ವಿಜ್ಞಾನ-ತಂತ್ರಜ್ಞಾನ

ಮೊದಲ ಬಾರಿಗೆ ಚಂದ್ರನ ಮೇಲೆ ಮಹಿಳೆಯನ್ನು ಕಳುಹಿಸಲು ನಾಸಾ ಸಿದ್ಧತೆ

Shilpa D
ವಾಷಿಂಗ್ಟನ್: ಮಾನವನ ಚಂದ್ರಯಾನ ಪ್ರಯಾಣ 49ನೇ ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿದ್ದು, 2024ರಲ್ಲಿ ಮೊದಲ ಬಾರಿಗೆ ಪುರುಷ ಹಾಗೂ ಮಹಿಳೆ ಇಬ್ಬರನ್ನು ಚಂದ್ರನ ಮೇಲೆ ಕಳುಹಿಸಲು ನಾಸಾ ಸಿದ್ಧತೆ ನಡೆಸುತ್ತಿದೆ.
ಚಂದ್ರನ ಮೇಲೆ ಪುರುಷ ಹಾಗೂ ಮಹಿಳೆಯನ್ನು ಕಳುಹಿಸಿಕೊಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಅವರು 2020ನೇ ಆರ್ಥಿಕ ವರ್ಷದಲ್ಲಿ 1.6 ಬಿಲಿಯನ್ ಅಮೆರಿಕನ್ ಡಾಲರ್ ಬಿಡುಗಡೆಗೊಳಿಸಲು ಅನುಮೋದನೆ ನೀಡಿದ್ದಾರೆ ಎಂದು ನಾಸಾ ಆಡಗಾರ ಜಿಮ್ ಬ್ರೈಡ್ ಸ್ಟಿನ್ ತಿಳಿದ್ದಾರೆ.
ಚಂದ್ರನ ದಕ್ಷಿಣ ಧೃವದ ಮೇಲೆ ಪರುಷ ಹಾಗೂ ಮಹಿಳೆಯನ್ನು ಕಳುಹಿಸಿಕೊಡಲು ಅಮೆರಿಕ ಅಧ್ಯಕ್ಷರು ನಾಸಾಕ್ಕೆ ಎಲ್ಲಾ ಅಧಿಕಾರಗಳನ್ನು ನೀಡಿದ್ದಾರೆ. 2020ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ನಲ್ಲಿ ನಾಸಾಕ್ಕೆ ಹಣ ಒದಗಿಸುವ ಮೂಲಕ ಟ್ರಂಪ್ ಅವರು ನಮ್ಮ ಕೆಲಸದಲ್ಲಿ ವಿಶ್ವಾಸಮತವನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದ್ದಾರೆ.
ಹಣಕಾಸು ನೆರವು, ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ ಮತ್ತು ಮಾನವ ಚಂದ್ರನ ಲ್ಯಾಂಡಿಂಗ್ ಸಿಸ್ಟಮ್ ಅಭಿವೃದ್ಧಿಯನ್ನು ವೃದ್ಧಿಸಲಿದೆ.ಅಷ್ಟೇ ಅಲ್ಲ ರೊಬೋಟ್ ಪರಿಶೋಧನೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಅವರು ತಿಳಿಸಿದ್ದಾರೆ.
SCROLL FOR NEXT