ವಿಶೇಷ

ಎರಡು ಮಕ್ಕಳ ತಾಯಿ; ೧೨೨ ಬೆಕ್ಕುಗಳ ಮಹಾತಾಯಿ

Guruprasad Narayana

ಲಂಡನ್: ಸಿಲ್ವಾನಾ ವ್ಯಾಲೆಂಟಿನೋ ಲಾಕ್ ಅವರಿಗೆ ಬೆಕ್ಕುಗಳೆಂದರೆ ಹುಚ್ಚು ಪ್ರೀತಿ. ತಮ್ಮ ೧೨೨ ಸಾಕು ಬೆಕ್ಕುಗಳಿಗೆ ಅವರು ವರ್ಷಕ್ಕೆ ೯೦ ಸಾವಿರ ಪೌಂಡ್ ಗಳನ್ನು ವ್ಯಯಿಸುತ್ತಾರೆ.

ತಮ್ಮ ೩೨ ವರ್ಷದ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬದುಕುವ ಈ ತಾಯಿ, ಮನೆಯ ಅವರಣ ಮತ್ತು ರೂಮುಗಳಲ್ಲಿ ೫೨ ಬೆಕ್ಕುಗಳನ್ನು, ತಮ್ಮ ಮನೆಯ ಕೆಳಗಿನ ತೋಟದಲ್ಲಿ ೪೦ ಬೆಕ್ಕುಗಳನ್ನು ಮತ್ತು ಅಕ್ಕ ಪಕ್ಕದ ಜಾಗಗಳಲ್ಲಿ ೩೦ ಬೆಕ್ಕುಗಳನ್ನು ಸಾಕಿದ್ದಾರೆ ಎಂದು ಮಿರರ್ ವರದಿ ಮಾಡಿದೆ.

ಬೆಕ್ಕುಗಳ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ೫೫ ವರ್ಷದ ಲಾಕ್, ಬೆಕ್ಕುಗಳೆಂದರೆ ನನಗೆ ಪಂಚಪ್ರಾಣ, ಸಾಕುವುದು ಒಂದು ರೀತಿಯ ಚಟ ಮತ್ತು ಅದೊಂದು ರೀತಿ 'ಅಬ್ಸೆಸ್ಸಿವ್ ಕಂಪಲ್ಶನ್ ಡಿಸ್ ಆರ್ಡರ್' ರೋಗವಿದ್ದಂತೆ ಎನ್ನುತ್ತಾರೆ.

ತಮ್ಮ ಕಾರಿನ ನೊಂದಣಿ ಪಟ್ಟಿಯ ಮೇಲೆ 'ಹುಚ್ಚು ಬೆಕ್ಕು ಮಹಿಳೆ' ಎಂದು ನಮೂದಿಸಿಕೊಂಡಿದ್ದು ಯಾವುದೇ ಅನಾಥ ಬೆಕ್ಕಿನ ಬಗ್ಗೆ ಕರೆ ಬಂದರೂ ತನಗೆ ಇಲ್ಲ ಎನ್ನಾಲಾಗುವುದಿಲ್ಲ ಎನ್ನುತ್ತಾರೆ,

ಕಳೆದ ೧೨ ವರ್ಷಗಳಲ್ಲಿ ೬೦೦ ಬೆಕ್ಕುಗಳನ್ನು ರಕ್ಷಿಸಿದ್ದು, ೭೦೦೦ ಬೆಕ್ಕುಗಳನ್ನು ಅವರ ಒಡೆಯರಿಗೆ ಹಿಂದಿರುಗಿಸಿದ್ದಾರೆ. ಅವರ ಪತಿಯು ಕೂಡ ಈ ರಕ್ಷಣಾ ಕಾರ್ಯಕ್ಕೆ ಸಮ ಮೊತ್ತವನ್ನು ನೀಡುತ್ತಾರಂತೆ!

ಇದರ ಬಗ್ಗೆ ಮಾತನಾಡಿದ ಅವರ ಪತಿ ಟೋನಿ ಲಾಕ್ ನನಗೆ ನನ್ನ ಪತ್ನಿಯ ಬೆಕ್ಕಿನ ಪ್ರೀತಿಯ ಬಗ್ಗೆ ಗೊತ್ತಿದೆ. ಮನೆ ತುಂಬೆಲ್ಲ ಬೆಕ್ಕುಗಳಿದ್ದರೂ ನನಗೇನು ತೊಂದರೆಯಿಲ್ಲ ಎಂದಿದ್ದಾರೆ.

SCROLL FOR NEXT