ವಿಶೇಷ

ರಾಮನವಮಿ ಸಂಗೀತಕ್ಕೆ ಸಜ್ಜಾಗಿ

Guruprasad Narayana

ಬೆಂಗಳೂರು: ರಾಮನವಮಿ ಎಂದರೆ ಥಟ್ಟನೆ ನೆನಪಾಗುವುದು ಪಾನಕ, ಕೋಸಂಬರಿ ಮಜ್ಜಿಗೆ. ಆದರೆ ಬೆಂಗಳೂರಿನ ಮಟ್ಟಿಗೆ ಇದರ ಜೊತೆ ರಾಮಸೇವಾ ಮಂಡಲಿಯ ಸಂಗೀತೋತ್ಸವವನ್ನೂ ಸೇರಿಸಬೇಕಲ್ಲವೇ!

ಹೌದು ೭೭ನೆ ಶ್ರೀ ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದೆ. ಎಂದಿನಂತ ಒಂದು ತಿಂಗಳು ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರದಾದ್ಯಂತ ವಿವಿಧ ಕಲಾವಿದರು ಬೆಂಗಳೂರಿನ ಪ್ರತಿಷ್ಟಿತ ಕೋಟೆ ಮೈದಾನದಲ್ಲಿ ಶಾಸ್ತ್ರೀಯ ಸಂಗೀತವನ್ನು ಉಣಬಡಿಸಲಿದ್ದಾರೆ.

ಮಾರ್ಚ್ ೨೮ರಂದು ರಾಮನವಮಿ. ಅಂದು ಸಂಜೆ ಶೇಖ್ ಮಹಬೂಬ್ ಸುಭಾನಿ ಮತ್ತು ಕಾಲೀಶಾಬಿ ಮಹಬೂಬ್ ಅವರ ನಾದಸ್ವರ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರಕಲಿದೆ. ಅರುಣಾ ಸಾಯಿರಾಂ, ಕೆ ಜೆ ಯೇಸುದಾಸ್, ಹೈದರಾಬಾದ್ ಸಹೋದರರು, ಪಟ್ಟಾಭಿರಾಮ ಪಂಡಿತ್, ಬೆಂಗಳೂರು ಶಂಕರ್, ಸಂಜಯ್ ಸುಬ್ರಮಣ್ಯ, ಟಿವಿ ಗೋಪಾಲಕೃಷ್ಣನ್, ರಂಜನಿ ಮತ್ತು ಗಾಯತ್ರಿ, ತ್ರಿಚೂರು ಸಹೋದರರು, ವಿಶ್ವಮೋಹನ ಭಟ್ ಮುಂತಾದ ಖ್ಯಾತ ಕಲಾವಿದರು ಇಲ್ಲಿ ಪ್ರದರ್ಶನ ನೀಡಲಿದ್ದಾರೆ.

ಕಾರ್ಯಕ್ರಮದ ಪೂರ್ಣ ಪಟ್ಟಿಯನ್ನು ಇಲ್ಲಿ ನೋಡಬಹುದು.
http://ramanavami.org/schedule.php

SCROLL FOR NEXT