ವಿಜ್ಞಾನ-ತಂತ್ರಜ್ಞಾನ

ಮಂಗಳ ಗ್ರಹದ ಮೇಲೆ ಮೊದಲು ಇಳಿಯುವ ಜೀವಿಯ ಬಗ್ಗೆ ಬಹಿರಂಗಪಡಿಸಿದ ನಾಸಾ

Srinivas Rao BV
ಮಂಗಳ ಗ್ರಹಕ್ಕೆ ಮಾನವ ಸಹಿತ ಯಾನ ಕೈಗೊಳ್ಳುವುದು ನಾಸಾದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ಈಗ ಈ ಮಾನವ ಸಹಿತ ಮಂಗಳಯಾನದ ಬಗ್ಗೆ ನಾಸಾ ಮತ್ತೊಂದು ಮಾಹಿತಿಯನ್ನು ಬಹಿರಂಗಗೊಳಿಸಿದೆ. 
ನಾಸಾದ ಆಡಳಿತಾಧಿಕಾರಿ ಜಿಮ್ ಬ್ರಿಡೆನ್ಸ್ಟೈನ್ ಮಾನವ ಸಹಿತ ಮಂಗಳಯಾನದ ಬಗ್ಗೆ ಮಾತನಾಡಿದ್ದು, ಮಂಗಳ ಗ್ರಹದ ಮೇಲೆ ಕಾಲಿರಿಸುವ ಮೊದಲ ಜೀವಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. 
ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ಮುಂದಿನ ಯೋಜನೆಗಳಿಗೆ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ಆದ್ದರಿಂದ ನಿಶ್ಚಿತವಾಗಿ ಮಂಗಳ ಗ್ರಹದ ಮೇಲೆ ಮೊದಲು ಕಾಲಿರಿಸುವುದು ಓರ್ವ ಮಹಿಳೆ ಎಂದು ಜಿಮ್ ಬ್ರಿಡೆನ್ಸ್ಟೈನ್ ಹೇಳಿದ್ದಾರೆ. 
ಇದೇ ವೇಳೆ ಮಹಿಳೆಯರು ಚಂದ್ರನ ಅಂಗಳಕ್ಕೂ ಹೋಗಲಿದ್ದಾರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಅವರು, ಚಂದ್ರ ಹಾಗೂ ಮಂಗಳ ಗ್ರಹ ಎರಡರ ಮೇಲೆ ಮುಂದಿನ ದಿನಗಳಲ್ಲಿ ಮಹಿಳೆಯರು ಹೋಗಲಿದ್ದಾರೆ ಎಂದಿದ್ದಾರೆ.
ನಾಸಾ ಇತ್ತೀಚೆಗಷ್ಟೇ ಸಂಪೂರ್ಣವಾಗಿ ಮಹಿಳಾ ತಂಡದ ಬಾಹ್ಯಾಕಾಶ ಯಾನವನ್ನು ಘೋಷಿಸಿತ್ತು. ಈ ಬೆನ್ನಲ್ಲೇ ಮಂಗಳ ಗ್ರಹಕ್ಕೆ ಮಹಿಳೆಯನ್ನು ಕಳಿಸುವ ಕುರಿತೂ ಮಾಹಿತಿ ನೀಡಿದೆ. 
SCROLL FOR NEXT