ವಿಜ್ಞಾನ-ತಂತ್ರಜ್ಞಾನ

ಕಳೆದ 30 ನಿಮಿಷಗಳಿಂದ WhatsApp ಸೇವೆ ಸ್ಥಗಿತ, ಪರದಾಡಿದ ಬಳಕೆದಾರರು; ಆಸಕ್ತಿಕರ ಮೀಮ್ಸ್‌ಗಳು ಇಲ್ಲಿವೆ....

Ramyashree GN

ಮೆಸೇಜಿಂಗ್ ಸೇವೆ WhatsApp ಭಾರತ ಮತ್ತು ಇತರ ಕೆಲವು ದೇಶಗಳಲ್ಲಿ ಮಧ್ಯಾಹ್ನದ ನಂತರ ಸ್ಥಗಿತಗೊಂಡಿದೆ ಎಂದು ಹಲವಾರು ಬಳಕೆದಾರರ ವರದಿಗಳು ತಿಳಿಸಿವೆ. ಆದರೆ, ಎಲ್ಲೆಲ್ಲಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.

ಪ್ರಮುಖ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಮಧ್ಯಾಹ್ನ12.07 ಗಂಟೆಗೆ 'ಸಮಸ್ಯೆ' ಉಂಟಾಗಿರುವ ಕುರಿತು ವರದಿಯಾಗಲು ಪ್ರಾರಂಭಿಸಿತು ಮತ್ತು ಮಧ್ಯಾಹ್ನ 1 ಗಂಟೆಯ ವೇಳೆಗೆ ಅಂತಹ ಸಾವಿರಾರು ವರದಿಗಳಾಗಿವೆ. ಈ ಪೈಕಿ ಶೇ 69 ರಷ್ಟು ಜನರು ಸಂದೇಶಗಳು ಹೋಗುತ್ತಿಲ್ಲ ಎಂದಿದ್ದರೆ, ಇತರರು ಸರ್ವರ್ ಸಂಪರ್ಕ ಕಡಿತಗೊಳಿಸುವಿಕೆ ಮತ್ತು ಅಪ್ಲಿಕೇಶನ್ ಸಂಪೂರ್ಣವಾಗಿ ಕ್ರ್ಯಾಶ್ ಆಗಿದೆ ಎಂದು ವರದಿ ಮಾಡಿದ್ದಾರೆ.

ಇಟಲಿ ಮತ್ತು ಟರ್ಕಿಯ ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಈ ಸ್ಥಗಿತದ ಬಗ್ಗೆ ಕಂಪನಿಯು ಇನ್ನೂ ಏನನ್ನೂ ಹೇಳಿಲ್ಲ.

ಆದರೆ, 'ಕೆಲವರು ಸದ್ಯ ಸಂದೇಶಗಳನ್ನು ಕಳುಹಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ ಮತ್ತು ಸಾಧ್ಯವಾದಷ್ಟು ಬೇಗ ಎಲ್ಲರಿಗೂ WhatsApp ಅನ್ನು ಮರುಸ್ಥಾಪಿಸಲು ಕೆಲಸ ಮಾಡುತ್ತಿದ್ದೇವೆ' ಎಂದು WhatsApp ಜೊತೆಗೆ Facebook ಮತ್ತು Instagram ಅನ್ನು ಹೊಂದಿರುವ ಕಂಪನಿಯಾದ Meta ವಕ್ತಾರರು ತಿಳಿಸಿದ್ದಾರೆ.

#WhatsAppDown ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವಿಟರ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಮೀಮ್‌ಗಳು ಹರಿಯಲಾರಂಭಿಸಿವೆ. ಅನೇಕ ಬಳಕೆದಾರರು ಮೊದಲಿಗೆ ತಮ್ಮ ಇಂಟರ್ನೆಟ್ ಸೇವೆಯಲ್ಲಿನ ಸಮಸ್ಯೆ ಎಂದು ಭಾವಿಸಿದ್ದರು ಎಂದು ಹೇಳಿದ್ದಾರೆ.

ಮತ್ತೊಂದು ಟ್ವಿಟರ್ ಬಳಕೆದಾರರು, ಮಿಲ್ಕಾ ಸಿಂಗ್ ಸಿನಿಮಾದ ಫರ್ಹಾನ್ ಅಖ್ತರ್‌ನ ದೃಶ್ಯವೊಂದನ್ನು ಹಂಚಿಕೊಂಡಿದ್ದು, 'ವಾಟ್ಸಾಪ್ ಡೌನ್ ಆಗಿದೆಯೇ ಎಂಬುದನ್ನು ಟ್ವಿಟರ್‌ನಲ್ಲಿ ಪರಿಶೀಲಿಸಲು ಎಲ್ಲರೂ ಓಡುತ್ತಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಆಸಕ್ತಿಕರ ಟ್ವೀಟ್‌ಗಳು ಇಲ್ಲಿವೆ ನೋಡಿ...

SCROLL FOR NEXT