ಕೇವಲ 782 ರು.ಗೆ ಗೂಗಲ್ ಡಾಟ್ ಕಾಮ್ ಖರೀದಿಸಿದ ಟೆಕ್ಕಿ ಸನ್ಮಯ್ ವೇದ್!
ಜಗತ್ತಿನ ಅತ್ಯಂತ ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಡಾಟ್ ಕಾಮ್ ಅನ್ನು ಕೇವಲ 782 ರುಪಾಯಿಗೆ ಖರೀದಿಯಾಗಿತ್ತು ಎಂದು ನಂಬುತ್ತೀರಾ?...
ನ್ಯೂಯಾರ್ಕ್: ಜಗತ್ತಿನ ಅತ್ಯಂತ ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಡಾಟ್ ಕಾಮ್ ಅನ್ನು ಕೇವಲ 782 ರುಪಾಯಿಗೆ ಖರೀದಿಯಾಗಿತ್ತು ಎಂದು ನಂಬುತ್ತೀರಾ?
ಹೌದು ಬರೋಬ್ಬರಿ 23 ಲಕ್ಷ ಕೋಟಿ ರು. ಮಾರುಕಟ್ಟೆ ಮೌಲ್ಯ ಹೊಂದಿರುವ ಅಂತರ್ಜಾಲ ಕ್ಷೇತ್ರದ ಜಗದ್ವಿಖ್ಯಾತ ಕಂಪನಿ ಗೂಗಲ್ ಕಂಪನಿಯ ವೆಬ್ಸೈಟ್ ವಿಳಾಸವನ್ನು ಅದೇ ಕಂಪನಿಯ ಮಾಜಿ ನೌಕರ ಸನ್ಮಯ್ ವೇದ್ ಎಂಬಾತ ಕೇವಲ 782 ರು.ಗೆ ಖರೀದಿಸಿಬಿಟ್ಟಿದ್ದ.
ಆದರೆ ಗೂಗಲ್ ಟಾಡ್ ಕಾಮ್ ಖರೀಸಿದ್ದ ಖುಷಿ ಕೇವಲ ಒಂದು ನಿಮಿಷಕ್ಕೆ ಮಾತ್ರ ಸೀಮಿತವಾಗಿತ್ತು. ಬೋಸ್ಟನ್ನಲ್ಲಿ ಆನ್ಲೈನ್ ರೀಟೆಲ್ ಕ್ಷೇತ್ರದ ಪರಿಣತರಾಗಿರುವ ಸನ್ಮಯ್ ಅವರು ಇಂಟರ್ನೆಟ್ ಡೊಮೇನ್ಗಾಗಿ ಹುಡುಕಾಟ ನಡೆಸಿದ್ದರು. ಆ ವೇಳೆ ಗೂಗಲ್ ಡಾಟ್ ಕಾಮ್ ಕೇವಲ 12 ಡಾಲರ್ (782 ರೂ.)ಗೆ ಮಾರಾಟಕ್ಕಿರುವುದು ತಿಳಿದುಬಂದಿದೆ. ಕೂಡಲೇ ವೇದ್ ಅದನ್ನು ಅವರು ಖರೀದಿಸಿಬಿಟ್ಟರು. ಕ್ರೆಡಿಟ್ಕಾರ್ಡ್ ಬಳಸಿ ಹಣ ಪಾವತಿಯನ್ನೂ ಮಾಡಿದ್ದು, ಗೂಗಲ್ ಡಾಟ್ ಕಾಮ್ ಸನ್ಮಯ್ ಹೆಸರಿಗೆ ವರ್ಗವಾಗಿತ್ತು.
ಇದಾದ ಒಂದು ನಿಮಿಷದಲ್ಲೇ ವೇದ್ ಗೆ ಗೂಗಲ್ನಿಂದ ಇ-ಮೇಲ್ ವೊಂದನ್ನು ಕಳಿಸಿ, ಗೂಗಲ್ ಡಾಟ್ ಕಾಮ್ ಖರೀದಿ ವ್ಯವಹಾರವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ ಆ ಕಂಪನಿ, ಸನ್ಮಯ್ ನೀಡಿದ್ದ 782 ರೂ. ಹಿಂದಿರುಗಿಸಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.