ಕೇಂದ್ರ ತನಿಖಾ ಸಂಸ್ಥೆಯ ಪ್ರಧಾನ ಕಚೇರಿ 
ವಿಶೇಷ

ಸಿಬಿಐ ನಿರ್ದೇಶಕರ ಕಾರ್ಯವೈಖರಿ

ಅನಿಲ್ ಕುಮಾರ್ ಸಿನ್ಹಾ ಅವರು ಸಿಬಿಐ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ

ಕಳೆದ ವಾರವಷ್ಟೇ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಗೆ ಹೊಸ ನಿರ್ದೇಶಕರ ಆಯ್ಕೆಯಾಗಿದೆ. ಅನಿಲ್ ಕುಮಾರ್ ಸಿನ್ಹಾ ಅವರು ಸಿಬಿಐ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ 10 ಸಿಬಿಐ ನಿರ್ದೇಶಕರ ಕಾರ್ಯವೈಖರಿ ಬಗ್ಗೆ ಒಂದಿಷ್ಟು ಮಾಹಿತಿ.

1. ಅನಿಲ್ ಸಿನ್ಹಾ
* 1979ರ ಬ್ಯಾಚ್‌ನ ಐಪಿಎಸ್ ಅಧಿಕಾರಿ
* 2014ರ ಡಿ.2ರಿಂದ ಸಿಬಿಐ ನಿರ್ದೇಶಕರು
* ಅನೇಕ ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿ ಪ್ರಕರಣಗಳ ತನಿಖೆ

2. ರಂಜಿತ್ ಸಿನ್ಹಾ

* 1974ರ ಬ್ಯಾಚ್‌ನ ಐಪಿಎಸ್ ಅಧಿಕಾರಿ
* ಹಲವು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಕರಣಗಳ ತೀರ್ಪುಗಳು ಇವರು ಕೈಗೊಂಡ  ತನಿಖೆಗಳ ಫಲ
* 2ಜಿ, ಕಲ್ಲಿದ್ದಲು ಹಗರಣ ಆರೋಪಿಗಳ ರಕ್ಷಣೆಗೆ ಯತ್ನ, ಅವರೊಂದಿಗೆ ಮಾತುಕತೆ ನಡೆಸಿದ್ದು    ಇವರಿಗೆ ಕಪ್ಪುಚುಕ್ಕೆ

3. ಅಮರ್ ಪ್ರತಾಪ್ ಸಿಂಗ್
* 1974ರ ಬ್ಯಾಚ್‌ನ ಐಪಿಎಸ್ ಅಧಿಕಾರಿ
* 2010ರ ನ.30ರಿಂದ 2012ರ ನ.30ರ ವರೆಗೆ ಸಿಬಿಐ ನಿರ್ದೇಶಕರು
* 2ಜಿ ಹಗರಣ, ಆರುಷಿ ಹತ್ಯೆ, ಆದರ್ಶ ಹಗರಣ, ಗುಜರಾತ್ ನಕಲಿ ಎನ್‌ಕೌಟಂರ್ ಪ್ರಕರಣಗಳ ತನಿಖೆ

4. ಅಶ್ವನಿ ಕುಮಾರ್
* 1973ರ ಬ್ಯಾಚ್‌ನ ಐಪಿಎಸ್ ಅಧಿಕಾರಿ
* 2008 ಆ.2ರಿಂದ 2010ರ ನ.30ರ ವರೆಗೆ ಸಿಬಿಐ ನಿರ್ದೇಶಕರು
* ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆ

5. ವಿಜಯಶಂಕರ್ ತಿವಾರಿ

* 1969ರ ಬ್ಯಾಚ್‌ನ ಐಪಿಎಸ್ ಅಧಿಕಾರಿ
* 2005ರ ಡಿ.12ರ ಜು.31ರ ವರೆಗೆ ಸಿಬಿಐ ನಿರ್ದೇಶಕರು
* ಭೂಗತ ಪಾತಕಿ ಅಬು ಸಲೇಂನನ್ನು ಭಾರತದ ವಶಕ್ಕೆ ತರುವಲ್ಲಿ ಇವರ ಪಾತ್ರ ಮಹತ್ವದ್ದು, 1993ರ ಮುಂಬೈ ಸ್ಫೋಟ ಪ್ರಕರಣದ ತನಿಖೆ

6. ಯು.ಎಸ್.ಮಿಶ್ರಾ

* 1968ರ ಬ್ಯಾಚ್‌ನ ಐಪಿಎಸ್ ಅಧಿಕಾರಿ
* 2003ರ ಡಿ.6ರಿಂದ 2005ರ ಡಿ.6ರ ವರೆಗೆ ಸಿಬಿಐ ನಿರ್ದೇಶಕರು
* ಬಾಬ್ರಿ ಮಸೀದಿ ಧ್ವಂಸ, ಛಾಪಾ ಕಾಗದ ಪ್ರಕರಣಗಳ ತನಿಖೆ

7. ಪಿ.ಸಿ.ಶರ್ಮಾ

* 1966ರ ಬ್ಯಾಚ್‌ನ ಐಪಿಎಸ್ ಅಧಿಕಾರಿ
* 2001ರ ಏ.30ರಿಂದ 2003ರ ಡಿ.6ರ ವರೆಗೆ ಸಿಬಿಐ ನಿರ್ದೇಶಕರು
* ಭೂಗತ ಪಾತಕಿ ಅಪು ಸಲೇಂನನ್ನು ಭಾರತದ ವಶಕ್ಕೆ ತರುವಲ್ಲಿ ಇವರ ಪಾತ್ರವೂ ಇತ್ತು

8. ಆರ್.ಕೆ.ರಾಘವನ್

* 1999ರ ಜ.4-2001ರ ಏ.30ರ ವರೆಗೆ ಸಿಬಿಐ ನಿರ್ದೇಶಕರು
* 2002ರ ನರಹತ್ಯೆಗೆ ಸಂಬಂಧಿಸಿದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು
* 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ವೇಳೆ ಭದ್ರತಾ ಲೋಪಕ್ಕೆ ದಂಡಿಸಲಾದ 3 ಪೊಲೀಸ್ ಅಧಿಕಾರಿಗಳಲ್ಲಿ ಇವರೂ ಒಬ್ಬರು

9. ಟಿ.ಎನ್.ಮಿಶ್ರಾ
* 1965ರ ಬ್ಯಾಚ್‌ನ ಐಪಿಎಸ್ ಅಧಿಕಾರಿ
* 1998ರ ಮಾ.31ರಿಂದ 1999ರ ಜ.4ರ ವರೆಗೆ ಸಿಬಿಐ ನಿರ್ದೇಶಕರು
* ಬೋಫೋರ್ಸ್ ಹಗರಣದ ತನಿಖೆ ಕೈಗೊಂಡು, ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಾಟ್ರೋಕಿ ಸೆರೆಗೆ ಕಾರಣರು

10. ಡಿ.ಆರ್.ಕಾರ್ತಿಕೇಯನ್
* 1964ರ ಬ್ಯಾಚ್‌ನ ಐಪಿಎಸ್ ಅಧಿಕಾರಿ
* 1998ರಲ್ಲಿ ಸಿಬಿಐ ನಿರ್ದೇಶಕರು
* ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ. ರಾಜೀವ್ ಹತ್ಯೆ ಹಿಂದಿನ ಸಂಚು ಮತ್ತು ನಂತರದ ವಿದ್ಯಮಾನಗಳ ಬಗ್ಗೆ 'ಟ್ರೈಯಂಪ್ ಆಫ್ ಟ್ರುತ್‌' ಎಂಬ ಪುಸ್ತಕ ಬರೆದಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ