ವಿಶೇಷ

ಭಾರತದ ನಳಂದ ಸೇರಿದಂತೆ ವಿಶ್ವ ಪಾರಂಪರಿಕ ಪಟ್ಟಿಗೆ 9 ನೂತದ ಸಾಂಸ್ಕೃತಿಕ ತಾಣಗಳು

Guruprasad Narayana
ಇಸ್ತಾನಬುಲ್: ವಿಶ್ವ ಪಾರಂಪರಿಕ ತಾಣ ಸಮಿತಿ ಶುಕ್ರವಾರ ತನ್ನ ಪಟ್ಟಿಗೆ ಒಂಭತ್ತು ನೂತನ ಸಾಂಸ್ಕೃತಿಕ ಸ್ಥಳಗಳನ್ನು ಸೇರಿಸಿದ್ದು, ಭಾರತದ ಪುರಾತತ್ವ ಶಾಸ್ತ್ರ ಉತ್ಖನನ ತಾಣ ನಳಂದ ಮಹಾವಿಹಾರ ಕೂಡ ಅದರಲ್ಲಿ ಸ್ಥಾನ ಪಡೆದಿದೆ. 
ಇದಕ್ಕೆ ವಿಶ್ವದ ಹಲವೆಡೆಗಳಿಂದ ನಾಮಾಂಕಿತವಾಗಿದ್ದ 27 ಸ್ಥಾನಗಳಲ್ಲಿ ಬಗ್ಗೆ 40 ನೇ ಸಭೆಯಲ್ಲಿ ಚರ್ಚೆ ನಡೆಸಿದ ಸಮಿತಿ ಕೊನೆಗೆ ಒಂಬತ್ತು ಹೊಸ ಸ್ಥಳಗಳನ್ನು ಸೇರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
ಈ ಒಂಬತ್ತು ನೂತನ ವಿಶ್ವ ಪಾರಂಪರಿಕ ತಾಣಗಳು ಹೀಗಿವೆ: ಜೌಜಿಯಾಂಗ್ ಹುಯೇಶನ್ ರಾಕ್ ಆರ್ಟ್ ಕಲ್ಚರಲ್ ಲ್ಯಾಂಡ್ಸ್ಕೇಪ್ (ಚೈನಾ). ಆರ್ಕಿಯಾಲಾಜಿಕಲ್ ಸೈಟ್ ಆಫ್ ನಳಂದ ಮಹಾವಿಹಾರ (ಭಾರತ), ದ ಪರ್ಷಿಯನ್ ಕ್ವನಾತ್ (ಇರಾನ್), ನಾನ್ ಮಾಡೊಲ್: ಸೇರಮೋನಿಯಲ್ ಸೆಂಟರ್ ಆಫ್ ಈಸ್ಟರ್ನ್ ಮೈಕ್ರೋನೇಷಿಯಾ (ಮೈಕ್ರೋನೇಷಿಯಾ), ಸ್ಟೆಕ್ಕಿ ಮೆಡಿವೆಲ್ ತಾಂಬ್ ಸ್ಟೋನ್ಸ್ ಅಂಡ್ ಗ್ರೇವ್ ಯಾರ್ಡ್ಸ್ (ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಕ್ರೊಯೇಷಿಯಾ, ಮಾಂಟೆನಿಗ್ರೋ, ಸರ್ಬಿಯಾ), ಆರ್ಕಿಯಾಲಾಜಿಕಲ್ ಸೈಟ್ ಆಫ್ ಫಿಲಿಪ್ಪಿ (ಗ್ರೀಸ್), ಆಂಟಿಕ್ವೆರಾ ಆಫ್ ಡಾಲ್ಮೆನ್ಸ್ ಸೈಟ್ (ಸ್ಪೇನ್), ಆರ್ಕಿಯಾಲಾಜಿಕಲ್ ಸೈಟ್ ಆಫ್ ಆನಿ (ಟರ್ಕಿ) ಮತ್ತು ಗಾರ್ಹಮ್ಸ್ ಕೇವ್ ಕಾಂಪ್ಲೆಕ್ಸ್ (ಬ್ರಿಟನ್).
ವಿಶ್ವಸಂಸ್ಥೆಯ ಅಧೀನದಲ್ಲಿರುವ ವಿಶ್ವ ಪಾರಂಪರಿಕ ತಾಣ ಸಮಿತಿ 1977 ರಲ್ಲಿ ಸ್ಥಾಪನೆಗೊಂಡಿತ್ತು. 
SCROLL FOR NEXT