ಪ್ರಣಬ್ ಮುಖರ್ಜಿ (ಸಂಗ್ರಹ ಚಿತ್ರ) 
ವಿಶೇಷ

ಇಂದಿರಾ ದಿನಗಳ ಪುಸ್ತಕ ಬರೆದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬರೆದಿರುವ ಪುಸ್ತಕ ಡಿಸೆಂಬರ್ ನಲ್ಲಿ ಮಾರುಕಟ್ಟೆಗೆ ಬರಲಿದೆ ...

ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬರೆದಿರುವ ಪುಸ್ತಕ ಡಿಸೆಂಬರ್ ನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಮಂಗಳವಾರ ಪ್ರಕಾಶಕರು ತಿಳಿಸಿದ್ದಾರೆ.

"ದ ಡ್ರಮಾಟಿಕ್ ಡೆಕೇಡ್: ದ ಇಂದಿರಾ ಇಯರ್ಸ್" (ನಾಟಕೀಯ ದಶಕ:ಇಂದಿರಾ ವರ್ಷಗಳು) ಎಂಬ ಹೆಸರಿನ ಪುಸ್ತಕ ಭಾರತದ ಇತಿಹಾಸದ ಪ್ರಮುಖ ಘಟ್ಟವನ್ನು ಸೆರೆಹಿಡಿಯಲಿದೆ ಎಂದಿರುವ ರೂಪಾ ಪ್ರಕಾಶನ ಸಂಸ್ಥೆ ಡಿಸೆಂಬರ್ ೧೧ ಕ್ಕೆ ಪುಸ್ತಕ ಮಾರುಕಟ್ಟೆಗೆ ಬರಲಿದೆ ಎಂದಿದೆ.

ಈ ಗ್ರಂಥ ಮುಖರ್ಜಿ ಅವರು ೧೯೭೦ ರ ಪ್ರಮುಖ ರಾಜಕೀಯ ಮುಖಂಡರ ಜೊತೆ ನಡೆಸಿರುವ ಸಂಭಾಷಣೆಯ ತಮ್ಮ ದಿನಚರಿಯ ಭಾಗಗಳಿಂದ ಸಿದ್ಧಗೊಂಡಿದೆ ಎನ್ನಲಾಗಿದೆ.

"ಈ ಸಂದರ್ಭದಲ್ಲಿ ಭಾರತ ನಿಜವಾದ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಂಡಿತ್ತು. ಪೂರ್ವ ಪಾಕಿಸ್ತಾನಕ್ಕೆ (ಬಾಂಗ್ಲಾದೇಶ) ತನ್ನ ಬೆಂಬಲವನ್ನು ವಿಸ್ತರಿಸಿ ಸ್ವಾಯತ್ತತೆಗೆ ಇರುವ ತನ್ನ ಬದ್ಧತೆಯನ್ನು ಪ್ರದರ್ಶಿಸಿತ್ತು. ನಂತರ ೧೯೭೫ ರಿಂದ ೧೯೭೭ ರ ತುರ್ತು ಪರಿಸ್ಥಿತಿ ವೇಳೆಯಲ್ಲಿ ಭಾರತ ವೈಯಕ್ತಿಕ ಹಿತಾಸಕ್ತಿಯ ಹಿಡಿತದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅಂತಿಮವಾಗಿ ೧೯೭೭ ರಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಹಲವು ಪಕ್ಷಗಳ ಜೊತೆಗಿನ ಮೈತ್ರಿಯಿಂದ ಜನತಾ ಪಕ್ಷಗಳ ಹೊಂದಾಣಿಕೆಯ ಹೊಸ ಯುಗ ಪ್ರಾರಂಭವಾಯಿತು." ಎಂದು ಪ್ರಕಾಶಕರು ತಿಳಿಸಿದ್ದಾರೆ.

ವಿದೇಶಾಂಗ, ರಕ್ಷಣೆ ಮತ್ತು ಹಣಕಾಸು ಸಚಿವಾಲಯಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿರುವ ಪ್ರಣಬ್ ಮುಖರ್ಜಿ ೨೧೦೨ ಜುಲೈ ೨೫ ಕ್ಕೆ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ೧೯೬೯ರಿಂದ ರಾಜ್ಯಸಭೆಗೆ ೫ ಬಾರಿ ಆಯ್ಕೆಯಾಗಿದ್ದ ಪ್ರಣಬ್ ಮುಖರ್ಜಿ ೨೦೦೪ ರಿಂದ ಲೋಕಸಭೆಗೆ ೨ ಬಾರಿ ಆಯ್ಕೆಯಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ