ಸಂತ್ ಬಲ್‌ಬೀರ್ ಸಿಂಗ್ ಸಿಚೇವಲ್ 
ವಿಶೇಷ

ಮಾಲಿನ್ಯ ತುಂಬಿದ್ದ 160 ಕಿ.ಮೀ ಉದ್ದದ ನದಿಯನ್ನು ಸ್ವಚ್ಛಗೊಳಿಸಿದ ಇಕೋ ಬಾಬಾ

2000 ಇಸವಿಯಲ್ಲಿ ಇಕೋ ಬಾಬಾ ಎಂದೇ ಕರೆಯಲ್ಪಡುವ ಸಂತ್ ಬಲ್‌ಬೀರ್ ಸಿಂಗ್ ಸಿಚೇವಲ್ ಈ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಿದ್ದು, ಈಗ ತಮ್ಮ...

ಪಂಜಾಬ್: ಮಾಲಿನ್ಯ ತುಂಬಿದ್ದ ಪಂಜಾಬ್‌ನ ಕಾಲೇ ಬೈನ್ ಎಂಬ ನದಿಯನ್ನು ಇಕೋ ಬಾಬಾ ಮತ್ತು ಸಂಗಡಿಗರು ಸೇರಿ ಸ್ವಚ್ಛಗೊಳಿಸಿದ್ದಾರೆ. ಕಾರ್ಖಾನೆಯ ತ್ಯಾಜ್ಯಗಳು ಸೇರಿದಂತೆ ಇಡೀ ಊರಿನ ಮಾಲಿನ್ಯವು ಈ ನದಿಗೆ ಸೇರಿ, ಅಲ್ಲಿನ ನೀರು ಉಪಯೋಗ ಶೂನ್ಯವಾಗಿತ್ತು.
2000 ಇಸವಿಯಲ್ಲಿ  ಇಕೋ ಬಾಬಾ ಎಂದೇ ಕರೆಯಲ್ಪಡುವ ಸಂತ್ ಬಲ್‌ಬೀರ್ ಸಿಂಗ್ ಸಿಚೇವಲ್ ಈ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಿದ್ದು, ಈಗ ತಮ್ಮ ಕಾರ್ಯದಲ್ಲಿ ಯಶ ಕಂಡಿದ್ದಾರೆ. 160 ಕಿಮೀ ಉದ್ದವಿರುವ ಈ ನದಿಯಿಂದ ಟನ್‌ಗಟ್ಟಲೆ ಮಾಲಿನ್ಯವನ್ನು ಬಾಬಾ ಮತ್ತು ಅವರ ಸಂಗಡಿಗರು ಸೇರಿ ಸ್ವಚ್ಛಗೊಳಿಸಿದ್ದಾರೆ. ವಿಶೇಷ ಎಂದರೆ ಸರ್ಕಾರವಾಗಲೀ, ಇನ್ನಿತರ ಯಾವುದೇ ಸಂಘ ಸಂಸ್ಥೆಗಳ ಸಹಾಯವಿಲ್ಲದೆ ಇವರು ನದಿಯಿಂದ ಹೂಳೆತ್ತುವ ಕಾರ್ಯವನ್ನು ಮಾಡಿದ್ದಾರೆ. 
ಇದೀಗ ಕಾಲೇ ಬೈನ್ ನದಿಯಲ್ಲಿ ಶುದ್ದಜಲ ಹರಿಯುತ್ತಿದೆ. ಈ ನದಿಯನ್ನು  ಉಪಯೋಗ ಯೋಗ್ಯವಾಗುವಂತೆ ಮಾಡಿದ ಬಾಬಾ ಮತ್ತು ಸಂಗಡಿಗರು ಈಗ ನದಿ ದಂಡೆಯನ್ನು  ಸುಂದರವಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 
ಜಲಕ್ಷಾಮದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಊರಿನಲ್ಲಿ ನದಿಯೊಂದನ್ನು ಸ್ವಚ್ಛಗೊಳಿಸಿ ಜನರಿಗೆ ಸಹಾಯ ಮಾಡಿದ ಈ ಬಾಬಾ ಮತ್ತು ಸಂಗಡಿಗರಿಗೆ ಜೈ ಹೋ..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯಸಭೆ ನಾಮಪತ್ರ ವಿವಾದ: ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್‌ಗೆ ಸುಪ್ರೀಂ ಕೋರ್ಟ್‌ ಶಾಕ್, ಪರಿಹಾರಕ್ಕಾಗಿ ECI ಮೊರೆ ಹೋಗುವಂತೆ ಸೂಚನೆ..!

ಧರ್ಮಸ್ಥಳ ಬುರುಡೆ ಕೇಸ್ ನಲ್ಲಿ ಪ್ರಕಾಶ್ ರಾಜ್ ಹೆಸರು ಥಳುಕು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

"ನಿಮ್ಮ ಶಸ್ತ್ರಾಸ್ತ್ರಗಳು ಭಾರತದ ವಿರುದ್ಧ ಬಳಕೆಯಾಗಿವೆ": ರಷ್ಯಾ ತೈಲ ಖರೀದಿ ಸಮರ್ಥಿಸಿ, ಯುರೋಪ್ ದೇಶಗಳ ದ್ವಿಮುಖ ನೀತಿ ಬೆತ್ತಲು ಮಾಡಿದ ಜೈಶಂಕರ್..!

ಇರಾನ್‌ ಜೊತೆ ಯುದ್ಧ ಅಂತ್ಯಗೊಂಡಿದೆ, ವಾರಾಂತ್ಯದಲ್ಲಿ ಯುರೋಪಿನಲ್ಲಿ ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

Bidadi Township:​ ವಿವಾದದ ಮಧ್ಯೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ ಸರ್ಕಾರ!

SCROLL FOR NEXT