ನವದೆಹಲಿ: 2025 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ಘೋಷಿಸಲಾಗಿದೆ.
"ವಿದ್ಯುತ್ ಸರ್ಕ್ಯೂಟ್‌ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಮತ್ತು ಎನರ್ಜಿ ಕ್ವಾಂಟೈಸೇಷನ್ ಆವಿಷ್ಕಾರಕ್ಕಾಗಿ" ಜಾನ್ ಕ್ಲಾರ್ಕ್, ಮೈಕೆಲ್ ಹೆಚ್. ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಹುಮಾನದ ಸ್ಥಾಪಕ ಆಲ್ಫ್ರೆಡ್ ನೊಬೆಲ್ ಅವರ ಮರಣದ ವಾರ್ಷಿಕೋತ್ಸವವಾದ ಡಿಸೆಂಬರ್ 10 ರಂದು ನಡೆಯುವ ಸಮಾರಂಭದಲ್ಲಿ ಬಹುಮಾನವನ್ನು ನೀಡಲಾಗುತ್ತದೆ. 1901 ಮತ್ತು 2024 ರ ನಡುವೆ ಭೌತಶಾಸ್ತ್ರದಲ್ಲಿನ ಅನ್ವೇಷಣೆಗಳಿಗಾಗಿ 118 ನೊಬೆಲ್ ಪಶಸ್ತಿಗಳನ್ನು ನೀಡಲಾಗಿದೆ.