ವಿಶೇಷ

ಮುಸ್ಲಿಂ ಯುವಕನಿಂದ ಹನುಮಾನ್ ಚಾಲೀಸಾ ಉರ್ದುಗೆ ಭಾಷಾಂತರ

Vishwanath S
ಲಖನೌ: ಒಂದೆಡೆ ಧರ್ಮ ಸಹಿಷ್ಣುತೆ ಹೆಚ್ಚಾಗುತ್ತಿದ್ದರೆ ಉತ್ತರಪ್ರದೇಶದ ಮುಸ್ಲಿಂ ಯುವಕನೊಬ್ಬ ಹಿಂದೂಗಳಿಗೆ ಅತ್ಯಂತ ಜನಪ್ರಿಯವಾದ ಹನುಮಾನ್ ಚಾಲೀಸಾವನ್ನು ಉರ್ದುಗೆ ಭಾಷಾಂತರಗೊಳಿಸುವ ನಿರ್ಧಾರ ಕೈಗೊಂಡಿದ್ದಾನೆ.
ಇದರಿಂದಾಗಿ ಎರಡು ಧರ್ಮದವರಿಗೂ ಅವರವರ ನಂಬಿಕೆ ಮತ್ತು ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದು ಭಾಷಾಂತರ ಮಾಡುವ ನಿರ್ಧಾರ ಕೈಗೊಂಡಿರುವ ಅಬಿದ್ ಅಲ್ವಿಯ ಅಭಿಪ್ರಾಯ ಪಟ್ಟಿದ್ದಾನೆ. 
ಹನುಮಾನ್ ಚಾಲೀಸಾ ಪ್ರಾರ್ಥನೆಯಾಗಿದ್ದು, ಇದರಲ್ಲಿ 40 ಅಧ್ಯಾಯಗಳಿವೆ. ನಾನು ಹನುಮಾನ್ ಚಾಲೀಸಾವನ್ನು ಮುಸಾದ್ದಾಸ್ ರೀತಿಯಲ್ಲಿ ಆರು ಚರಣಗಳಲ್ಲಿ ಉರ್ದುಗೆ ಭಾಷಾಂತರಿಸುವುದಾಗಿ ಹೇಳಿದ್ದಾನೆ. ಮುಂದೆ ಶಿವ ಚಾಲೀಸಾ ಸೇರಿದಂತೆ ಇನ್ನೂ ಹಲವಾರು ಹಿಂದೂ ಗ್ರಂಥಗಳ ತರ್ಜುಮೆ ಮಾಡುವ ಆಲೋಚನೆ ಹೊಂದಿರುವುದಾಗಿ ಅಲ್ವಿ ತಿಳಿಸಿದ್ದಾನೆ. 
ಈ ಭಾಷಾಂತರ ಒಟ್ಟು 15 ಬಂಧಾಸ್ ಆಗಲಿದ್ದು, ಪ್ರತಿಯೊಂದು ಆರು ಚರಣಗಳನ್ನು ಹೊಂದಿರಲಿದೆ ಎಂದು ವಿವರಿಸಿದ್ದಾನೆ.  ಹಿಂದೂ, ಮುಸ್ಲಿಂ ಸಮುದಾಯ ಎರಡೂ ಸಮುದಾಯಗಳ ಬಗ್ಗೆ ತಿಳಿದುಕೊಳ್ಳುವಂತಾಗಬೇಕು ಎಂದು ಬಯಸುತ್ತಿದ್ದೆ. ಉರ್ದು ಪುಸ್ತಕಗಳನ್ನು ಹಿಂದಿಗೆ ಹಾಗೂ ಹಿಂದಿಯಿಂದ ಉರ್ದುಗೆ ಭಾಷಾಂತರ ಮಾಡಬೇಕೆಂಬ ಇಚ್ಚೆ ಇರುವುದಾಗಿ ಅಲ್ವಿ ಹೇಳಿದ್ದಾನೆ.
SCROLL FOR NEXT