ಟೋಕಿಯೋ: ಗಿನ್ನಿಸ್ ವಿಶ್ವ ದಾಖಲೆಯಲ್ಲಿ ವಿಶ್ವದ ಅತಿ ಹಿರಿಯ ಮನುಷ್ಯ ಎಂದು ದಾಖಲಾಗಿರುವ ಜಪಾನಿನ ಸಕರಿ ಮೊಮೊಯ್ ತನ್ನ ೧೧೨ನೆ ವಯಸ್ಸಿನಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಮಾಧ್ಯವೊಂದು ವರದಿಮಾಡಿದೆ.
ಕಿಡ್ನಿ ವೈಫಲ್ಯದಿಂದ ಮೊಮೋಯ್ ಅವರು ಟೋಕಿಯೋದ ಆಸ್ಪತ್ರೆಯೊಂದರಲ್ಲಿ ಜುಲೈ ೫ ರಂದು ಮೃತಪಟ್ಟಿದ್ದಾರೆ.
ಟೋಕಿಯೋದ ಬಳಿಯಿರುವ ಸೈಟಮಾ ನಗರದ ನಿವಾಸಿ ಮೊಮೋಯ್ ಅವರನ್ನು ಗಿನ್ನಿಸ್, ವಿಶ್ವದ ಅತಿ ದೊಡ್ಡ ಮನುಷ್ಯ ಎಂದು ಆಗಸ್ಟ್ ೨೦೧೪ರಲ್ಲಿ ಗುರುತಿಸಿತ್ತು.
ಇವರ ನಿಧನದ ನಂತರ ಜಪಾನಿನ ನಗೋಯಾದ ನಿವಾಸಿ ೧೧೨ ವರ್ಷದ ಯಸುತರೋ ಕೊಯ್ಡೆ ಅವರು ಈಗ ವಿಶ್ವದ ಅತಿ ಹಿರಿಯ ವ್ಯಕ್ತಿಯಾಗಿ ಭಡ್ತಿ ಹೊಂದಿದ್ದಾರೆ ಎಂದು ಜಪಾನಿನ ಆರೋಗ್ಯ, ಕಾರ್ಮಿಕ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
ವಿಶ್ವ ಅತಿ ಹಿರಿಯ ಅಜ್ಜಿ ಎಂದು ದಾಖಲಾಗಿದ್ದ ಜಪಾನಿನ ಮಿಸಾವೋ ಒಕಾವ ಅವರು ತಮ್ಮ ೧೧೭ ವಯಸ್ಸಿನಲ್ಲಿ ಏಪ್ರಿಲ್ ನಲ್ಲಿ ನಿಧನಹೊಂದಿದ್ದರು.