ಎಂ. ಗೋವಿಂದ ಪೈ 
ವಿಶೇಷ

ನವೆಂಬರ್ 1 ನನಗೆ ಶ್ರಾದ್ಧದ ದಿನ ಎಂದಿದ್ದರು ಗೋವಿಂದ ಪೈ!

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ...

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಎಂದು ಬರೆದವರು ಎಂ. ಗೋವಿಂದ ಪೈ. ಅವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು.

ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಪೈ ಅವರ ತಂದೆ ಮಂಗಳೂರಿನವರು ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.

ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ.

1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಪೈ ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ಬರೆದರು. ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!

ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ.

ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು.

ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?