ಸಿಂಪಲ್ ಟಿಪ್ಸ್: ಸಹೋದ್ಯೋಗಿಯ ಜೊತೆ ಹೇಗಿರಬೇಕು ಗೊತ್ತಾ?
ಕಚೇರಿಯೊಳಗೆ ಫೋನ್ ಕಾಲ್ ಮಾಡಬೇಕಾದ ಸಂದರ್ಭದಲ್ಲಿ, ನಿಮ್ಮ ಅಸುಪಾಸಿನಲ್ಲಿರುವವರ ಬಗ್ಗೆ ಗಮನ ಇರಲಿ. ಪ್ರತ್ಯೇಕ ಕೊಠಡಿಗಳಿದ್ದಲ್ಲಿ ಅದನ್ನು...
1.ಸೈಲೆನ್ಸ್ ಪ್ಲೀಸ್: ಕಚೇರಿಯೊಳಗೆ ಫೋನ್ ಕಾಲ್ ಮಾಡಬೇಕಾದ ಸಂದರ್ಭದಲ್ಲಿ, ನಿಮ್ಮ ಅಸುಪಾಸಿನಲ್ಲಿರುವವರ ಬಗ್ಗೆ ಗಮನ ಇರಲಿ. ಪ್ರತ್ಯೇಕ ಕೊಠಡಿಗಳಿದ್ದಲ್ಲಿ ಅದನ್ನು ಉಪಯೋಗಿಸಿಕೊಳ್ಳಿ,
2. ವಾಪಸ್ ಮಾಡಿ: ಸಹೋದ್ಯೋಗಿಯಿಂದ ಪಡೆದಿರುವ ಪೆನ್, ಕತ್ತರಿ, ಸ್ಟ್ಯಾಪ್ಲರ್ ನ್ನು ಅವರು ಕೇಳುವ ಮುಂಚೆಯೇ ವಾಪಸ್ ನೀಡಿ. ಬೇರೆಯವರ ವಸ್ತುಗಳನ್ನು ವಾಪಸ್ ಮಾಡಲು ಮರೆಯುವುದು ಅತ್ಯಂತ ಕೆಟ್ಟ ಗುಣ.
3. ಮಹತ್ವ ನೀಡಿ: ಸಹೋದ್ಯೋಗಿಯೊಂದಿಗೆ ಸಭೆ ಇದ್ದಲ್ಲಿ ಸಮಯಕ್ಕೆ ಮೊದಲೇ ಹಾಜರಾಗಿ, ಸಮಯದ ಮೇಲೆ ನಿಮಗಿರುವ ಗೌರವವನ್ನು ತೋರಿಸಿ. ಸಮಯಕ್ಕೆ ಸರಿಯಾಗಿ ಹೋದಲ್ಲಿ ನಿಮ್ಮ ಮೇಲೆ ಅವರಿಗಿರುವ ಗೌರವ ಹೆಚ್ಚುತ್ತದೆ.
4. ಯಾರನ್ನೂ ನೋಯಿಸಬೇಡಿ: ಕಚೇರಿಯಲ್ಲಿ ಎಲ್ಲ ಜಾತಿಯ, ಧರ್ಮದ ಮೇಲೆ ನಂಬಿಕೆ ಹೊಂದಿರುವವರು ಇರುತ್ತಾರೆ. ಮಾತನಾಡುವ ಸಮಯದಲ್ಲಿ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಅವರ ಮನಸ್ಸಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಿ.
5.ಗಾಸಿಪ್ ಬೇಡ: ಕಚೇರಿಗಳಲ್ಲಿ ಸಹೋದ್ಯೋಗಿಗಳ ಬಗ್ಗೆ ಗಾಸಿಪ್ ಮಾಡುವುದು ಸಾಮಾನ್ಯ. ನೀವು ಅದರಲ್ಲಿ ಭಾಗಿಯಾಗಿ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಬೇಡಿ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.