ವಿಜ್ಞಾನ-ತಂತ್ರಜ್ಞಾನ

ಎದುರಾಳಿ ಕ್ಷಿಪಣಿಗಳನ್ನು ದಾರಿತಪ್ಪಿಸಬಲ್ಲ ಚಾಫ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಡಿಆರ್ ಡಿಒ

Srinivas Rao BV

ನವದೆಹಲಿ: ಶತ್ರುಗಳ ರಡಾರ್ ನಿರ್ದೇಶಿತ ಕ್ಷಿಪಣಿಗಳನ್ನು ದಾರಿತಪ್ಪಿಸುವ ಸಾಮರ್ಥ್ಯ ಹೊಂದಿರುವ ಚಾಫ್ ತಂತ್ರಜ್ಞಾನವನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದೆ.

ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಶತ್ರುಗಳಿಂದ  ರಕ್ಷಿಸುವುದಕ್ಕಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಐಎಎಫ್ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಡಿಆರ್ ಡಿಒ ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯ ಮೂಲಕ ತಿಳಿದುಬಂದಿದೆ.

"ಡಿಆರ್ ಡಿಒ ಪ್ರಯೋಗಾಲಯಗಳು ಅತ್ಯಾಧುನಿಕ ಚಾಫ್ ಮೆಟೀರಿಯಲ್ ಹಾಗೂ ಚಾಫ್ ಕಾರ್ಟ್ರಿಡ್ಜ್-118/I"ಯನ್ನು ಅಭಿವೃದ್ಧಿಪಡಿಸಿದ್ದು, ಐಎಎಫ್ ನ ಗುಣಾತ್ಮಕ ಅವಶ್ಯಕತೆಗಳನ್ನು ಪೂರೈಸಲಿದೆ" ಎಂದು ಐಎಎಫ್ ಹೇಳಿದೆ

ತಂತ್ರಜ್ಞಾನ ಶತ್ರುಗಳ ಕ್ಷಿಪಣಿಗಳನ್ನು ವಿಚಲಿತಗೊಳಿಸುವ ಮೂಲಕ ಕಾರ್ಯನಿರ್ವಹಣೆ ಮಾಡಲಿದ್ದು, ನಮ್ಮ ಯುದ್ಧವಿಮಾನಗಳನ್ನು ಸುರಕ್ಷಿತಗೊಳಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುವುದಕ್ಕಾಗಿ ಈ ತಂತ್ರಜ್ಞಾನವನ್ನು  ಸಂಬಂಧಪಟ್ಟ ಕೈಗಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಐಎಎಫ್ ಹೇಳಿದೆ.

SCROLL FOR NEXT