ವಿಜ್ಞಾನ-ತಂತ್ರಜ್ಞಾನ

ಸೂಪರ್‌ ಫಾಸ್ಟ್‌ ಚಾರ್ಜರ್‌ ಸೌಲಭ್ಯ ಕಲ್ಪಿಸಲಿರುವ ಎಂಜಿ ಮೋಟಾರ್‌ ಇಂಡಿಯಾ

Srinivas Rao BV

ಬೆಂಗಳೂರು: ಎಲೆಕ್ಟ್ರಿಕ್‌ ವಾಹನ ವಿಭಾಗದಲ್ಲಿ ಕ್ರಾಂತಿ ತರುವ ಪ್ರಯತ್ನದಲ್ಲಿರುವ ಎಂಜಿ ಮೋಟಾರ್‌ ಇಂಡಿಯಾ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದಾದ್ಯಂತ ತನ್ನ ಡೀಲರ್‌ಶಿಪ್‌ ಮಳಿಗೆಗಳಲ್ಲಿ ಸೂಪರ್‌ ಫಾಸ್ಟ್‌ ಚಾರ್ಜರ್‌ ಸೌಲಭ್ಯ ಕಲ್ಪಿಸಲು ಮುಂದಾಗಿದೆ.

ಈ ಸೇವೆ ಒದಗಿಸುವ ಉದ್ದೇಶದಿಂದ ಟಾಟಾ ಪವರ್‌ ಸಂಸ್ಥೆ ಜೊತೆ ಎಂಜಿ ಮೋಟಾರ್‌ ಇಂಡಿಯಾ ಒಪ್ಪಂದ ಮಾಡಿಕೊಂಡಿದ್ದು 50ಕೆಡಬ್ಲ್ಯು ಡಿಸಿ ಸೂಪರ್‌ ಫಾಸ್ಟ್‌ ಚಾರ್ಜರ್ಸ್‌ ಒದಗಿಸಲಿದೆ. ಎಂಜಿ ಮೋಟಾರ್‌ ಜಡ್‌ಎಸ್‌ ಮತ್ತು ಇವಿ ವಾಹನ ಹೊಂದಿರುವ ಗ್ರಾಹಕರು ಈ ಚಾರ್ಜರ್‌ ಕೇಂದ್ರಗಳಲ್ಲಿ ತಮ್ಮ ವಾಹನವನ್ನು ವೇಗವಾಗಿ ಚಾರ್ಜ್‌ ಮಾಡಿಕೊಳ್ಳಬಹುದು. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶಾದ್ಯಂತ ಎಂಜಿ ಮೋಟಾರ್‌ ಇಂಡಿಯಾ ಸಂಸ್ಥೆಯು 10 ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರಗಳನ್ನು ಹೊಂದಿದೆ. ಟಾಟಾ ಪವರ್‌ ಸಂಸ್ಥೆಯು  19 ವಿವಿಧ ನಗರಗಳಲ್ಲಿ 180 ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಿದೆ.

“ಗ್ರಾಹಕರ ಅನುಕೂಲಕ್ಕಾಗಿ ಈ ಸೌಲಭ್ಯವನ್ನು ಕಲ್ಪಿಸಲು ನಾವು ಮುಂದಾಗಿದ್ದೇವೆ. ವಿದ್ಯುತ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಪವರ್‌ ಸಂಸ್ಥೆಯೊಂದಿದೆ ಒಪ್ಪಂದ ಮಾಡಿ ಕಾರ್ಯ ನಿರ್ವಹಿಸುವುದು ನಮಗೆ ಅತೀವ ಸಂತಸ ತಂದಿದೆ” ಎಂದು ಎಂಜಿ ಮೋಟಾರ್‌ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಚಾಬಾ ಹೇಳಿದರು.

SCROLL FOR NEXT