28 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ ವಿ 45 ರಾಕೆಟ್ ಯಶಸ್ವಿ ಉಡಾವಣೆ 
ವಿಜ್ಞಾನ-ತಂತ್ರಜ್ಞಾನ

ಶತ್ರುದೇಶದ ರೇಡಾರ್ ಪತ್ತೆ ಹಚ್ಚಬಲ್ಲ ಎಮಿಸ್ಯಾಟ್ ಯಶಸ್ವಿ ಉಡಾವಣೆ

ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಎಮಿಸ್ಯಾಟ್ ಉಪಗ್ರಹ ಸೇರಿದಂತೆ 29 ನ್ಯಾನೋ ಉಪಗ್ರಹಗಳನ್ನು ಇಸ್ರೋ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ...

ಶ್ರೀಹರಿಕೋಟಾ: ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಎಮಿಸ್ಯಾಟ್ ಉಪಗ್ರಹ ಸೇರಿದಂತೆ 29 ನ್ಯಾನೋ ಉಪಗ್ರಹಗಳನ್ನು ಇಸ್ರೋ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ,
ಇಸ್ರೋದ ಪಿಎಸ್ ಎಲ್ ವಿ-ಸಿ45 ರಾಕೆಟ್ ಮೂಲಕ ಡಿಆರ್ ಡಿಒ ಅಭಿವೃದ್ಧಿ ಪಡಿಸಿದ ಎಮಿಸ್ಯಾಟ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸೆಟಲೈಟ್ ಸೇರಿದಂತೆ ಅಮೆರಿಕದ 24, ಸ್ವಿರ್ಟ್ಜರ್ ಲೆಂಡ್ ನ 01, ಸ್ಪೇನ್ 1, ಲಿಥುಯೇನಿಯಾದ 02 ಹೊತ್ತೊಯ್ದಿದ್ದು, 3 ಕಕ್ಷೆಗಳಲ್ಲಿ ಈ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.
ಪಿಎಸ್​ಎಲ್​ವಿ 45 ಉಡಾಹಕ ನಿಗದಿಯಂತೆ 9.30ಕ್ಕೆ ಸರಿಯಾಗಿ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು, ಉಡಾಹಕವು ನಿಗದಿತ ಗಮ್ಯದತ್ತ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.
ಎಮಿಸ್ಯಾಟ್ ಉಪಗ್ರಹವನ್ನು ಡಿಆರ್ ಡಿಒ ಅಭಿವೃದ್ಧಿ ಪಡಿಸಿದೆ, ಮೊದಲ ಬಾರಿ ಮೂರು ವಿವಿಧ ಕಕ್ಷೆಗಳಲ್ಲಿ ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ,ಶಿವನ್ ಹೇಳಿದ್ದಾರೆ.
ಎಮಿಸ್ಯಾಟ್ ಉಪಗ್ರಹವನ್ನು ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಹೇಳಿದ್ದಾರೆ.

“ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಇಸ್ರೋ ಸಾಧನೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಪಿಎಸ್‌ಎಲ್‌ವಿ ಸಿ 45 ವಾಹಕದ ಮೂಲಕ ವಿವಿಧ ದೇಶಗಳ 20 ಕ್ಕೂಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು” ಎಂದರು. ಎಮಿಸ್ಯಾಟ್ ಯಶಸ್ವಿ ಉಡಾವಣೆಯನ್ನು ಐತಿಹಾಸಿಕ, ಮಹತ್ವದ ಮೈಲಿಗಲ್ಲು ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT