಲ್ಲಿ ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ತಾಪಮಾನ ಏರಿಕೆ ಸಂಬಂಧ ಅಧ್ಯಯನ ನಡೆಸುತ್ತಿದ್ದು, ಇದಕ್ಕೆ ಬರೊಬ್ಬರಿ 1 ಬಿಲಿಯನ್ ಡಾಲರ್ ವೆಚ್ಚದಲ್ಲಿ ಯೋಜನೆ ರೂಪಿಸಿದೆ. ಅದರಂತೆ ಪ್ರಸ್ತುತ ನಾಸಾ ಬಿಡುಗಡೆ ಮಾಡಿರುವ ವರದಿಯಲ್ಲಿ ಕಳೆದ ಒಂದು ಲಕ್ಷದ 20 ಸಾವಿರ ವರ್ಷಗಳಲ್ಲೇ ಭೂಮಿ ಇಷ್ಟರ ಮಟ್ಟಿಗೆ ಬಿಸಿಯಾಗಿರಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.
ನಾಸಾ ವರದಿಯನ್ವಯ ಈ ವರ್ಷದ ಜುಲೈ ತಿಂಗಳು ಅತ್ಯಂತ ಗರಿಷ್ಠ ತಾಪಮಾನ ಹೊಂದಿತ್ತು ಎನ್ನಲವಾಗಿದೆ. ತಾಪಮಾನ ಏರಿಕೆಯ ದಾಖಲೆ 1880ರಿಂದಲೇ ಆರಂಭಗೊಂಡಿದ್ದು, ಹವಮಾನ ತಜ್ಞರ ಪ್ರಕಾರ ಹಿಂದೆಂದೂ ಕಂಡರಿಯದ ಉಷ್ಣತೆಯನ್ನು ಭೂಮಿ ಅನುಭವಿಸುತ್ತಿದೆ. ಜಾಗತಿಕ ತಾಪಮಾನ ಅಪಾಯದ ಮಟ್ಟಕ್ಕೆ ತಲುಪುತ್ತಿದ್ದು, 1,20,000 ವರ್ಷಗಳ ಅವಧಿಯಲ್ಲಿ ಈ ಪ್ರಮಾಣದ ಉಷ್ಣತೆ ಏರಿಕೆಯಾಗಿಲ್ಲ.
ಉಷ್ಣತೆ ಏರಿಕೆಗೆ ಪ್ರಮುಖ ಕಾರಣ ಎಲ್ಲರಿಗೂ ಗೊತ್ತಿರುವಂತೆ ನಿಯಂತ್ರಣವಿಲ್ಲದ ಹಸಿರುಮನೆ ಅನಿಲ ಬಿಡುಗಡೆ. ತಾಪಮಾನ ಏರಿಕೆ ತಡೆಯುವ ನಿಟ್ಟಿನಲ್ಲಿ ಏನಾದರೂ ಮಾಡಲೇಬೇಕಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಹೊಗೆ ಉಗುಳುವ ಕಾರ್ಖಾನೆಗಳ ನಿಯಂತ್ರಣ, ಮಿತಿ ಮೀರುತ್ತಿರುವ ವಾಹನಗಳ ಬಳಕೆ, ಅರಣ್ಯನಾಶ ಸೇರಿದಂತೆ ಹಲವು ವಿಚಾರಗಳು ಜಾಗತಿಕ ತಾಪಮಾನ ಏರಿಕೆಗೆ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಅಂತೆಯೇ ಉತ್ತರ ದ್ರುವದಲ್ಲಿರುವ ಮಂಜಿನ ನೀರ್ಗಲ್ಲುಗಳು ಕರಗುವ ಪ್ರಕ್ರಿಯೆ ಕೂಡ ಯಥೇಚ್ಛವಾಗಿದ್ದು, ಈ ಹಿಂದೆಂಗಿತಲೂ ಅಲ್ಲಿನ ನೀರ್ಗಲ್ಲುಗಳು ವೇಗವಾಗಿ ಕರಗುತ್ತಿವೆ. ಇದು ಭೂಮಿಗೆ ನಿಜಕ್ಕೂ ಅಪಾಯಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬರೊಬ್ಬರಿ 1 ಬಿಲಿಯನ್ ಡಾಲರ್ ಹಣ ವೆಚ್ಚ ಮಾಡಿ ಯೋಜನೆ
ಇನ್ನು ಜಾಗತಿಕ ತಾಪಮಾನ ಏರಿಕೆ ಸಂಬಂಧ ಯೋಜನೆ ಕೈಗೊಂಡಿರುವ ನಾಸಾ ಇದಕ್ಕಾಗಿ 1 ಬಿಲಿಯನ್ ಡಾಲರ್ ಹಣವನ್ನು ವಿನಿಯೋಗಿಸಲಾಗಿದೆ. ಐಸ್ ಸ್ಯಾಟ್-2 (ICESAT-2) ಎಂಬ ಉಪಗ್ರಹವನ್ನು ಉಡಾವಣೆ ಮಾಡಲಿದ್ದು, ಈ ಉಪಗ್ರಹ ಉತ್ತರ ದ್ರುವದಲ್ಲಿರುವ ನೀರ್ಗಲ್ಲುಗಳ ಮೇಲೆ ಅಧ್ಯಯನ ನಡೆಸಲಿವೆ. ಈ ಬಗ್ಗೆ ಮಾತನಾಡಿರುವ ಯೋಜೋನೆ ಕಾರ್ಯಕಾರಿ ಅಧಿಕಾರಿ ರಿಚರ್ಡ್ ಸ್ಲೋಂಕರ್ ಅವರು, ದಶಕಗಳ ಬಳಿಕ ನೀರ್ಗಲ್ಲುಗಳ ಮೇಲೆ ಅಧ್ಯಯನ ನಡೆಸಲು ಉಪಗ್ರಹ ರವಾನಿಸಲಾಗುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos