ವಿಮಾನದಲ್ಲಿ ಜನಿಸಿದ ಮಗು 
ವಿಶೇಷ

ತಾನು ಗರ್ಭಿಣಿ ಎಂದೇ ತಿಳಿಯದ ಕೆನಡಾ ಮಹಿಳೆ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದಳು

ತಾನು ಗರ್ಭಿಣಿ ಎಂದು ತಿಳಿಯದ ಕೆನಡಾ ಮಹಿಳೆ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಪವಾಡ ಸದೃಶ ಘಟನೆ ನಡೆದಿದೆ.

ವಾಶಿಂಗ್ಟನ್: ತಾನು ಗರ್ಭಿಣಿ ಎಂದೇ ತಿಳಿಯದ ಕೆನಡಾ ಮಹಿಳೆ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಪವಾಡ ಸದೃಶ ಘಟನೆ ನಡೆದಿದೆ.

ತನ್ನ ಪ್ರಿಯಕರ ಮೈಕೆಲ್ ಬ್ರಾಂಚ್ ಜೊತೆ ಮೇ ೧೦ ರಂದು ಕೆನಾಡದಿಂದ ಟೋಕಿಯೋಗೆ ಹೊರಟ ವಿಮಾನ ಏರಿದ ಅದಾ ಗುಆನ್ ಅವರಿಗೆ ವಿಮಾನ ಪೆಸಿಫಿಕ್ ಸಾಗರದ ಮೇಲೆ ಹಾರುತ್ತಿದ್ದಾಗ ಹೆರಿಗೆ ಬೇನೆ ಕಾಣಿಸಿಕೊಂಡಿದೆ.

ಮಗು ಚೋಲೆಯ ಅಜ್ಜಿ ಸಾಂದ್ರಾ ಬ್ರಾಂಚ್ ಅವರಿಗೆ ಅವರ ಮಗ 'ಅಮ್ಮಂದಿರ ದಿನ'ದಂದು  ಭಾವನಾತ್ಮಕ ಕರೆ ಮಾಡಿ ಈ ವಿಷಯ ತಿಳಿಸಿದಾಗ ಆಶ್ಚರ್ಯಚಕಿತರಾದ ಅವರು "ಏನು? ಇದು ಹೇಗೆ ಸಾಧ್ಯ ಅವಳು ಗರ್ಭಿಣಿಯಾಗಿರಲಿಲ್ಲ" ಎಂದಿದ್ದಾರೆ ಎಂದು ಕೂಡ ವರದಿಯಾಗಿದೆ.

ಇಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ನಮ್ಮ ಸಿಬ್ಬಂದಿಗೆ ಒಳ್ಳೆಯ ತರಬೇತಿ ನಿದಿರುತ್ತೇವೆ ಎಂದು ಏರ್ ಕೆನಡಾ ವಕ್ತಾರ ಏಂಜೆಲಾ ಮಾಹ ತಿಳಿಸಿದ್ದಾರೆ. ಆ ಸಮಯದಲ್ಲಿ ವಿಮಾನದಲ್ಲಿ ವೈದ್ಯರೂ ಇದ್ದುದ್ದರಿಂದ ಸಹಾಯವಾಗಿದೆ. ಸಹಾಯಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

"ಅಮ್ಮಂದಿರ ದಿನದ ಶುಭಾಶಯಗಳು. ಎ ಸಿ ೦೦೦೯ ರಲ್ಲಿ ಸುರಕ್ಷಿತವಾಗಿ ಟೋಕಿಯೋಗೆ ಬಂದಿಳಿದ ತಾಯಿ ಮತ್ತು ಮಗುವಿಗೆ ಶುಭಾಶಯಗಳು" ಎಂದು ವಿಮಾನಯಾನ ಸಂಸ್ಥೆ ಟ್ವೀಟ್ ಮಾಡಿದೆ.

ವಿಮಾನದಲ್ಲಿ ಜನ್ಮ ನೀಡಿದ ೩೭ ತಿಂಗಳ ಗರ್ಭಿಣಿ ಗುಆನ್(೨೩) ಕೆಲವು ದಿನಗಳ ಹಿಂದೆ ತಪಾಸಣೆಗೆ ವೈದ್ಯರ ಬಳಿ ತೆರಳಿದ್ದರು ಕೂಡ ವೈದ್ಯರು ಆಕೆ ಗರ್ಭಿಣಿಯಾಗಿರುವುದನ್ನು ಕಂಡುಹಿಡಿದಿಲ್ಲ. ಅಲ್ಲದೆ ಆಕೆ ಪ್ರತ್ಯೇಕವಾಗಿ ತೆಗೆದುಕೊಂಡ ಗರ್ಭಿಣಿ ತಪಾಸಣೆ ಪರೀಕ್ಷೆ ಕೂಡ ಋಣಾತ್ಮಕವಾಗಿತ್ತು ಎಂದು ವರದಿಯಾಗಿದೆ.  



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT