ವಿಜ್ಞಾನ-ತಂತ್ರಜ್ಞಾನ

ಜಾಗತಿಕ ಮಟ್ಟದಲ್ಲಿ ಫೇಸ್ ಬುಕ್ ನಕಲಿ ಖಾತೆಗಳ ಸಂಖ್ಯೆ ಎಷ್ಟು ಗೊತ್ತೇ?

Srinivas Rao BV

ಹೈದರಾಬಾದ್: ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದಷ್ಟೂ ನಕಲಿ ಖಾತೆಗಳ ಹಾವಳಿ ಹೆಚ್ಚಾಗುತ್ತಿದೆ. 

2019 ರ ಡಿ.31 ರ ಅಂಕಿ-ಅಂಶಗಳ ಪ್ರಕಾರ ಫೇಸ್ ಬುಕ್ 2.50 ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರಿದ್ದು, ಈ ಪೈಕಿ 275 ಮಿಲಿಯನ್ ಬಳಕೆದಾರರ ಖಾತೆ ನಕಲಿ ಎಂದು ಗುರುತಿಸಲಾಗಿದೆ. 

ಫೇಸ್ ಬುಕ್ ನ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 2019 ರ ಡಿ.31 ರಿಂದ 2019 ರ ಡಿಸೆಂಬರ್ 31 ವರೆಗೆ  ಮಾಸಿಕ ಸಕ್ರಿಯ ಬಳಕೆದಾರರು ಶೇ.08 ರಷ್ಟು ಏರಿಕೆಯಾಗಿದೆ. ಇಂಡೋನೇಷ್ಯಾ, ಭಾರತ, ಫಿಲಿಪೇನ್ಸ್ ಗ್ರಾಹಕರ ಏರಿಕೆಯ ಪ್ರಮುಖ ಮೂಲಗಳಾಗಿವೆ. 

ವಿಶ್ವಾದ್ಯಂತ ಇರುವ ಮಾಸಿಕ ಸಕ್ರಿಯ ಬಳಕೆದಾರರ ಪೈಕಿ ಶೇ.11 ರಷ್ಟು ನಕಲಿ ಖಾತೆಗಳಾಗಿವೆ. ಅಭಿವೃದ್ಧಿ ಹೊಂದಿರುವ ಮಾರುಕಟ್ಟೆಗಳಿಗೆ ಹೋಲಿಕೆ ಮಾಡಿದರೆ ಫಿಲಿಪೇನ್ಸ್, ವಿಯೆಟ್ನಾಮ್ ನಂತಹ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳಲ್ಲಿ ನಕಲಿ ಖಾತೆಗಳು ಹೆಚ್ಚಿವೆ ಎಂದು ಫೇಸ್ ಬುಕ್ ತಿಳಿಸಿದೆ. 

ನಕಲಿ ಖಾತೆಗಳು ಹಾಗೂ ಉದ್ಯಮ ಅಥವಾ ಇನ್ನಿತರ ಕಾರಣಗಳಿಗಾಗಿ ಪೇಜ್ ಗಳನ್ನು ಸೃಷ್ಟಿಸುವುದಕ್ಕೆ ಬಳಕೆ ಮಾಡುವ ಖಾತೆಗಳು ಅಂದಾಜಿಸಿರುವುದಕ್ಕಿಂತಲೂ ಹೆಚ್ಚಿರವಹುದು ಎಂದು ಫೇಸ್ ಬುಕ್ ಹೇಳಿದೆ.

SCROLL FOR NEXT