ವಿಜ್ಞಾನ-ತಂತ್ರಜ್ಞಾನ

ಕೊವಿಡ್-19 ನಕಲಿ ಸುದ್ದಿ ಪತ್ತೆ ಹಚ್ಚುವ ಚಾಟ್ ಬಾಟ್ ಕಂಡುಹಿಡಿದ ಬೆಂಗಳೂರು ಯುವಕ!

Lingaraj Badiger

ಬೆಂಗಳೂರು: ಹೊಸ-ಯುಗದ ಅಂತರ್ಜಾಲ ವ್ಯಾಪಕ ಪ್ರಮಾಣದ ಮಾಹಿತಿ ಪ್ರಸಾರಕ್ಕೆ ಸಾಕ್ಷಿಯಾಗಿದ್ದರೂ, ಕೆಲವು ನಕಲಿ ಸುದ್ದಿಗಳು ಮತ್ತು ಪರಿಶೀಲಿಸದ ಮೂಲಗಳಿಂದ ಬರುವ ಮಾಹಿತಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಇತ್ತೀಚಿಗೆ ನಕಲಿ ಸುದ್ದಿಗಳ ಹಾವಳಿ ಹೆಚ್ಚುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಬೆಂಗಳೂರಿನ ಯುವಕ ಯಶ್ ಜೈಸ್ವಾಲ್ ಅವರು ಚಾಟ್ ಬಾಟ್ ಎಂಬ ಹೊಸ ತಂತ್ರಜ್ಞಾನ ಕಂಡುಹಿಡಿದಿದ್ದಾರೆ.

20 ವರ್ಷದ ಯಶ್ ಜೈಸ್ವಾಲ್ ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿದ್ಯಾರ್ಥಿಯಾಗಿರುವ ಜೈಸ್ವಾಲ್ ಅವರು, ಕಳೆದ ಏಪ್ರಿಲ್ ನಲ್ಲಿ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯ ನಡೆಸಿದ ಅಂತರರಾಷ್ಟ್ರೀಯ ಹ್ಯಾಕ್ ಥಾನ್‌ನಲ್ಲಿ 200 ಡಾಲರ್ ನಗದು ಬಹುಮಾನವನ್ನು ಗೆದ್ದಿದರು. ಜೈಸ್ವಾಲ್ ಮತ್ತು ಅವರ ತಂಡವು ಈ 200 ಡಾಲರ್ ಬಹುಮಾನದ ಹಣವನ್ನು ಚಾರಿಟಿ ವಾಟರ್ಸ್ ಎಂಬ ಚಾರಿಟಿ ಟ್ರಸ್ಟ್‌ಗೆ ನೀಡಿತ್ತು.

ಜೈಸ್ವಾಲ್ ಅವರು ಈಗ ಸಾರ್ವಜನಿಕರಿಗೆ ವಿಶ್ವಾಸಾರ್ಹ ಸುದ್ದಿ ಮತ್ತು ಸುರಕ್ಷತಾ ಕ್ರಮಗಳನ್ನು ವಿತರಿಸಲು ಫೋನ್ ಸಂಖ್ಯೆಯಲ್ಲಿ ಹೋಸ್ಟ್ ಮಾಡಲಾದ ಎನ್‌ಎಲ್‌ಪಿ - ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್ - ಆಧಾರಿತ ಧ್ವನಿ / ಚಾಟ್‌ಬಾಟ್ ಅನ್ನು ಕಂಡುಹಿಡಿದಿದ್ದು, ಇದು ನಕಲಿ ಸುದ್ದಿಗಳನ್ನು ಪತ್ತೆ ಹಚ್ಚುತ್ತದೆ.

"ನನ್ನ ಈ ಚಾಟ್ ಬಾಟ್ ಆವೃತ್ತಿಯು ಗೊತ್ತುಪಡಿಸಿದ ಸಂಖ್ಯೆಗೆ ಫೋನ್ ಕರೆ ಮಾಡುವ ಮೂಲಕ ಜನರು ಇಂಟರ್ನೆಟ್ ಇಲ್ಲದೆ ಬಳಸುವ ಹಾಗೆ ವಿನ್ಯಾಸಗೊಳಿಸಲಾಗಿದೆ" ಎಂದು ಜೈಸ್ವಾಲ್ ಹೇಳಿದ್ದಾರೆ.

ಜೈಸ್ವಾಲ್ ಅವರು ಯುಎಸ್ಎ ಮತ್ತು ಇಂಡೋನೇಷ್ಯಾದ ಇತರ ಮೂರು ವಿದ್ಯಾರ್ಥಿಗಳೊಂದಿಗೆ ಸೇರಿ ಈ ಚಾಟ್ ಬಾಟ್ ಕಂಡು ಹಿಡಿದಿದ್ದಾರೆ.

ಬಳಕೆದಾರರು ವಿವರಗಳನ್ನು ಪಡೆಯಲು ಸಾಮಾನ್ಯ ಫೋನ್‌ನೊಂದಿಗೆ ಈ ಬಾಟ್‌ಗೆ ಯಾವುದೇ ಪ್ರಶ್ನೆಯನ್ನು ಕೇಳಬಹುದು. ಕೊವಿಡ್-19 ಸುದ್ದಿಗಳನ್ನು ಸಹ ಒದಗಿಸಲಾಗಿದೆ ಮತ್ತು ಬಳಕೆದಾರರ ಮನವಿ ಮೇರೆಗೆ ಇದು ಹತ್ತಿರದ ಮಾರಾಟಗಾರರೊಂದಿಗೆ ನಿಮ್ಮನ್ನು ಸಂಪರ್ಕಿಸುವ ಕಾರಣ ಅಗತ್ಯ ವಸ್ತುಗಳನ್ನು ಪಡೆಯಲು ಸಹ ಬಾಟ್ ಅನ್ನು ಬಳಸಬಹುದು ಎಂದು ಯಶ್ ಜೈಸ್ವಾಲ್ ಹೇಳುತ್ತಾರೆ.

SCROLL FOR NEXT