ವಿಶೇಷ

ಖ್ಯಾತ ವಿಮರ್ಶಕ ಜಿ ಎಚ್ ನಾಯಕ್ ಅವರಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ

Guruprasad Narayana

ನವದೆಹಲಿ: ಕನ್ನಡದ ಕವಿ, ವಿಮರ್ಶಕ, ಉಪನ್ಯಾಸಕ ಪ್ರೊ. ಜಿ ಎಚ್ ನಾಯಕ್ ಅವರಿಗೆ ೨೦೧೪ ನೆ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಜಿ ಎಚ್ ನಾಯಕ್ ಅವರ "ಉತ್ತರಾರ್ಧ" ಪ್ರಬಂಧ ಸಂಕಲನಕ್ಕೆ ಅಕಾಡೆಮಿ ಪ್ರಸಸ್ತಿ ದೊರೆತಿದೆ.

೨೨ ಭಾಷೆಗಳ ೮ ಕವನ ಸಂಕಲನಗಳು, ೫ ಕಾದಂಬರಿಗಳು, ೩ ಪ್ರಬಂಧ ಸಂಕಲನಗಳು, ೩ ಸಣ್ಣ ಕಥೆಗಳ ಸಂಕಲನ, ತಲಾ ಒಂದು ಸಾಹಿತ್ಯ ವಿಮರ್ಶೆ, ಆತ್ಮಕಥೆ ಮತ್ತು ನಾಟಕಕ್ಕೆ ಪ್ರಶಸ್ತಿ ದೊರಕಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ವಿಶ್ವನಾಥ್ ಪ್ರಸಾದ್ ತಿವಾರಿ ಅವರು ತಿಳಿಸಿದ್ದಾರೆ.

೭೯ ವರ್ಷದ ಜಿ ಎಚ್ ನಾಯಕ್ ಅವರಿಗೆ ಇಲ್ಲಿಯವರೆಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿಗಳು ದೊರೆತಿವೆ. ೨೦೧೫ ಮಾರ್ಚ್ ೯ ರಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಧಾನವಾಗಲಿದ್ದು, ಇದು ೧ಲಕ್ಷ ರೂ ನಗದನ್ನೂ ಒಳಗೊಂಡಿದೆ.

SCROLL FOR NEXT