ವಿಜ್ಞಾನ-ತಂತ್ರಜ್ಞಾನ

ಚಂದ್ರನ ಮೇಲೆ ಗಿಡ ಚಿಗುರಿಸಿದ ಚೀನಾ!

Srinivas Rao BV
ಬೀಜಿಂಗ್: ಪ್ರಕೃತಿಗೆ ಸೆಡ್ಡು ಹೊಡೆದು ನಿಸರ್ಗಕ್ಕೆ ಪರ್ಯಾಯವದ ಸೃಷ್ಟಿಯನ್ನು ಕರಗತ ಮಾಡಿಕೊಂಡಿರುವ ಚೀನಾ, ಈಗ ಮತ್ತೊಂದು ಮೈಲಿಗಲ್ಲು ತಲುಪಿದೆ. 
ಚಂದ್ರನ ಮೇಲ್ಮೈ ನಲ್ಲಿ ಗಿಡವೊಂದನ್ನು ಚಿಗುರಿಸುವಲ್ಲಿ ಚೀನಾ ಯಶಸ್ವಿಯಾಗಿದೆ. ಭೂಮಿಯ ಉಪಗ್ರಹದ ಮೇಲೆ ತನ್ನ ಗಿಡ ಮೊಳಕೆಯೊಡೆದಿರುವುದರ ಚಿತ್ರವನ್ನು ಚೀನಾ ಬಾಹ್ಯಾಕಾಶ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. 2018 ರ ಜ.03 ರಂದು ಭೂಮಿಗೆ ಗೋಚರವಾಗದ ಚಂದ್ರನ ಮತ್ತೊಂದು ಭಾಗದ ಮೇಲೆ ಚೀನಾದ ಚ್ಯಾಂಗ್ ಇ-4 ಬಾಹ್ಯಾಕಾಶ ನೌಕೆ ಇಳಿದಿತ್ತು. ಚಂದ್ರನ ಮೇಲೆ ಇಳಿಯುತ್ತಲೇ ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಹತ್ತಿ ಬೀಜವನ್ನು ಬಿತ್ತಿದ್ದರು. ಈಗ ಅದು ಚಿಗುರೊಡೆದಿದೆ. 
ಭವಿಷ್ಯದಲ್ಲಿ ಚಂದ್ರನ ಮೇಲ್ಮೈ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಚೀನಾದ ಈ ಸಂಶೋಧನೆ ಮಾರ್ಗದರ್ಶನವಾಗಲಿದ್ದು,  ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಮಹತ್ತರವಾದ ಮೈಲಿಗಲು ಸ್ಥಾಪಿಸಿದೆ. ಚೀನಾದ ವಿವಿಯಲ್ಲಿ ತಯಾರಾದ ಸುಮಾರು 7 ಇಂಚಿನ ಕಂಟೇನರ್ ನಲ್ಲಿ ಈ ಪ್ರಯೋಗ ಮಾಡಲಾಗಿದ್ದು, ಗಿಡಗಳ ಬೆಳವಣಿಗೆಗೆ ಸಹಕಾರಿಯಾಗಿರುವ ಉಷ್ಣತೆಯನ್ನು ಕಾಪಾಡುವುದು ಈಗ ಸವಾಲಿನ ಸಂಗತಿಯಾಗಿದೆ. 
ಚಂದ್ರನ ಮೇಲೆ ಇಳಿದಿದ್ದ ಚ್ಯಾಂಗ್ ಇ-4 ಬಾಹ್ಯಾಕಾಶ ನೌಕೆಯ ಉಪಕರಣಗಳನ್ನು ಸ್ವೀಡನ್, ಜರ್ಮನಿ ಹಾಗೂ ಚೀನಾದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದರು.  ಚೀನಾದ ಬಾಹ್ಯಾಕಾಶ ಸಂಸ್ಥೆ ಇನ್ನೂ 4 ಲೂನಾರ್ ಮಿಷನ್ ಗಳನ್ನು ಹೊಂದಿದ್ದು ಚಂದ್ರನಿಂದ ಸ್ಯಾಂಪಲ್ ಗಳನ್ನು ತರಲು ಉದ್ದೇಶಿಸಲಾಗಿದೆ. 
SCROLL FOR NEXT