ವಿಜ್ಞಾನ-ತಂತ್ರಜ್ಞಾನ

ಮುಂದಿನ ಮಾರ್ಸ್ ರೋವರ್ ಹೆಸರಿಸಲು ನಾಸಾದಿಂದ ವಿದ್ಯಾರ್ಥಿಗಳಿಗೆ ಸ್ಪರ್ಧೆ

Lingaraj Badiger
ವಾಷಿಂಗ್ಟನ್: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತನ್ನ ಮಾರ್ಸ್ 2020 ಮಿಷನ್ ಗಾಗಿ 2019ರ ಶೈಕ್ಷಣಿಕ ವರ್ಷದಲ್ಲಿ ಮುಂದಿನ ರೋವರ್ ಅನ್ನು ಹೆಸರಿಸಲು ವಿದ್ಯಾರ್ಥಿಗಳಿಗೆ ಒಂದು ಸ್ಪರ್ಧೆಯನ್ನು ನಡೆಸಲು ಪಾಲುದಾರನ ಹುಟುಕಾಟದಲ್ಲಿದೆ.
ಕೆಂಪು ಗ್ರಹ - ಮಾರ್ಸ್ 2020 ರೋವರ್ ಮಿಷನ್ ಗೆ ಸಂಬಂಧಿಸಿದ ಈ ಸ್ಪರ್ಧೆ, ವಿಜ್ಞಾನಕ್ಕೆ ಸಂಬಂಧಿಸಿದ ಮತ್ತು ಕೆಂಪು ಗ್ರಹದಲ್ಲಿನ ಜೀವನ ಸಾಮರ್ಥ್ಯದ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಸ್ಪರ್ಧೆ ಆಯೋಜಿಸುವಲ್ಲಿ ಆಸಕ್ತಿ ಹೊಂದಿರುವ ನಿಗಮಗಳು, ಲಾಭರಹಿತ ಮತ್ತು ಶೈಕ್ಷಣಿಕ ಸಂಸ್ಥೆಗಳು ನಾಸಾಗೆ ಪ್ರಸ್ತಾವಗಳನ್ನು ಕಳುಹಿಸಬಹುದು.
ಅಕ್ಟೋಬರ್ 9ರೊಳಗೆ ಕಳಹಿಸುವ ಪ್ರಸ್ತಾವಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.
1997ರಲ್ಲಿ ನಡೆದ ಮೊದಲ ಮಾರ್ಸ್ ರೋವರ್ ನಿಂದ ನಾವು ಹೆಸರಿಸುವ ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ ಎಂದು ನಾಸಾದ ಸೈನ್ಸ್ ಮಿಷನ್ ನಿರ್ದೇಶನಾಲಯದ ಸಹಾಯಕ ಆಡಳಿತಗಾರ ಥಾಮಸ್ ಝರ್ಬುಚೆನ್ ಅವರು ಹೇಳಿದ್ದಾರೆ.
ಈ ಸ್ಪರ್ಧೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದ್ದು, ಆಯ್ಕೆಯಾದ ಸಂಸ್ಥೆ ನಾಸಾದ ಐತಿಹಾಸಿಕ ಮಾರ್ಸ್ 2020 ಮಿಷನ್ ನಲ್ಲಿ ಭಾಗವಹಿಸುತ್ತಾರೆ ಎಂದು ಥಾಮಸ್ ತಿಳಿಸಿದ್ದಾರೆ.
ನಾಸಾ ಈಗಾಗಲೇ ಮಂಗಳನ ಅಂಗಳಕ್ಕೆ ಅತ್ಯಾಧುನಿಕ ರೋವರ್ (ಬಾಹ್ಯಾಕಾಶ ಪುಟ್ಟ ನೌಕೆ) ಇರಿಸಲು ನಾಸಾದ 2020 ಮಿಷನ್ ಭಾಗವಾಗಿ ಮಾರ್ಸ್ ಪ್ಲಾನೆಟ್‍ಗೆ ರಿಮೋಟ್ ಕಂಟ್ರೋಲ್ ಹೆಲಿಕಾಪ್ಟರ್‍ನನ್ನು ರವಾನಿಸುವುದಾಗಿ ತಿಳಿಸಿದೆ. ಅಂತರಿಕ್ಷದ ಗ್ರಹವೊಂದಕ್ಕೆ ಇಂಥ ಅತ್ಯಾಧುನಿಕ ನೌಕೆಯೊಂದನ್ನು ರವಾನಿಸುತ್ತಿರುವುದು ಬಾಹ್ಯಾಕಾಶ ಇತಿಹಾಸದಲ್ಲಿ ಇದೇ ಮೊದಲು.
SCROLL FOR NEXT