ಪ್ರೇಮ ನಿವೇದನೆ 
ವಿಶೇಷ

ಟ್ರಾಫಿಕ್ ಜಾಂನಲ್ಲಿ ಪ್ರೇಮ ನಿವೇದನೆ!

ಈ ಥರದ ದೃಶ್ಯಗಳನ್ನು ನೀವು ತೆಲುಗು ಚಿತ್ರಗಳಲ್ಲಿ ನೋಡಲು ಸಾಧ್ಯ ಅಥವಾ ಅವುಗಳ ಕನ್ನಡ ರೀಮೇಕ್ ನಲ್ಲಿ ಮಾತ್ರ ನೋಡಲು ಸಾಧ್ಯ!...

ಇಸ್ತಾಂಬುಲ್: ಈ ಥರದ ದೃಶ್ಯಗಳನ್ನು ನೀವು ತೆಲುಗು ಚಿತ್ರಗಳಲ್ಲಿ ನೋಡಲು ಸಾಧ್ಯ ಅಥವಾ ಅವುಗಳ ಕನ್ನಡ ರೀಮೇಕ್ ನಲ್ಲಿ ಮಾತ್ರ ನೋಡಲು ಸಾಧ್ಯ!

ಅಂಥ ಸಿನಿಮಾಗಳನ್ನು ನೋಡಿ ನಾವು 'ಪ್ರೇಮ ನಿವೇದನೆಗೆ ಹಿಂಗೆಲ್ಲ ಮಾಡ್ತಾರಾ. ಇದು ಸಾಧ್ಯವಾ?'' ಅಂತ ಟೀಕಿಸುತ್ತೇವೆ. ಆದರೆ ಟರ್ಕಿಯಲ್ಲೊಬ್ಬ ಈ ತರ್ಕವನ್ನೆಲ್ಲ ಗಾಳಿಗೆ ತೂರಿ ತನ್ನ ಪ್ರೇಮ ನಿವೇದನೆ ಮಾಡಿದ ಸಾಹಸಗೈದಿದ್ದಾನೆ.

ಒಂದೇ ವ್ಯತ್ಯಾಸ ಅಂದರೆ ನಮ್ಮ ಸಿನಿಮಾಗಳಲ್ಲಿ ಇಂಥ ಕೆಲಸ ಮಾಡಿದಾತ ಹೀರೋ ಎನಿಸಿಕೊಳ್ಳುತ್ತಾನೆ. ಪೊಲೀಸರ ಕೈಲೂ ಶಬ್ಭಾಷ್ ಎನಿಸಿಕೊಳ್ತಾನೆ. ಆದರೆ ಟರ್ಕಿಯಲ್ಲಿ ಇಂಥ ಹುಚ್ಚಾಟ ಮಾಡಿದವನಿಗೆ ಹಾಗೂ ಅವನಿಗೆ ಸಹಾಯ ಮಾಡಿದ ಗೆಳೆಯರ ಬಳಗಕ್ಕೆ ಕಂಬಿ ಎಣಿಸಲು ಕಳಿಸಲಾಗಿದೆ.

ಏನು ಮಾಡಿದ ಅಂತ ಕೇಳಿ!:
ಇದು ಇಸ್ತಾಂಬುಲ್ನಲ್ಲಿ ನಡೆದ ಘಟನೆ. ಈ ಕಥಾನಕದ ಹೀರೋ ಆಗಲು ಹೊರಟವನಿಗೆ ಹೀರೋಯಿನ್ ಮೇಲೆ ಲವ್ ಆಗಿದೆ. ಆದರೆ ಪ್ರಪೋಸ್ ಮಾಡೋಣ ಅಂದ್ರೆ ಆ ಮ್ಯಾಜಿಕ್ ವರ್ಡ್ ಕೇಳಿಸಿಕೊಳ್ಳೋಕೂ ಆಕೆ ಸಿಗುತ್ತಿಲ್ಲ. ಆದ್ರೂ ಅದ್ಯಾವ ಇಂಡಿಯನ್ ಮೂವೀ ನೋಡಿದ್ನೋ ಏನೋ...ಆಕೆ ದಿನವೂ ಓಡಾಡುವ ದಾರಿಯಲ್ಲಿ ತನ್ನ ಆರು ಗೆಳೆಯ ರೊಂದಿಗೆ ಕಾರುಗಳಲ್ಲಿ ಧಾವಿಸಿದ್ದಾನೆ. ಇಸ್ತಾಂಬುಲ್‍ನ ಹೆದ್ದಾರಿಗೆ ಅಡ್ಡಲಾಗಿ ತನ್ನ ಹಾಗೂ ಗೆಳೆಯರ ಒಟ್ಟು ಏಳು ಕಾರುಗಳನ್ನು ನಿಲ್ಲಿಸಿ ಆ ಮಾರ್ಗದ ಎಲ್ಲ ವಾಹನಗಳನ್ನು ನಿಲ್ಲುವಂತೆ ಮಾಡಿದ್ದಾನೆ.

ಕಿಲೋಮೀಟರುಗಟ್ಟಲೆ ಟ್ರಾಫಿಕ್ ಜಾಮ್!!
ಹಾಗೆ ಕಾರು ನಿಲ್ಲಿಸಿ ಈತ ಪ್ರೇಮ ನಿವೇದನೆ ಮಾಡಿಕೊಳ್ಳಲು ತನ್ನ ಹುಡುಗಿಯನ್ನು ತಡಕಾಡುತ್ತಾ ಹುಡುಕಾಡುತ್ತಿದ್ದರೆ, ಥೇಟ್ ಸಿನಿಮಾ ಶೈಲಿಯಲ್ಲೇ ತೊಂದರೆಗೊಳಗಾದ ಜನರೆಲ್ಲ ತಮ್ಮ ಕೆಲಸ ಮರೆತು ಈ ಮೋಜು ನೋಡಿ ಪೊಲೀಸರಿಗೆ ಹೇಳಿದ್ದಾರೆ. ಅವ್ರು ಬಂದು ಆತ ನನ್ನು ಎತ್ತಾಕಿಕೊಂಡು ಹೋಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ

ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ; ಕಂದಾಯ ಅಧಿಕಾರಿಯನ್ನು ಅಮಾನತುಗೊಳಿಸಿದ DCM ಜಿ ಪರಮೇಶ್ವರ