ವಿಜ್ಞಾನ-ತಂತ್ರಜ್ಞಾನ

ಸೂರ್ಯನ ಸನಿಹದಲ್ಲಿ ಫೋಟೋ ಕ್ಲಿಕ್ಕಿಸಿದ ಸೋಲಾರ್ ಆರ್ಬಿಟರ್

Srinivas Rao BV

ವಾಷಿಂಗ್ ಟನ್: ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ಯುರೋಪಿನ ಬಾಹ್ಯಾನಾಶ ಸಂಸ್ಥೆ ESA ಜಂಟಿಯಾಗಿ ತಯಾರಿಸಿರುವ ಸೋಲಾರ್ ಅರ್ಬಿಟರ್ ಬಾಹ್ಯಾಕಾಶ ನೌಕೆ ಸೂರ್ಯನಿಗೆ ಅತ್ಯಂತ ಸನಿಹದಲ್ಲಿ ಫೋಟೋ ಕ್ಲಿಕ್ಕಿಸಿ ಕಳಿಸಿದೆ.

2020 ರ ಫೆ.9 ರಂದು ಉಡಾವಣೆಯಾಗಿದ್ದ ಸೋಲಾರ್ ಆರ್ಬಿಟರ್ ಜೂನ್ ಮಧ್ಯಭಾಗದಲ್ಲಿ ಸೂರ್ಯನ ಅತ್ಯಂತ ಸನಿಹದಲ್ಲಿ ಹಾದು ಹೋಗಿತ್ತು. ಈಗ ಸೋಲಾರ್ ಆರ್ಬಿಟರ್ ಸೂರ್ಯನಿಗೆ ಅತ್ಯಂತ ಸನಿಹದಲ್ಲಿ ಮೊದಲ ಚಿತ್ರಗಳು ಲಭ್ಯವಾಗಿದೆ.

ಈ ಚಿತ್ರಗಳು ಈ ಹಿಂದೆಂದೂ ಕಂಡಿರದ ಅಪರೂಪದ ಚಿತ್ರಗಳಾಗಿದ್ದು, ಸೂರ್ಯನ ಅತ್ಯಂತ ಸನಿಹದಲ್ಲಿ ಕ್ಲಿಕ್ಕಿಸಿರುವುದಾಗಿದೆ ಎಂದು ನಾಸಾದ ಪ್ರಾಜೆಕ್ಟ್ ವಿಜ್ಞಾನಿ ಹಾಲಿ ಗಿಲ್ಬರ್ಟ್ ಹೇಳಿದ್ದಾರೆ. 

ಈ ಚಿತ್ರಗಳು ಸೂರ್ಯನ ವಾತಾವರಣದ ಪದರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಲಿದ್ದು, ಭೂಮಿಯ ಬಳಿ ಹಾಗೂ ಸೌರ ಮಂಡಲದಲ್ಲಿ ಬಾಹ್ಯಾಕಾಶದ ಹವಾಮಾನದ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ವಿಜ್ಞಾನಿ ಹೇಳಿದ್ದಾರೆ.

ಬಾಹ್ಯಾಕಾಶ ನೌಕೆ ಸೂರ್ಯನಿಂದ 48 ಮಿಲಿಯನ್ ಮೈಲಿಗಳ ದೂರದಲ್ಲಿ ಹಾದು ಹೋಗಿದ್ದು, ಜೂ.15 ರಂದು ಸೋಲಾರ್ ಸೋಲಾರ್ ಆರ್ಬಿಟರ್ ಸೂರ್ಯನ ಸನಿಹದಿಂದ ಫೋಟೋ ಕ್ಲಿಕ್ಕಿಸಿದೆ.

SCROLL FOR NEXT