ವಿಜ್ಞಾನ-ತಂತ್ರಜ್ಞಾನ

ಕೋವಿಡ್-19: 24 ದಿನಗಳಲ್ಲಿ 1.2 ಲಕ್ಷ ವೆಂಟಿಲೇಟರ್ ಗಳ ಬಿಡಿಭಾಗ ಹೆಚ್ ಪಿ ಇಂಡಿಯಾದಿಂದ 3ಡಿ ಪ್ರಿಂಟ್! 

Srinivas Rao BV

ನವದೆಹಲಿ: ಕೋವಿಡ್-19 ರೋಗಿಗಳಿಗಾಗಿ ವೆಂಟಿಲೇಟರ್ ಗಳಿಗೆ ಅಗತ್ಯವಿರುವ ಬಿಡಿಭಾಗಗಳನ್ನು ಹೆಚ್ ಪಿ ಇಂಡಿಯಾ 3ಡಿ ಪ್ರಿಂಟ್ ಮಾಡಿದೆ. 

ಕೇವಲ 24 ದಿನಗಳಲ್ಲಿ 1.2 ಲಕ್ಷ ವೆಂಟಿಲೇಟರ್ ಬಿಡಿ ಭಾಗಗಳನ್ನು ತಯಾರಿಸಿದ್ದು, ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಮುಂಚೂಣಿಯಲ್ಲಿರುವ ಆರೋಗ್ಯ ಸೇವೆಗಳನ್ನು ಒದಗಿಸುವವರಿಗೆ ಸಹಕಾರಿಯಾಗಲಿದೆ.  

ಭಾರತದಲ್ಲಿ ರೆಡಿಂಗ್ಟನ್ 3D ಜೊತೆ ಒಪ್ಪಂದ ಮಾಡಿಕೊಂಡಿರುವ ಹೆಚ್ ಪಿ, "ಆಗ್ವಾ ಹೆಲ್ತ್‌ಕೇರ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಹೆಚ್ ಪಿಯ 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ಸಾಮರ್ಥ್ಯ ತಿಳಿಸುತ್ತದೆ ಎಂದು ಹೆಚ್ ಪಿ 3ಡಿ ಪ್ರಿಂಟಿಂಗ್, ಡಿಜಿಟಲ್ ಮ್ಯಾನ್ಯುಫಾಕ್ಚರಿಂಗ್, ಹೆಚ್ ಪಿ ಇಂಡಿಯಾ ಮಾರ್ಕೆಟ್ ನ ವ್ಯವಸ್ಥಾಪಕ ರಜತ್ ಮೆಹ್ತಾ ತಿಳಿಸಿದ್ದಾರೆ. 

ಸಾಂಪ್ರದಾಯಿಕ ಪ್ರಕ್ರಿಯೆಯಲ್ಲಿ, ಸಂಕೀರ್ಣ ವಿನ್ಯಾಸಗಳನ್ನು ಹೊಂದಿರುವ ವೆಂಟಿಲೇಟರ್ ಗಳ ಬಿಡಿ ಭಾಗಗಳನ್ನು ಈ ಪ್ರಮಾಣದಲ್ಲಿ ತಯಾರಿಸುವುದಕ್ಕೆ 4-5 ತಿಂಗಳುಗಳು ಬೇಕಾಗುತ್ತಿತ್ತು ಎಂದು ಮೆಹ್ತಾ ತಿಳಿಸಿದ್ದಾರೆ.

SCROLL FOR NEXT