ವಿಜ್ಞಾನ-ತಂತ್ರಜ್ಞಾನ

ಇಸ್ರೋಗೆ ಅತಿದೊಡ್ಡ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್ ಪೂರೈಸಿದ ಹೆಚ್ಎಎಲ್ 

Nagaraja AB

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮೆಟೆಡ್ ಕಂಪನಿ ತಯಾರಿಸಿದ ಅತಿದೊಡ್ಡ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್  (ಸಿ32 ಎಲ್ ಹೆಚ್ 2)ನ್ನು ಒಪ್ಪಂದ ವೇಳಾಪಟ್ಟಿಗಿಂತ ಬಹಳಷ್ಟು ಮುಂಚಿತವಾಗಿ ಇಸ್ರೋಗೆ ಪೂರೈಸಿದೆ.

  ಸಿ 32-ಎಲ್‌ಹೆಚ್ 2 ಟ್ಯಾಂಕ್ ಅಲ್ಯೂಮಿನಿಯಂ ಮಿಶ್ರಲೋಹದ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್ ಆಗಿದ್ದು, ಜಿಎಸ್ ಎಲ್ ವಿ ಎಂಕೆ-3 ಉಡಾವಣಾ ವಾಹಕದ ಪೆಲೋಡ್ ಸಾಮರ್ಥ್ಯವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೆಚ್ ಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ ಎಎಲ್ ಪ್ರಕಾರ, 89 ಘನ ಮೀಟರ್ ಪರಿಮಾಣದಲ್ಲಿ 5, 755 ಕೆಜಿ ಪ್ರೊಪೆಲ್ಲಂಟ್ ತುಂಬಲು 8 ಮೀಟರ್ ಉದ್ದದ ನಾಲ್ಕು ಮೀಟರ್ ವ್ಯಾಸದ ಟ್ಯಾಂಕ್ ಇದಾಗಿದೆ. ಕಠಿಣ ಗುಣಮಟ್ಟದ ಅವಶ್ಯಕತೆಗಳಿಗೆ ಅಲ್ಯೂಮಿನಿಯಂ ಮಿಶ್ರಲೋಹದ ಬೆಸುಗೆ ಹಾಕಿದ ಪ್ರೊಪೆಲ್ಲಂಟ್ ಟ್ಯಾಂಕ್‌ಗಳನ್ನು ತಯಾರಿಸಲು ಅಗತ್ಯವಾದ ಕೌಶಲ್ಯ ಮತ್ತು ತಂತ್ರಜ್ಞಾನಗಳನ್ನು ಎಚ್‌ಎಎಲ್ ಕರಗತ ಮಾಡಿಕೊಂಡಿದೆ ಎಂದು ಅದು ಹೇಳಿದೆ.

 ವಿಶ್ವಾಸಾರ್ಹ ಪಾಲುದಾರನಾಗಿ ಹೆಚ್ಎಎಲ್ ,  ಕಳೆದ ಐದು ದಶಕಗಳಿಂದ ಪ್ರತಿಷ್ಠಿತ ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ಇಸ್ರೋ ಜೊತೆ ಸಹಭಾಗಿತ್ವ ಹೊಂದಿದ್ದು,  ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ-ಎಂಕೆಐಐ ಮತ್ತು ಜಿಎಸ್‌ಎಲ್‌ವಿ-ಎಂಕೆ 3 ಉಡಾವಣಾ ವಾಹಕಗಳಿಗಾಗಿ ನಿರ್ಣಾಯಕ ರಚನೆಗಳು, ಟ್ಯಾಂಕೇಜ್ ಗಳು ಮತ್ತು ಸ್ಯಾಟಲೈಟ್ ರಚನೆಗಳನ್ನು ಪೂರೈಸಿದೆ ಎಂದು ಹೆಚ್ ಎಎಲ್ ತಿಳಿಸಿದೆ.

SCROLL FOR NEXT