ಕೊರೋನಾ ವೈರಾಣು ವುಹಾನ್ ಲ್ಯಾಬ್ ನಲ್ಲಿ ಮನುಷ್ಯ ಸೃಷ್ಟಿಸಿದ್ದು: ನೊಬೆಲ್ ಪ್ರಶಸ್ತಿ ವಿಜೇತ ವೈರಾಲಜಿಸ್ಟ್ 
ವಿಜ್ಞಾನ-ತಂತ್ರಜ್ಞಾನ

ಕೊರೋನಾ ವೈರಾಣು ವುಹಾನ್ ಲ್ಯಾಬ್ ನಲ್ಲಿ ಮನುಷ್ಯ ಸೃಷ್ಟಿಸಿದ್ದು: ನೊಬೆಲ್ ಪ್ರಶಸ್ತಿ ವಿಜೇತ ವೈರಾಲಜಿಸ್ಟ್

ಕೊರೋನಾ ವೈರಸ್ ಮನುಷ್ಯನ ಸೃಷ್ಟಿ ಎಂಬ ಆರೋಪವನ್ನು ಫ್ರೆಂಚ್ ವೈರಾಲಜಿಸ್ಟ್ ಮಾಡಿದ್ದಾರೆ. 

ಪ್ಯಾರಿಸ್: ಕೊರೋನಾ ವೈರಸ್ ಮನುಷ್ಯನ ಸೃಷ್ಟಿ ಎಂಬ ಆರೋಪವನ್ನು ಫ್ರೆಂಚ್ ವೈರಾಲಜಿಸ್ಟ್ ಮಾಡಿದ್ದಾರೆ. 

ಏಡ್ಸ್ ವೈರಸ್ ಗೆ ಸಂಬಂಧಿಸಿದಂತೆ ನಡೆದ ಸಂಶೋಧನೆಯಲ್ಲಿ ಸಹ-ಸಂಶೋಧಕರಾಗಿದ್ದ ಪ್ರೆಂಚ್ ವೈರಾಲಜಿಸ್ಟ್ ಲುಕ್ ಮೊಂಟಾಗ್ನಿಯರ್ ಈ ಆರೋಪ ಮಾಡಿದ್ದಾರೆ. 2008 ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

ಈಗ ಕೊರೋನಾ ವೈರಸ್ ಬಗ್ಗೆ ಮಾತನಾಡಿರುವ ಮೊಂಟಾಗ್ನಿಯರ್, ಚೀನಾದ ಪ್ರಯೋಗಾಲಯದಲ್ಲಿ ಏಡ್ಸ್ ವೈರಸ್ ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ಈ ವೈರಸ್ ನ್ನು ಮನುಷ್ಯನೇ ಸೃಷ್ಟಿಸಿದ್ದಾನೆ. ಇದು ನೈಸರ್ಗಿಕವಾಗಿ ಉತ್ಪತ್ತಿಯಾಗಿರುವ ವೈರಸ್ ಅಲ್ಲ. ಮಾನವ ಸೃಷ್ಟಿ ವೈರಸ್ ಎಂದು ಹೇಳಿದ್ದಾರೆ. 

ಪ್ರೆಂಚ್ ನ ಸುದ್ದಿವಾಹಿನಿಯೊಂದು ನಡೆಸಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಲ್ಯೂಕ್ ಮೊಂಟಾಗ್ನಿಯರ್, ಕೊರೋನಾ ವೈರಸ್ ನ ಜೀನೋಮ್ (ಜೀವಕೋಶಗಳ ಗುಚ್ಛ)ದಲ್ಲಿ ಹೆಚ್ಐವಿ ಅಂಶಗಳು, ಮಲೇರಿಯಾ ವೈರಾಣು ಇರುವುದು ಪತ್ತೆಯಾಗಿದೆ. ಇದು  ಸ್ವಾಭಾವಿಕವಾಗಿ ಕಾಣಲು ಸಾಧ್ಯವಿಲ್ಲ ಆದ್ದರಿಂದ ಕೊರೋನಾ ವೈರಸ್ ನ ಜೀನೋಮ್ ಅತ್ಯಂತ ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ.  

2000 ರಿಂದಲೂ ಚೀನಾದ ವುಹಾನ್ ರಾಷ್ಟ್ರೀಯ ಬಯೋ ಸೇಫ್ಟಿ ಲ್ಯಾಬೊರೇಟ್ರಿಯಲ್ಲಿ ಇಂತಹ ಕೊರೋನ ವೈರಸ್ ಗಳಲ್ಲಿ ಪರಿಣತಿ ಪಡೆದಿದೆ. ಇಲ್ಲಿಂದಲೇ ಆಕಸ್ಮಿಕವಾಗಿ ಬಂದಿರಬೇಕು ಎಂದು ಮೊಂಟಾಗ್ನಿಯರ್ ಹೇಳಿದ್ದಾರೆ.

ಕೊರೋನಾ ವೈರಸ್ ಸೋರಿಕೆಯಾಗಿರುವುದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಮೆರಿಕ ಹೇಳಿತ್ತು. ಇದಾದ ಬೆನ್ನಲ್ಲೇ ಫ್ರೆಂಚ್ ನ ವೈರಾಲಜಿಸ್ಟ್ ಈ ಹೇಳಿಕೆ ನೀಡಿದ್ದಾರೆ. 

ಏಡ್ಸ್ ಹಾಗೂ ಪಾರ್ಕಿನ್ಸನ್ ಸಮಸ್ಯೆಗಳಿಗೆ ಪಪಾಯದಿಂದ ಉಂಟಾಗುವ ಉಪಯೋಗಗಳು, ಡಿಎನ್ಎ ಯಿಂದ ವಿದ್ಯುತ್ಕಾಂತೀಯ ಅಲೆಗಳು ಹೊರಹೊಮ್ಮುವುದು ಹೀಗೆ ಲ್ಯೂಕ್ ಮೊಂಟಾಗ್ನಿಯರ್ ಅವರ ಹಲವು ಸಂಶೋಧನಾ ಕೃತಿಗಳು ವಿವಾದಗಳಿಗೆ ಗುರಿಯಾಗಿತ್ತು. ವೈಜ್ಞಾನಿಕ ಸಮುದಾಯವೂ ಈ ಬಗ್ಗೆ ಟೀಕಿಸಿತ್ತು. ಫ್ರೆಂಚ್ ವೈರಾಲಜಿಸ್ಟ್ ಎಟಿಯೆನ್ ಸೈಮನ್-ಲೋರಿಯೆರ್ ಮೊಂಟಾಗ್ನಿಯರ್ ಅವರ ಹೇಳಿಕೆಗಳನ್ನು ಅಲ್ಲಗಳೆದಿದ್ದು, ಕೊರೋನಾ ವೈರಸ್ ನ ಸಮುದಾಯದ ಬೇರೆ ವೈರಾಣುಗಳಲ್ಲಿಯೂ ಮೊಂಟಾಗ್ನಿಯರ್ ಅವರು ಹೇಳಿರುವ ಅಂಶಗಳಿರುತ್ತವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT