LVM3 M4 ರಾಕೆಟ್ 
ವಿಜ್ಞಾನ-ತಂತ್ರಜ್ಞಾನ

ಭೂಮಿ ವಾತಾವರಣಕ್ಕೆ ಚಂದ್ರಯಾನ-3 ರಾಕೆಟ್ ಅನಿಯಂತ್ರಿತ ಮರು-ಪ್ರವೇಶ: ಇಸ್ರೋ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ 3 (Chandrayaan 3) ಲಾಂಚ್ ವೆಹಿಕಲ್ (Launch Vehicle) ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ್ದು(Re Entered to Earth), ಉತ್ತರ ಫೆಸಿಫಿಕ್ ಸಮುದ್ರದಲ್ಲಿ (North Pacific Ocean) ಬೀಳಬಹುದು ಎಂದು ತಿಳಿದುಬಂದಿದೆ.

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ 3 (Chandrayaan 3) ಲಾಂಚ್ ವೆಹಿಕಲ್ (Launch Vehicle) ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ್ದು(Re Entered to Earth), ಬಹುಶಃ ಉತ್ತರ ಫೆಸಿಫಿಕ್ ಸಮುದ್ರದಲ್ಲಿ (North Pacific Ocean) ಬೀಳಬಹುದು ಎಂದು ತಿಳಿದುಬಂದಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಈ ಬಗ್ಗೆ ಮಾಹಿತಿ ನೀಡಿದ್ದು, “ಎಲ್‌ವಿಎಂ3 ಎಂ4 (LVM3 M4 launch vehicle) ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಭೂಮಿಯ ವಾತಾವರಣಕ್ಕೆ ಬುಧವಾರ ಸುಮಾರು 14:42ರ ಅವಧಿಯಲ್ಲಿ ಅನಿಯಂತ್ರಿತ ಮರು ಪ್ರವೇಶ ಮಾಡಿದ್ದು, ಬಹುಶಃ ಫೆಸಿಫಿಕ್ ಸಮುದ್ರದಲ್ಲಿ ಬೀಳುವ ಸಾಧ್ಯತೆ ಇದೆ. ಈ ರಾಕೆಟ್ ಬಾಡಿ (NORAD id 57321) ಜುಲೈ 14 ರಂದು 21.3 ಡಿಗ್ರಿ ಇಳಿಜಾರಿನೊಂದಿಗೆ 133 ಕಿಮೀ x 35823 ಕಿಮೀ ಉದ್ದೇಶಿತ ಕಕ್ಷೆಗೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಂಜೆಕ್ಟ್ ಮಾಡಿದ ವಾಹನದ ಭಾಗವಾಗಿದೆ ಎಂದು ಇಸ್ರೋ ಹೇಳಿದೆ.

ಲಾಂಚ್ ಆದ 124 ದಿನಗಳ ಬಳಿಕ ರಾಕೆಟ್ ಬಾಡಿ ವಾಪಸ್ ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ. ಇಂಟರ್-ಏಜೆನ್ಸಿ ಸ್ಪೇಸ್ ಡೆಬ್ರಿಸ್ ಕೋಆರ್ಡಿನೇಷನ್ ಕಮಿಟಿ (ಐಎಡಿಸಿ) (Inter-Agency Space Debris Coordination Committee) ಶಿಫಾರಸು ಮಾಡಿದ ಲೋ ಅರ್ಥ್ ಆರ್ಬಿಟ್ ಆಬ್ಜೆಕ್ಟ್‌ (Low Earth Orbit Object)ಗಳಿಗೆ 25 ವರ್ಷಗಳ ನಿಯಮವನ್ನು ಸಂಪೂರ್ಣವಾಗಿ ಅನುಸರಿಸುತ್ತಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಚಂದ್ರಯಾನ 3 ಭಾರತದ ಮೂರನೇ ಲೂನಾರ್ ಮಿಷನ್ ಆಘಿದ್ದು, ಜುಲೈ 14ರಂದು ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಉಡಾವಣೆಯಾಗಿತ್ತು. ಒಂದು ತಿಂಗಳ ಬಳಿಕ ಚಂದ್ರಯಾನ -3 (Chandrayaan-3)ರ ವಿಕ್ರಮ್ ಲ್ಯಾಂಡರ್ (Vikram Lander), ಪ್ರಗ್ಯಾನ್ ರೋವರ್‌ (Pragyan Rover)ನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ 23ರಂದು ಲ್ಯಾಂಡ್ ಆಗಿತ್ತು. ಇದರೊಂದಿಗೆ ದಕ್ಷಿಣ ಧ್ರುವ ತಲುಪಿದ ಜಗತ್ತಿನ ಮೊದಲ ರಾಷ್ಟ್ರವಾಗಿದೆ.

ಲ್ಯಾಂಡ್ ಆದ 10 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಸ್ಲೀಪ್ ಮೋಡ್‌ಗೆ ಹೋಗಿದ್ದವು. ಈ ಮಧ್ಯೆ, ಲ್ಯಾಂಡರ್ ನಿಂದ ಬೇರ್ಪಟ್ಟ ಚಂದ್ರಯಾನ 3ರ ಪ್ರಪಲ್ಷನ್ ಮಾಡೆಲ್ ಈಗಲೂ ಚಂತ್ರದನ ಕಕ್ಷೆಯಲ್ಲಿ ಸುತ್ತುತ್ತಿದೆ. ‌2019ರಲ್ಲಿ ಇಸ್ರೋ ಚಂದ್ರಯಾನ 2 ಮಿಷನ್ ಅನ್ನು ಇಸ್ರೋ ಕೈಗೊಂಡಿತ್ತು. ಆದರೆ, ಚಂದ್ರನ ನಿರ್ದಿಷ್ಟ ಜಾಗದಲ್ಲಿ ಇಳಿಯಲು ವಿಫಲವಾಗಿತ್ತು. ಇದಕ್ಕೂ ಮೊದಲು ಭಾರತವು ಚಂದ್ರಯಾನ-1 ಯಶಸ್ವಿಯಾಗಿ ಕೈಗೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT