ಅಲನ್ ರಾಬಿನ್ಸನ್ ಮತ್ತು ವಾಲ್ಟರ್ ಮ್ಯಾಕ್ಫಾರ್ಲೇನ್ 
ವಿಶೇಷ

ಬಾಲ್ಯದಿಂದ ಅತ್ಯುತ್ತಮ ಸ್ನೇಹಿತರಾಗಿದ್ದವರಿಗೆ 60 ವರ್ಷದ ಬಳಿಕ ತಿಳಿಯಿತು ಈ ಸತ್ಯ!

ಬಾಲ್ಯದಿಂದಲೂ ಅತ್ಯುತ್ತಮ ಸ್ನೇಹಿತರಾಗಿ ಬೆಳೆದಿದ್ದವರಿಗೆ ಬರೋಬ್ಬರಿ ಅರವತ್ತು ವರ್ಷಗಳ ನಂತರ ನಾವು ಸೋದರರು ಎಂಬ ಸತ್ಯ ಅರಿವಾಗಿದೆ!

ಹೊನಲುಲು: ಬಾಲ್ಯದಿಂದಲೂ ಅತ್ಯುತ್ತಮ ಸ್ನೇಹಿತರಾಗಿ ಬೆಳೆದಿದ್ದವರಿಗೆ ಬರೋಬ್ಬರಿ ಅರವತ್ತು ವರ್ಷಗಳ ನಂತರ ನಾವು ಸೋದರರು ಎಂಬ ಸತ್ಯ ಅರಿವಾಗಿದೆ! ಹೌದು, ಹವಾಯಿಯ ಇಬ್ಬರು ವ್ಯಕ್ತಿಗಳು ಈ ಅಚ್ಚರಿಗೆ ಸಾಕ್ಷಿಗಳಗಿದ್ದು ತಮ್ಮ ರಜಾ ದಿನಗಳಲ್ಲಿ ಅವರು ಸ್ನೇಹಿತರು ಹಾಗೂ ಕುಟುಂಬದವರಿಗೆ ಈ ವಿಚಾರ ಬಹಿರಂಗಪಡಿಸಿದ್ದಾರೆ.
ಅಲನ್ ರಾಬಿನ್ಸನ್ ಮತ್ತು ವಾಲ್ಟರ್ ಮ್ಯಾಕ್ಫರ್ಲೇನ್ ಎನ್ನುವ ಇಬ್ಬರು ವ್ಯಕ್ತಿಗಳೇ ಸ್ನೇಹಿತರಾಗಿದ್ದವರು ಸೋದರರಾಗಿ ಬದಲಾದವರು. ಹವಾಯಿಯ ಈ ಸ್ನೇಹಿತರು ತಾವು ಆರನೇ ತರಗತಿ ಓದುವಾಗ ಮೊದಲು ಭೇಟಿಯಾಗಿದ್ದರು. ಹೊನಲುಲು ಪ್ರಾಥಮಿಕ ಶಾಲೆಯಲ್ಲಿ ಇಬ್ಬರೂ ಒಟ್ಟಾಗಿ ಫುಟ್ ಬಾಲ್ ಆಡಿದ್ದರು.
ಮ್ಯಾಕ್ಫರ್ಲೇನ್ ಗೆ ತನ್ನ ತಂದೆ ಯಾರೆಂದು ತಿಳಿದಿರಲಿಲ್ಲ. ಗೊತ್ತಿರಲಿಲ್ಲ, ರಾಬಿನ್ಸನ್ ಅನ್ನು ಸಹ ಬೇರೊಬ್ಬರು ದತ್ತು ಸ್ವೀಕರಿಸಿದ್ದರು. ಇಬ್ಬರೂ ಪ್ರತ್ಯೇಕವಾಗಿ ತಮ್ಮ ಹೆತ್ತ್ವರ ಹುಡುಕಾಟದಲ್ಲಿ ತೊಡಗಿದ್ದರು. ಸಾಮಾಜಿಕ ಜಾಲತಾಣ ಹಾಗೂ ಇತರೆ ಮಾದ್ಯಮಗಳಲ್ಲಿ ತನ್ನ ಪೋಷಕರ ಮಾಹಿತಿ ಹುಡುಕುವಲ್ಲಿ ವಿಪಲನಾದ ಮ್ಯಾಕ್ಫರ್ಲೇನ್ ಅಂತಿಮವಾಗಿ ಡಿಎನ್ ಎ ಹಾಗೂ ಕುಟುಂಬದ ವಂಶವೃಕ್ಷದ ಮಾಹಿತಿ ಪಡೆಯಲು ಮುಂದಾದರೆಂದು ಹೊನಲುಲುವಿನ ಖೋನ್ ಟಿವಿ ಎನ್ನುವ ವಾರ್ತಾ ಸಂಸ್ಥೆ ವರದಿ ಮಾಡಿದೆ.
" ಅವರ ಹುಡುಕಾಟಕ್ಕೆ ನಾವೂ ಸಹಕರಿಸಿದ್ದು ಅದಕ್ಕಾಗಿ ನಾನೂ ಸಾಕಷ್ಟು ಪ್ರಯತ್ನ ನಡೆಸಿದ್ದೆವು" ಎಂದು ಮ್ಯಾಕ್ಫರ್ಲೇನ್ ನ ಸೋದರಿ ಸಿಂಡಿ ಮ್ಯಾಕ್ಫರ್ಲೇನ್ ಹೇಳಿದರು. ತನ್ನ ಕುಟುಂಬದ ಮೂಲಗಳ ಬಗೆಗೆ ಹುಡುಕಲು ರಾಬಿನ್ಸನ್ ಸಹ ಅದೇ ವೆಬ್ ಸೈಟ್ ಬಳಸಿದರು. ಅಂತಿಮವಾಗಿ ತಾನು ಸಹ ಮ್ಯಾಕ್ಫರ್ಲೇನ್ ನ ತಾಯಿಯಲ್ಲಿಯೇ ಜನ್ಮಿಸಿದ್ದೇನೆ ಎನ್ನುವುದನ್ನು ಅರಿತರು.
"ಇದು ಅಚ್ಚರಿಯ ವಿಚಾರ!".ಮ್ಯಾಕ್ಫರ್ಲೇನ್ ಹೇಳಿದ್ದು ಇಬ್ಬರೂ ವಾರಾಂತ್ಯದ ಸಂತೊಷಕೂಟದಲ್ಲಿ ತಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ತಾವು ಕಂಡುಕೊಂಡ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
"ನಾನು ಪಡೆದ ಅತ್ಯುತ್ತಮ ಕ್ರಿಸ್ ಮಸ್ ಉಡುಗೊರೆ ಇದು ಎಂದು ನಾನು ತಿಳಿದಿದ್ದೇನೆ" ಎಂದು ರಾಬಿನ್ಸನ್ ಹೇಳಿದ್ದು ಅವರಿಬ್ಬರೂ ತಮ್ಮ ನಿವೃತ್ತಿ ಜೀವನವನ್ನು ಒತ್ಟಾಗಿ ಆನಂದಿಸಲು ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT