ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನ-2: ಚಂದ್ರನ ಕಕ್ಷೆಯ ಕುಶಲತೆ ಪರೀಕ್ಷೆ ಪೂರ್ಣ

Raghavendra Adiga

ಬೆಂಗಳೂರು: ಚಂದ್ರಯಾನ -2 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯಲ್ಲಿ ಎರಡನೇ ಸುತ್ತಿನ ಚಲನೆಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಹೇಳಿದೆ. ಚಂದ್ರಯಾನ -2 ಚಂದ್ರನ ಮೇಲಿಳಿಯುವ ಸಲುವಾಗಿ ಇದಾಗಲೇ ಚಂದ್ರನ ಕಕ್ಷೆ ಸೇರಿದೆ.

ಇದುವರೆಗೆ ಬಾಹ್ಯಾಕಾಶ ನೌಕೆಯ ಎಲ್ಲಾ ನಿಯತಾಂಶಗಳು ಸಾಮಾನ್ಯವಾಗಿದೆ.ಎಂದು ಬೆಂಗಳೂರಿನ ಪ್ರಧಾನ ಕಛೇರಿ ಪ್ರಕಟಣೆ ಹೇಳಿದೆ.

ಚಂದ್ರಯಾನ-2 ಗಗನನೌಕೆಯ ಚಂದ್ರನ ಕಕ್ಷೆಯಲ್ಲಿನ ಪಯಣ ನಿಗದಿಯಂತೆ ಸಾಗಿದ್ದು ಬುಧವಾರ (ಆಗಸ್ಟ್ 21, 2019) 12.50 ಗಂಟೆಗೆ ಎರಡನೇ ಬಾರಿಗೆ ಕಕ್ಷೆಯ ಕುಶಲತೆಯನ್ನುಯೋಜಿಸಿದಂತೆ ಆನ್‌ಬೋರ್ಡ್ ಪ್ರೊಪಲ್ಷನ್ ಸಿಸ್ಟಮ್ ಬಳಸಿ ಯಶಸ್ವಿಯಾಗಿ ನಡೆಸಲಾಯಿತು. ಇದರ ಅವಧಿ 1228 ಸೆಕೆಂಡುಗಳು ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನೊಂದು ಹಂತದ ಕುಶಲತೆಯ ಪರೀಕ್ಷೆಯು ಆಗಸ್ಟ್ 28, 2019 ರಂದು 05.30-06.30 ಗಂಟೆಗಳ ನಡುವೆ ನಿಗದಿಯಾಗಿದೆ.

SCROLL FOR NEXT