ವಿಜ್ಞಾನ-ತಂತ್ರಜ್ಞಾನ

ಉದ್ದೇಶಪೂರ್ವಕವಾಗಿ ಮಕ್ಕಳನ್ನು ಆಕರ್ಷಿಸಲು ಮೆಟಾ ಜಾಲತಾಣದ ವಿನ್ಯಾಸ: ಕೋರ್ಟ್ ದಾಖಲೆಗಳಲ್ಲಿ ಉಲ್ಲೇಖ!

Srinivas Rao BV

ನವದೆಹಲಿ: ಫೇಸ್ ಬುಕ್ ನ ಮಾತೃ ಸಂಸ್ಥೆ ಉದ್ದೇಶಪೂರ್ವಕವಾಗಿ ಮಕ್ಕಳನ್ನು ಆಕರ್ಷಿಸಲು ತನ್ನ ಜಾಲತಾಣವನ್ನು ವಿನ್ಯಾಸಗೊಳಿಸಿದೆ ಈ ಬಗ್ಗೆ ತಿಳಿದಿದ್ದರೂ ಮೆಟಾ ಅದನ್ನು ಬಹಿರಂಗಗೊಳಿಸಿಲ್ಲ ಎಂದು ದಿ ನ್ಯೂಯಾರ್ಕ್ ಟೈಮ್ಸ್ ಕೋರ್ಟ್ ಗೆ ಸಲ್ಲಿಸಲಾಗಿರುವ ಆರೋಪ ದಾಖಲೆಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. 

ಇನ್ಸ್ಟಾಗ್ರಾಮ್ ನಲ್ಲಿ ಅಪ್ರಾಪ್ತರ ಖಾತೆಗಳಿರುವುದರ ಬಗ್ಗೆ ಹಲವಾರು ದೂರುಗಳು ಬಂದಿತ್ತು. ಆದರೆ ಈ ಪೈಕಿ ಕೆಲವೊಂದನ್ನು ಮಾತ್ರ ನಿಷ್ಕ್ರಿಯಗೊಳಿಸಲಾಗಿದೆ ಎಂದು ಸೀಲ್ ಮಾಡದ ಕಾನೂನು ದೂರನ್ನು ಉಲ್ಲೇಖಿಸಿ ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿದೆ.

ವರದಿಗಳ ಪ್ರಕಾರ ಹಠಾತ್ ವರ್ತನೆ, ಒತ್ತಡಕ್ಕೆ ಒಳಗಾಗುವಿಕೆ ಮತ್ತು ಅಪಾಯಗಳ ಕಡಿಮೆ ಅಂದಾಜು ಮುಂತಾದ ಯುವ ಮನೋವಿಜ್ಞಾನದಲ್ಲಿನ ನ್ಯೂನತೆಗಳನ್ನು ಬಳಸಿಕೊಳ್ಳಲು ಕಂಪನಿಯು ತನ್ನ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದೆ ಎಂದು ಹಲವಾರು ಮೆಟಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾದ ಕಂಪನಿ ದಾಖಲೆಗಳು ವಿವರಿಸಿವೆ.

ಹದಿಹರೆಯದವರಿಗೆ ಆನ್‌ಲೈನ್ ಅನುಭವವನ್ನು ಸುರಕ್ಷಿತವಾಗಿಸಲು, ಹದಿಹರೆಯದವರಿಗೆ ಆನ್‌ಲೈನ್ ಅನುಭವವನ್ನು ಸುರಕ್ಷಿತವಾಗಿಸಲು ಕಳೆದ ದಶಕದಲ್ಲಿ ತಾನು ಮಾಡಿದ  ಕೆಲಸವನ್ನು ದೂರು ತಪ್ಪಾಗಿ ವ್ಯಾಖ್ಯಾನಿಸಿದೆ, ಅಪ್ರಾಪ್ತರಿಗೆ ತನ್ನ ವೇದಿಕೆಗಳನ್ನು ಸುರಕ್ಷಿತವಾಗಿರಿಸಲು ಮತ್ತು ಅವರ ಪೋಷಕರನ್ನು ಬೆಂಬಲಿಸಲು 30 ಕ್ಕೂ ಹೆಚ್ಚು ಪರಿಕರಗಳನ್ನು ಹೊಂದಿದೆ ಎಂದು ಮೆಟಾ ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಹೇಳಿಕೆಯಲ್ಲಿ ಮೆಟಾ ಹೇಳಿದೆ.

SCROLL FOR NEXT