ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನ-2 ದಿಂದ ಚಂದ್ರನ ಮೊದಲ ಚಿತ್ರ ಸೆರೆ 

Srinivas Rao BV

ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿರುವ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಬಾಹ್ಯಾಕಾಶ ನೌಕೆ ಮೊದಲ ಚಿತ್ರವನ್ನು ಸೆರೆ ಹಿಡಿದಿದೆ. 

ಚಂದ್ರನ ಮೇಲ್ಮೈ ನಿಂದ 2,650 ಕಿ.ಮೀ ಎತ್ತರದಲ್ಲಿ ಆ.21 ರಂದು ಚಿತ್ರವನ್ನು ಸೆರೆ ಹಿಡಿದಿದ್ದು ಇಸ್ರೋ ಈ ಬಗ್ಗೆ ಹೆಮ್ಮೆಯಿಂದ ಟ್ವೀಟ್ ಮಾಡಿದೆ. "ಚಂದ್ರಯಾನ-2 ಮೊದಲ ಚಿತ್ರ ಸೆರೆ ಹಿಡಿದಿದೆ, ಚಂದ್ರನ ಮೇಲ್ಮೈ ನಲ್ಲಿನ ಮೇರೆ ಓರಿಯಂಟೇಲ್ ಮತ್ತು ಅಪೊಲೊ ಕುಳಿಗಳನ್ನು ಚಿತ್ರದಲ್ಲಿ ಗುರುತಿಸಬಹುದಾಗಿದೆ" ಎಂದು ಇಸ್ರೋ ಟ್ವೀಟ್ ಮಾಡಿದೆ. 

ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿರುವ ನೌಕೆ, ದಕ್ಷಿಣ ಧೃವದಲ್ಲಿ ಇಳಿಯುವುದಕ್ಕೆ ಅಗತ್ಯವಿರುವ ಪ್ರಕ್ರಿಯೆಗಳ ಪೈಕಿ ಒಂದನ್ನು ಆ.21 ರಂದು ಪೂರ್ಣಗೊಳಿಸಿದೆ. ಇದು ಎರಡನೇ ಯಶಸ್ವಿ ಪ್ರಕ್ರಿಯೆಯಾಗಿದ್ದು, ಇಂತಹದ್ದೇ ಮತ್ತೊಂದು ಪ್ರಕ್ರಿಯೆ ಆ. 28 ರಂದು ಪೂರ್ಣಗೊಳ್ಳಲಿದೆ. ನಂತರ ಆ.30 ರಂದು ಮತ್ತೊಂದು ಪ್ರಕ್ರಿಯೆ ಬಳಿಕ ಸೆ.1 ರಂದು ಅಂತಿಮವಾಗಿ ಚಂದ್ರನ ದಕ್ಷಿಣ ಧೃವಕ್ಕೆ ಬಾಹ್ಯಾಕಾಶ ನೌಕೆ ಇಳಿಯಲಿದೆ. 

SCROLL FOR NEXT