ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನ-2:ಇಸ್ರೋ ಯಶಸ್ಸಿನ ಬಗ್ಗೆ ನಾಸಾ ಹೇಳಿದ್ದಿಷ್ಟು!

Srinivas Rao BV
ಚಂದ್ರಯಾನ-2 ಉಡಾವಣೆ ಯಶಸ್ವಿಯಾಗಿದ್ದು, ಇಸ್ರೋ ಮೈಲಿಗಲ್ಲಿಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿನಂದನೆಗಳನ್ನು ತಿಳಿಸಿದೆ. 
ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಭಾರತ ಏನನ್ನು ಅರಿತುಕೊಳ್ಳಲಿದೆ ಎಂಬುದನ್ನು ತಿಳಿಯಲು ನಾಸಾ ಕಾತುರವಾಗಿರುವುದಾಗಿ ನಾಸಾ ಹೇಳಿದೆ. 
"ಚಂದ್ರಯಾನ-2 ರ ಯಶಸ್ಸಿಗಾಗಿ ಇಸ್ರೋಗೆ ಅಭಿನಂದನೆಗಳು, ಇಸ್ರೋ ಮಿಷನ್ ನ್ನು ಬೆಂಬಲಿಸುವುದು ನಮಗೆ ಹೆಮ್ಮೆಯ ವಿಷಯ. ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಭಾರತ ಏನನ್ನು ಅರಿತುಕೊಳ್ಳಲಿದೆ ಎಂಬುದನ್ನು ನಾವು ಎದುರು ನೋಡುತ್ತಿದ್ದೇವೆ, ಕೆಲವೇ ವರ್ಷಗಳಲ್ಲಿ ನಾವೂ ಸಹ ಚಂದ್ರನ ದಕ್ಷಿಣ ಧ್ರುವಕ್ಕೆ ಗಗನಯಾತ್ರಿಗಳನ್ನು ಕಳಿಸಲಿದ್ದೇವೆ ಎಂದು ನಾಸಾ ಟ್ವೀಟ್ ಮಾಡಿದೆ. 
ಮೊದಲ ಬಾರಿಗೆ ಚಂದ್ರನ ಮೇಲ್ಮೈ ಯಲ್ಲಿ ಗಗನಯಾತ್ರಿಗಳನ್ನು ಇಳಿಸಿದ ನಾಸಾದ ಯಶಸ್ಸಿಗೆ  ಜು.20 ಕ್ಕೆ  50 ವರ್ಷಗಳಾಗಿವೆ. ಈಗ ಚಂದ್ರನ ದಕ್ಷಿಣ ಧ್ರುವಕ್ಕೆ ಗಗನಯಾತ್ರಿಗಳನ್ನು ಕಳಿಸುವ ತಯಾರಿಯಲ್ಲಿದೆ ನಾಸಾ.
SCROLL FOR NEXT