ವಿಜ್ಞಾನ-ತಂತ್ರಜ್ಞಾನ

ನಮ್ಮ ಹೃದಯ ಬಹುತೇಕ ನಿಂತೇ ಹೋಗಿತ್ತು: ಇಸ್ರೋ ಅಧ್ಯಕ್ಷ ಶಿವನ್ ಭಾವೋದ್ವೇಗದ ನುಡಿ

Raghavendra Adiga

ಬೆಂಗಳೂರು: ನಮ್ಮ ಹೃದಯ ಬಹುತೇಕ ನಿಂತೇ ಹೋಗಿತ್ತು!" ಇದು ", ಮಂಗಳವಾರ ಚಂದ್ರಯಾನ-2 ತಂಡ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಿದ ಬಳಿಕ ಇಸ್ರೋ ಅಧ್ಯಕ್ಷ ಕೆ.ಶಿವನ್  ಅವರ ನುಡಿಗಳು.

ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಲು ಯಶಸ್ವಿಯಾದ ಬಳಿಕ ಶಿವನ್ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ್ದಾರೆ.

ಆನ್‌ಬೋರ್ಡ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸಿಕೊಂಡು ಯೋಜಿಸಿದಂತೆ 0902 ಗಂಟೆಗಳಲ್ಲಿ ಚಂದ್ರನ ಕಕ್ಷೆಯ ಅಳವಡಿಕೆ (ಎಲ್‌ಒಐ) ಕುಶಲತೆಯು ಯಶಸ್ವಿಯಾಗಿ ಪೂರ್ಣಗೊಂಡ ನಂತರ "30 ನಿಮಿಷಗಳ ಕಾಲ ನಮ್ಮ ಹೃದಯ ಬಹುತೇಕ ನಿಂತುಹೋಗಿತ್ತು" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

"ಇದುವರೆವಿಗೆ ಯೋಜನೆಯಂತೆಯೇ ಚಂದ್ರಯಾನ ಸಾಗಿದ್ದು ಸೆಪ್ಟೆಂಬರ್ ಎರಡರ ನಂತರ ಮಹತ್ವದ ಘಟ್ಟ ಪ್ರಾರಂಭವಾಗಲಿದೆ.ಚಂದ್ರನ ದಕ್ಷಿಣ ಧ್ರುವದ ಬಳಿ ಇದುವರೆಗೆ ಯಾರೂ ತೆರಳಿಲ್ಲದ ಕಾರಣ ಚಂದ್ರಯಾನ-2 ನೀಡುವ ಮಾಹಿತಿಯ ಮೇಲೆ ಎಲ್ಲರ ಗಮನವಿದೆ.   ಸೆಪ್ಟೆಂಬರ್ 7 ರಂದು ಚಂದ್ರನ ಮೇಲೆ ಉಪಗ್ರಹ ಲ್ಯಾಂಡ್ ಆಗಲಿದೆ.ಆ ದಿನ ನಸುಕಿನ 1.40ಕ್ಕೆ ಚಂದ್ರನ ಮೇಲೆ ಲ್ಯಾಂಡರ್ ಬಂದಿಳಿಯಲಿದೆ.ಇದಾಗಿ 2 ಗಂಟೆಯ ಬಳಿಕ ರ್ಯಾಂಪ್ ತೆರೆದುಕೊಳ್ಲಲಿದೆ.ಮೂರು ಗಂಟೆಯ ತರುವಾರ ಸೋಲಾರ್ ಪ್ಯಾನಲ್ ತೆರೆದುಕೊಳ್ಳುತ್ತದೆ.ಬಳಿಕ ರೋವರ್ ಹೊರಬರುತ್ತದೆ, ಒಟ್ಟಾರೆ ಪ್ರಕ್ರಿಯೆ ಐದಾರು ಗಂಟೆಗಳಲ್ಲಿ ಮುಗಿಯಲಿದೆ. ಎಂದು ಇಸ್ರೋ ಅಧ್ಯಕ್ಷರು ವಿವರಿಸಿದ್ದಾರೆ.

ಶುಕ್ಲಪಕ್ಷದ ಹದಿನಾಲ್ಕು ದಿನಗಳ ಕಾಲ ಲ್ಯಾಂಡರ್ ಹಾಗೂ ರೋವರ್ ಹಲವು ವಿಷಯಗಳ ಸಂಸೋಧನೆ ನಡೆಸಲಿದ್ದು ರೋವರ್ ಚಂದ್ರನಲ್ಲಿನ ನೀರು, ಖನಿಜ, ಕಂಪನ ಸೇರಿ ಹಲವಾರು ಮಾಹಿತಿಯನ್ನು ಕಲೆ ಹಾಕಲಿದೆ.ಆರ್ಬಿಟರ್ ಒಂದು ವರ್ಷ ಕಾಲ ಚಂದ್ರನ ಸುತ್ತ ಪರಿಭ್ರಮಣ ಮಾಡಲಿದೆ ಎಂದು ಅವರು ಹೇಳಿದ್ದಾರೆ. ಆ ವೇಳೆ ಅದು ಚಂದ್ರನ ಬಾಹ್ಯಗೋಳವನ್ನು (ಹೊರಗಿನ ವಾತಾವರಣ) ಅಧ್ಯಯನ ಮಾಡುತ್ತದೆ.ಲ್ಯಾಂಡರ್ ಮೇಲ್ಮೈ ಮತ್ತು ಉಪ-ಮೇಲ್ಮೈ ವಿಜ್ಞಾನ ಪ್ರಯೋಗಗಳನ್ನು ನಡೆಸಲು ಮೂರು ವೈಜ್ಞಾನಿಕ ಪೇಲೋಡ್‌ಗಳನ್ನು ಹೊಂದಿದೆ. ಚಂದ್ರನ ಮೇಲ್ಮೈಯ ತಿಳುವಳಿಕೆಯನ್ನು ಹೆಚ್ಚಿಸಲು ರೋವರ್ ಎರಡು ಪೇಲೋಡ್‌ಗಳನ್ನು ಒಯ್ಯುತ್ತದೆ ಎಂದು ಅವರು ಹೇಳಿದ್ದಾರೆ.

SCROLL FOR NEXT