ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಶೇಷ

ಹಲವು ಭಾಷೆಗಳನ್ನು ಕೇಳುತ್ತಾ ಬೆಳೆಯುವ ಮಕ್ಕಳಲ್ಲಿ ಉತ್ತಮ ಸಂವಹನಶೀಲತೆ

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕೇಳುವ ಮಕ್ಕಳು ಉತ್ತಮ ಸಂವಹನಕಾರರಾಗುತ್ತಾರೆ ಎನ್ನುತ್ತದೆ ನೂತನ ಅಧ್ಯಯನ.

ಸಾಂದರ್ಭಿಕ ಚಿತ್ರ
Guruprasad Narayana
Updated On : 13 May 2015, 5:36 am

ನ್ಯೂಯಾರ್ಕ್: ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕೇಳುವ ಮಕ್ಕಳು ಉತ್ತಮ ಸಂವಹನಕಾರರಾಗುತ್ತಾರೆ ಎನ್ನುತ್ತದೆ ನೂತನ ಅಧ್ಯಯನವೊಂದು.

ಮಕ್ಕಳು ಹೆಚ್ಚು ಭಾಷೆಗಳನ್ನು ತಾವೇ ಬಲ್ಲವರಾಗಿರಬೇಕಿಲ್ಲ. ಹಲವು ಭಾಷೆಗಳನ್ನು ಕೇಳುತ್ತಾ ಬೆಳೆದರೆ ಸಾಕು ಒಳ್ಳೆಯ ಸಾಮಾಜಿಕ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ ಎನ್ನುತ್ತದೆ ಅಧ್ಯಯನ.

"ಬಹುಭಾಷಾ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಒಬ್ಬರು ಮತ್ತೊಬ್ಬರ ಜೊತೆ ಏನು ಮಾತನಾಡುತ್ತಾರೆ ಹಾಗು ಬಳಸುವ ಭಾಷೆಯ ಮೇಲೆ ಸಾಮಾಜಿಕ ಸ್ವರೂಪಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾರೆ" ಎಂದು ಶಿಕಾಗೋ ವಿಶ್ವವಿದ್ಯಾಲಯದ ಮನಃಶಾಸ್ತ್ರದ ಸಹ ಉಪನ್ಯಾಸಕ ಕ್ಯಾಥರೀನ್ ಕಿಂಜ್ಲರ್ ತಿಳಿಸಿದ್ದಾರೆ.

ಉತ್ತಮ ಸಂವಹನಕ್ಕೆ ಇತರರ ದೃಷ್ಟಿಕೋನವನ್ನು ತಿಳಿದುಕೊಳ್ಳುವುದು ಅತಿ ಮುಖ್ಯ ಹಾಗೂ ತಮ್ಮ ಮಾತೃಭಾಷೆಯನ್ನಷ್ಟೇ ಕೇಳುವ ಮಕ್ಕಳಿಗಿಂತಲೂ ಬಹುಭಾಷೆಗಳ ಮಧ್ಯ ಬೆಳೆಯುವ ಮಕ್ಕಳಿಗೆ ಬೇರೆಯವರ ಮಾತನ್ನು ಗ್ರಹಿಸುವ ಶಕ್ತಿ ಹೆಚ್ಚಿರುತ್ತದೆ ಎಂದಿದೆ ಅಧ್ಯಯನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments