ಅನ್ನೆಗ್ರೆಟ್ ರೌಂಗಿಕ್ (ಮೊದಲ ಸಾಲಿನಲ್ಲಿ ಕುಳಿತಿರುವವರಲ್ಲಿ ಎರಡನೆಯವರು) ೫೫ ನೆ ವಯಸ್ಸಿನಲ್ಲಿ ತನ್ನ ಮಕ್ಕಳು ಮತ್ತು ಮೊಕ್ಕಳೊಂದಿಗೆ ತೆಗೆದ ಚಿತ್ರ, ಚಿತ್ರ ಕೃಪೆ: ಎ ಎಫ್ ಪಿ 
ವಿಶೇಷ

ಇಲ್ಲೊಬ್ಬಳು ಮಹತಾಯಿಯ ಕಥೆ; ೬೫ನೆ ವಯಸ್ಸಿನಲ್ಲಿ ನಾಲ್ವಳಿಗೆ ಜನನ

ಮೂರು ತಿಂಗಳ ಮುಂಚೆ ೬೫ ವರ್ಷದ ಮಹಿಳೆ ಅವಧಿಗೆ ಮುಂಚಿತವಾಗಿಯೇ ಒಂದೇ ಹೆರಿಗೆಯಲ್ಲಿ ಜನನ ನೀಡಿದ್ದ ನಾಲ್ಕು ಮಕ್ಕಳು ಆರೋಗ್ಯವಾಗಿದ್ದು ಶೀಘ್ರದಲ್ಲೆ ಬರ್ಲಿನ್

ಬರ್ಲಿನ್: ಮೂರು ತಿಂಗಳ ಮುಂಚೆ ೬೫ ವರ್ಷದ ಮಹಿಳೆ ಅವಧಿಗೆ ಮುಂಚಿತವಾಗಿಯೇ ಒಂದೇ ಹೆರಿಗೆಯಲ್ಲಿ ಜನನ ನೀಡಿದ್ದ ನಾಲ್ಕು ಮಕ್ಕಳು ಆರೋಗ್ಯವಾಗಿದ್ದು ಶೀಘ್ರದಲ್ಲೆ ಬರ್ಲಿನ್ ಆಸ್ಪತ್ರೆಯಿಂದ ಮನೆಗೆ ತೆರಳಲಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಈಗ ಈ ಹಸುಗೂಸುಗಳು ೨.೫ ಕೆಜಿಗೂ ಹೆಚ್ಚು ತೂಗುತ್ತಿವೆ ಎಂದು ಚಾರಿಟಿ ಆಸ್ಪತ್ರೆ ಮಂಗಳವಾರ ತಿಳಿಸಿದ್ದು, ಈ ತಿಂಗಳಲ್ಲಿ ಅವರು ಮನೆಗೆ ತೆರಳಬಹುದು ಎಂದು ತಿಳಿಸಿದೆ. ಹೆಣ್ಣು ಮಗುವಿಗೆ ನೀತಾ ಎಂದು ಹೆಸರಿಟ್ಟಿದ್ದು ಮೂರು ಗಂಡು ಮಕ್ಕಳನ್ನು ಡ್ರೀಸ್, ಬೆನ್ಸ್ ಮತ್ತು ಜಾನ್ ಎಂದು ಹೆಸರಿಸಲಾಗಿದೆ. ಸಿಸೇರಿಯನ್ ನಿಂದ ೨೬ ನೆ ವಾರಕ್ಕೆ ತಾಯಿ ಈ ಮಕ್ಕಳಿಗೆ ಮೇ ೧೯ ರಂದು ಜನ್ಮ ನೀಡಿದ್ದರು.

ನಾಲ್ವಳಿಗೆ ಜನ್ಮ ನೀಡಿದ ಅತಿ ದೊಡ್ಡ ವಯಸ್ಸಿನ ಮಹಿಳೆ ಅನ್ನೆಗ್ರೆಟ್ ರೌಂಗಿಕ್ ಎಂದು ನಂಬಲಾಗಿದೆ.

ನಿವೃತ್ತ ಶಾಲಾ ಶಿಕ್ಷಕಿಯಾದ ಈ ಮಹಿಳೆ ಈಗಾಗಲೇ ಐದು ತಂದೆಯರಿಂದ ಪಡೆದ ೧೦ ರಿಂದ ೪೪ ವರ್ಷದ ೧೩ ಜನ ಮಕ್ಕಳನ್ನು ಹೊಂದಿದ್ದಾಳೆ. ಜರ್ಮನಿಯಲ್ಲಿ ಕಾನೂನು ಬಾಹಿರ ಎನ್ನಲಾದ ಫಲವತ್ತಾದ ಅಂಡಾಶಯವನ್ನು ಸ್ವೀಕರಿಸಲು ಈ ಮಹಿಳೆ ವಿದೇಶಕ್ಕೆ ಹಾರಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್