ನಾಗರತ್ನ ಸುನಿಲ್ ರಾಮಗೌಡ 
ವಿಶೇಷ

ಮಾರಕ ಹೆಚ್ ಐವಿಗೆ ಸವಾಲೆಸೆದು, ಇತರರಿಗೆ ಮಾದರಿಯಾದ ನಾಗರತ್ನ!

ಖಾಯಿಲೆ ಬಂದಾಕ್ಷಣ ಮನುಷ್ಯರು ತಮ್ಮಿಂದ ಇನ್ನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಮನಸ್ಸಿನ ಭಯಗಳು ಕೂಡ ನಮ್ಮ ಸಾವಿನ...

ಬೆಳಗಾವಿ: ಖಾಯಿಲೆ ಬಂದಾಕ್ಷಣ ಮನುಷ್ಯರು ತಮ್ಮಿಂದ ಇನ್ನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಮನಸ್ಸಿನ ಭಯಗಳು ಕೂಡ ನಮ್ಮ ಸಾವಿನ ಸಮಯ ಹತ್ತಿರ ಬರುವಂತೆ ಮಾಡಿಬಿಡುತ್ತವೆ.

ಹೆಚ್ಐವಿಯನ್ನು ಮಾರಣಾಂತಿಕ ಖಾಯಿಲೆಯೆಂದು ಪರಿಣಗಣಿಸಲಾಗುತ್ತದೆ. ಹೆಚ್ಐವಿ ಬಂದರೆ ಆ ವ್ಯಕ್ತಿಯ ಕಥೆ ಮುಗಿಯಿತು ಎಂದೇ ಎಲ್ಲರೂ ಚಿಂತಿಸುತ್ತಾರೆ. ಆದರೆ, ಇಂತಹ ಮನುಷ್ಯರಿಗೆ ವಿರುದ್ಧ ದಿಕ್ಕಿನಲ್ಲಿ ಮಹಿಳೆಯೊಬ್ಬರು ತಮ್ಮ ಜೀವನ್ನು ಸಾಗಿಸುತ್ತಿದ್ದಾರೆ. ಹೆಚ್ಐವಿ ರೋಗಕ್ಕೆ ತುತ್ತಾಗಿದ್ದರೂ, ಸಾವಿನ ಭಯವನ್ನು ಬದಿಗಿಟ್ಟು ಇಂದು ಇತರರಿಗೆ ಮಾದರಿ ಮಹಿಳೆಯಾಗಿ ಹೊರಹೊಮ್ಮುತ್ತಿದ್ದಾರೆ.

ಯಾರು ಆ ಮಹಿಳೆ?...
ನಾಗರತ್ನ ಸುನಿಲ್ ರಾಮಗೌಡ (34) ಆ ಧೈರ್ಯವಂತ ಮಹಿಳೆಯಾಗಿದ್ದು, ಹೆಚ್ಐವಿ ರೋಗಕ್ಕೆ ತುತ್ತಾಗಿದ್ದರೂ, ಇತರರಿಗೆ ಪ್ರೇರಣೆಯಾಗಿದ್ದಾರೆ. ಆಶ್ರಯ ಫೌಂಡೇಶನ್ ನ್ನು ಸ್ಥಾಪಿಸಿರುವ ಇವರು ಹೆಚ್ಐವಿ ಹಾಗೂ ಏಡ್ಸ್ ರೋಗಕ್ಕೆ ತುತ್ತಾಗಿರುವವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.

ನಾಗರತ್ನ ಹಾಗೂ ಅವರ ಪತಿ ಇಬ್ಬರಿಗೂ ಹೆಚ್ಐವಿ ರೋಗವಿದೆ, ಆದರೆ, ರೋಗವನ್ನು ಎದುರಿಸಬಲ್ಲ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ. 19 ವರ್ಷಗಳ ಹಿಂದೆ ತಮಗಿರುವ ರೋಗದ ಬಗ್ಗೆ ತಿಳಿಯುತ್ತಿದ್ದಂತೆ ದಂಪತಿಗಳು ಆಘಾತಗೊಂಡಿದ್ದಾರೆ. ಎಲ್ಲರೂ ಅಂದುಕೊಳ್ಳುವಂತೆ ಸಾವಿನ ಭಯ ಇವರನ್ನೂ ಆವರಿಸಿದೆ. ಆದರೆ, ಮಕ್ಕಳೆಂಬ ಆಶಾಕಿರಣ ಬದುಕಬೇಕೆಂಬ ಆಸೆಯನ್ನು ಹುಟ್ಟಿಸಿದೆ. ಹೀಗಾಗಿ ಸಾವಿನ ಭಯಬಿಟ್ಟ ದಂಪತಿಗಳು ಇಂದು ಇತರೆ ರೋಗಿಗಳಿಗೆ ನೆರವಾಗುತ್ತಿದ್ದಾರೆ.

1997ರಲ್ಲಿ ನಮ್ಮ ವಿವಾಹವಾಗಿದ್ದವೆ. ನನಗಿನ್ನು 17 ವರ್ಷ ವಯಸ್ಸಾಗಿತ್ತು. ಮದುವೆಯಾದ 5 ತಿಂಗಳ ಬಳಿಕ ವೈದ್ಯರೊಬ್ಬನ್ನು ಸಂಪರ್ಕಿಸಿದ್ದೆವು. ಈ ವೇಳೆ ವೈದ್ಯರು ಆಘಾತಕಾರಿ ವಿಚಾರವನ್ನು ಹೇಳಿದ್ದರು. ಇನ್ನು 6-7 ತಿಂಗಳಷ್ಟೇ ನೀವು ಬದುಕುವುದು ಎಂದು ಹೇಳಿಬಿಟ್ಟಿದ್ದರು. ಆ ವೇಳೆ ನಾನು ಗರ್ಭಿಣಿಯಾಗಿದ್ದೆ, ಗರ್ಭಪಾತ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಮಾತು ಆಘಾತವುಂಟು ಮಾಡಿತ್ತು.

ವೈದ್ಯರ ಹೇಳಿದ ವಿಚಾರ ತಿಳಿದ ನಾವು ಹಲವು ದಿನಗಳ ಕಾಲ ಮನೆಯಿಂದ ಹೊರಬಂದಿರಲಿಲ್ಲ. ಆದರೆ, ಬದುಕಲು ಹಣ ಅನಿವಾರ್ಯವಾಗಿತ್ತು.  ನನ್ನ ಪತಿ ಆಟೋ ಚಾಲಕರಾಗಿದ್ದರು. ನಂತರ ಎಂದಿನಂತೆ ತಮ್ಮ ನಮ್ಮ ಕೆಲಸವನ್ನು ಮುಂದವರೆಸಿದ್ದೆವು.

ಆದರೆ, ನಮಗಿದ್ದ ರೋಗದ ಇಬ್ಬರೂ ಕುಟುಂಬದವರಿಗಾಗಲೇ, ಬೇರಾರಿಗೇ ಆಗಲಿ ಹೇಳಿಕೊಂಡಿರಲಿಲ್ಲ. ಆದರೆ, ಕೆಲ ದಿನಗಳ ನಂತರ ಸುನಿಲ್ ತನ್ನ ಗೌಪ್ಯತೆಯನ್ನು ಕಾಪಾಡುವ ತನ್ನ ಮೂವರು ಗೆಳಯರಿಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ಒಂದು ದಿನ ನಾನು ಅಳುತ್ತಿರುವುದನ್ನು ನೋಡಿದ್ದ ಸ್ನೇಹಿತರೊಬ್ಬರು ಪ್ರತಿ ಕ್ಷಣ ನನ್ನನ್ನು ನೀನೆ ಯಾಕೆ ಸಾಯುತ್ತಿದ್ದೀಯ. ಹುಟ್ಟು ಸಾವು ಎಂಬುದು ದೇವರ ನಿರ್ಧಾರ. ಅದನ್ನು ಅವರಿಗೆ ಬಿಟ್ಟು ಬಿಡಿ. ಇರುವಷ್ಟು ದಿನ ಬದುಕಲು ಪ್ರಯತ್ನಿಸಿ ಎಂದು ಸಲಹೆ ನೀಡಿದ್ದರು.

ಇದಾದ 5 ವರ್ಷಗಳ ನಂತರ ನನ್ನ ಕುಟುಂಬದವರಿಗೆ ನಾನೇಕೆ ಗರ್ಭಿಣಿಯಾಗುತ್ತಿಲ್ಲ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿತ್ತು. ನಂತರ ದಂಪತಿಗಳು ಡಾ.ಶಿವರಾಮ್ ಎಂಬ ವೈದ್ಯರನ್ನು ಸಂಪರ್ಕಿಸಿದ್ದಾರೆ. ಇವರ ವೈದ್ಯಕೀಯ ಮೇಲ್ವಿಚಾರಣೆಯಂತೆ ದಂಪತಿಗಳು ಎಚ್ಐವಿ ಋಣಾತ್ಮಕ ಮಗುವಾಯಿತು. ಮಗುವಾದ ನಂತರ ನಮ್ಮಲ್ಲಿದ್ದ ಹೆಚ್ಐವಿ ಭಯ ದೂರಾಯಿತು. ನಂತರ ಹೆಚ್ಐವಿ-ಏಡ್ಸ್ ಬಗ್ಗೆ ಜನರನ್ನು ಅರಿವು ಮೂಡಿಸಲು ನಿರ್ಧರಿಸಿದ್ದೆವೆಂದು ನಾಗರತ್ನ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಸುನಿಲ್ ಮೃತಪಟ್ಟಿದ್ದಾರೆ. ಆದರೆ, ನಾಗರತ್ನ ಅವರು ಮಾತ್ರ ಇಂದಿಗೂ ತಮ್ಮ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಹೆಚ್ಐವಿ ಪೀಡಿತ ಮಕ್ಕಳು ಹಾಗೂ ಜನರಿಗಾಗಿ ಸಾಕಷ್ಟು ಎನ್ ಜಿಒಗಳು ಕೆಲಸ ಮಾಡುತ್ತಿದ್ದಾರೆ. ನನ್ನ ಗಮನಕ್ಕೆ ಬಂದಿರುವ ಪ್ರಕಾರ ಹೆಚ್ಐವಿ ಇರುವ ಸಾಕಷ್ಟು ಮಂದಿ ಕೆಲಸಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಹೆಚ್ಐವಿ ಪೀಡಿತ ಮಹಿಳೆಯರಿಗಾಗಿ ಸ್ವಯಂ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿದ ಖ್ಯಾತಿ ನಾಗರತ್ನ ಅವರಿಗಿದ್ದು, ಇವರು ಸಾಮಾಜಿ ಹೋರಾಟಗಾರ್ತಿಯಾಗಿರುವ ಪ್ರಮಿಳ ಕಂದ್ರೋಲ್ಲಿ ಅವರ ಸಹಾಯದ ಮೂಲಕ ಆಶ್ರಯ ಫೌಂಡೇಶನ್ ನ್ನು ಸ್ಥಾಪಿಸಿದ್ದಾರೆ.

ನನಗಿರುವ ಹೆಚ್ಐವಿ ನೋವನ್ನು ಇತರೆ ಮಹಿಳೆಯರು ಹಾಗೂ ಮಕ್ಕಳು ಅನುಭವಿಸುವುದು ನನಗೆ ಇಷ್ಟವಿಲ್ಲ. ಹೆಚ್ಐವಿ ರೋಗವನ್ನು ಎದುರಿಸಲು ಶಕ್ತಿ ಬೇಕು. ಇಂತಹ ಶಕ್ತಿ ಎಲ್ಲರಿಗೂ ಬರುವುದಿಲ್ಲ. ಕೆಲವರಿಗೆ ಮಾತ್ರ ಈ ಶಕ್ತಿ ಇರುತ್ತದೆ. ಹೀಗಾಗಿ ಆಶ್ರಯ ಫೌಂಡೇಶನ್ ನ್ನು ಸ್ಥಾಪಿಸಿದ್ದು, ಈ ಮೂಲಕ ಹೆಚ್ಐವಿ ಪೀಡಿತರಿಗೆ ಕೌನ್ಸಿಲಿಂಗ್, ತರಬೇತಿ, ಶಿಕ್ಷಣ ಹಾಗೂ ಉದ್ಯೋಗಗಳನ್ನು ನೀಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೆಚ್ಐವಿ ಪೀಡಿತೆ ನಾಗರತ್ನ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT