ಮಕ್ಕಳ ಪಾದ 
ವಿಶೇಷ

ಅವಳಿ ಮಕ್ಕಳಾದ್ರೂ ಅಪ್ಪಂದಿರು ಬೇರೆ ಬೇರೆ!

ಸಹಜವಾಗಿ ಒಂದು ಮಗುವಿನ ಅಥವಾ ಅವಳಿ ಮಕ್ಕಳ ಡಿಎನ್ಎ ಒಂದೇ ಇರುವುದು ಸಾಮಾನ್ಯ. ಆದರೆ ಅವಳಿ ಮಕ್ಕಳಿಗೆ ಭಿನ್ನ ಅಪ್ಪಂದಿರಿರುವ ಅತ್ಯಂತ ವಿರಳ...

ಹನೊಯಿ: ಸಹಜವಾಗಿ ಒಂದು ಮಗುವಿನ ಅಥವಾ ಅವಳಿ ಮಕ್ಕಳ ಡಿಎನ್ಎ ಒಂದೇ ಇರುವುದು ಸಾಮಾನ್ಯ. ಆದರೆ ಅವಳಿ ಮಕ್ಕಳಿಗೆ ಭಿನ್ನ ಅಪ್ಪಂದಿರಿರುವ ಅತ್ಯಂತ ವಿರಳ ಎನ್ನಬಹುದಾದ ಪ್ರಕರಣವೊಂದು ವಿಯೆಟ್ನಾಂನಲ್ಲಿ ವರದಿಯಾಗಿದೆ.

ವಿಯೆಟ್ನಾಂ ಜೆನೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರೊ. ಲೆ ಡಿನ್ಹ ಲಾಂಗ್‌ ಹನೊಯಿಯಲ್ಲಿರುವ ತಮ್ಮ ಪ್ರಯೋಗಾಲದಲ್ಲಿ ಅವಳಿ ಮಕ್ಕಳ ಡಿಎನ್‌ಎ ಪರೀಕ್ಷೆಯ ವೇಳೆ ಭಿನ್ನ ಅಪ್ಪಂದಿರಿರುವ ಸಂಗತಿ ಬಯಲಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವದಾದ್ಯಂತ 2011ರವರೆಗೂ ಇಂತಹ ಏಳೇ ಏಳು ಪ್ರಕರಣಗಳು ವರದಿಯಾಗಿದ್ದವು. ವಿಯೆಟ್ನಾಂನಲ್ಲಿ ಇದು ಮೊದಲ ಪ್ರಕರಣ ಎಂದೂ ಅವರು ತಿಳಿಸಿದ್ದಾರೆ. ಅವಳಿ ಮಕ್ಕಳ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಅಂಡೋತ್ಪತ್ತಿ ಅವಧಿಯನ್ನು ಹೊರತುಪಡಿಸಿ ಒಂದರಿಂದ ಏಳು ದಿನಗಳ ಒಳಗೆ ಒಂದೇ ತಾಯಿಯ ಎರಡು ಅಂಡಾಣುಗಳು ಭಿನ್ನ ಪುರುಷರಿಂದ ಗರ್ಭ ಧರಿಸಿದರೆ ಇಂಥ ‘ಕೌತುಕ’ ಸಾಧ್ಯ ಎನ್ನುತ್ತಾರೆ ಲಾಂಗ್‌ . ಇನ್ನು ಆಸ್ಪತ್ರೆಯವರು ಮಕ್ಕಳನ್ನು ಅದಲು ಬದಲು ಮಾಡಿದರೆ ಎಂಬ ಅನುಮಾನವು ಸ್ಪಷ್ಟಗೊಂಡಿದ್ದು, ಇಬ್ಬರೂ ಮಕ್ಕಳ ತಾಯಿ ಒಬ್ಬಳೇ ಎಂದು ಡಿಎನ್ಎ ಪರೀಕ್ಷೆಯಲ್ಲಿ ಸ್ಪಷ್ಟವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!